ಕಡಲಿಗೂ ಲಾಕ್ ಡೌನ್

ಕಾವ್ಯ ಸಂಗಾತಿ

ಕಡಲಿಗೂ ಲಾಕ್ ಡೌನ್

ವೈ.ಜಿ.ಅಶೋಕ್ ಕುಮಾರ್

ಕಡಲಿನ್ನೂ ಶಾಂತವಾಗಿಲ್ಲ
ಅಲೆಗಳ ಅಬ್ಬರಕೆ
ಗೀಚಿದ ನಾಳೆಗಳು ಕಾಣೆಯಾಗಿವೆ

ಬಣ್ಣ ಬಣ್ಣದ
ಮೀನುಗಳು
ಫುಟಿದೇಳುತ್ತಿವೆ
ಹರಿದ ಬಲೆಗಳನ್ನು
ಮತ್ತೆ ನೇಯಬೇಕಿದೆ

ದೋಣಿಗಳು
ಸಾಲಾಗಿ ನಿಂತಿವೆ
ಸಹ ಪ್ರಯಾಣಿಕರಿಲ್ಲದೆ

ಹೀಗೆ ಕಡಲು
ಮೀನು
ಬಲೆ ಮತ್ತು ದೋಣಿ ಅನಾಥವಾಗಿದ್ದು
ಇದೇ ಮೊದಲ ಸಲ
**********************

Leave a Reply

Back To Top