ಕಾವ್ಯ ಸಂಗಾತಿ
ಈ ಕಲ್ಲು….!!!
ವೇಣು ಜಾಲಿಬೆಂಚಿ
ಈ ಕಲ್ಲು
ಆವಾಗಿನಿಂದಲೂ
ದಿಟ್ಟಿಸಿ ನೋಡುತ್ತಿದೆ
ತನ್ನನು ಪೂಜಿಸುತಿದ್ದ
ಹೃದಯ ಕಲ್ಲಾಗಿದ್ದುದಕ್ಕೆ
ಶತಮಾನಗಳಿಂದ ಮೈದುಂಬಿ
ಕಂಡುಂಡ ಕ್ಷೀರಾಭಿಷೇಕ
ರಕ್ತದ ಹೊನಲಾಗಿ
ಹರಿದದ್ದಕ್ಕೆ…!
ಜೀವದ ಕಣಗಳು
ನಿರ್ಜೀವ ಗೊಂಬೆಗಳಾಗಿ
ಉಸಿರಾಟದ ನಳಿಕೆಗಳು
ಥೇಟ್ ಹದ್ದಿನ ಕಣ್ಣುಗಳಾಗಿ
ಬಂದೂಕಿನ ಸದ್ದುಗಳಾದದ್ದಕ್ಕೆ….!
ದಿಟ್ಟಿಸಿ ನೋಡುತ್ತಿದೆ
ಈ ಕಲ್ಲು
ಆವಾಗಿನಿಂದಲೂ…..!
ರಕುತದಲ್ಲೇ ಜೀವಪಡೆದ ಮನುಜ
ರಕ್ತದಾಹಿಯಾದದ್ದು ಇತಿಹಾಸದ ಚೋದ್ಯ…!
ಕಲ್ಲುಕಟೆದು ಶಿಲೆ ಮಾಡಿದ ಮನುಜ
ಶಿಲೆಯೊಡೆದು ಕಲ್ಲು ಹುಡುಕುತಿದ್ದಾನೆ….!
ಹಡೆದ ತಾಯಿ ಮತ್ತೆ ರೋಗಗ್ರಸ್ತಳಾಗುವಳೆ..?
ಕೈಶುಧ್ಧಿ ಬಾಯ್ ಶುಧ್ಧಿ ಮನಃಶುಧ್ಧಿ ಎಲ್ಲಿ ಹೋಯಿತೆಂದು
ಈ ಕಲ್ಲು
ಆವಾಗಿನಿಂದಲೂ
ದಿಟ್ಟಿಸಿ
ನೋಡುತ್ತಿದೆ…!!!!
ವೇಣು ಜಾಲಿಬೆಂಚಿ
What’s on a view! Of that stone!?
Mortel things says Immortal ways
Our poet says, here everyone thing
Have been lived in art of heartily…
Today humanity less than man
Culture is gone to cruel world to
That stones are crying and saw
What’s happening in man World.
Totally understand those who
Things are not change, but it’s
Man being something different
So looking always the same stone.
……. Your’s… Thimmaiah RS
I am very proud of you sir….