ಯಾಕೊಳ್ಳಿಯವರ ‘ಟಂಕಾ’

ಕಾವ್ಯ ಸಂಗಾತಿ

ಟಂಕಾ

ಯಾಕೊಳ್ಳಿ ಯ.ಮಾ


ನಂಜು‌ ನಾಲಗೆ
ಬರಿ ವಿಷ ಕಕ್ಕುತ್ತೆ
ಸ್ವಚ್ಛ ಎದೆಯು
ಎಲ್ಲವನೂ ಅಪ್ಪುತ್ತೆ
ನಿರ್ಮಲವ ಮಾಡುತ್ತೆ


ದ್ವೇಷಿಸುವದು
ತಡವಲ್ಲ , ಪ್ರಿತಿಯು
ಮೂಡಲು ವರ್ಷ
ಮೂಡಿದ ಪ್ರೀತಿಯದು
ಜೀವನದುದ್ದ ಸ್ತಿಥ


ಯಾರೊ ನಡೆದ
ಹಾದಿಯಲಿ ಚಲನೆ
ಇರಲಿ ಒಮ್ಮೆ
ನಿನ್ನದೆ ದಾರಿಯಲಿ
ನಡೆ ನೀ ಮಗದೊಮ್ಮೆ


ಎಲ್ಲ ಸಂಕಟ
ದುಃಖವೂ ಹೋಗುವುದು
ತಾಳ್ಮೆಯಲಿರೆ,
ಸಹನೆಯೊಂದೆ ದಾರಿ
ಯಶವು ಬೇಕೆಂದರೆ


ನಾನು ,ನನ್ನದು
ನಿಜ ,ಆದರಿದು ಆ
ಮತ್ತೊಬ್ಬನದೂ,
ಅರಿತರೆ ನೆಮ್ಮದಿ
ಮರೆತರಷ್ಟೇ ಸಜೆ


Leave a Reply

Back To Top