ಮಕ್ಕಳು ಹುಟ್ಟಿಸೋ ಅಂಗಡಿ

ಕಥಾ ಸಂಗಾತಿ

ಮಕ್ಕಳು ಹುಟ್ಟಿಸೋ ಅಂಗಡಿ

ರಂಗಸ್ವಾಮಿ ಮಾರ್ಲಬಂಡಿ

Indian Woman With Her Newborn Daughter Bishnoi Village Stock Photo -  Download Image Now - iStock

“ಲೇ ಭಾಗ ನನಗೆ ಮಗ ಹುಟ್ಟ್ಯಾನ ಎಂತದೊ ತಂದೆ ರಜೆ ಇದಾವಲ್ಲ ಅದು ಅರ್ಜಿ ಬರ್ದು ತಹಸೀಲ್ ಆಫೀಸ್ ಗೆ ಕೊಡು” ಅಂತ ಪೊನ್ ಮಾಡಿದಾಗ ಅವ “ವಲ್ಲೆ ಅಂದಿ ಅರ್ಜಿ ಹಾಕಕ” ಎಂಬ ಅವನ ಪ್ರತಿ ಉತ್ತರಕ್ಕೆ ನಾನು , ಇಲ್ಲ ಒಂದು ಅಂಗಡಿ ಇಡಬೇಕಾಗಿದೆ ಮಕ್ಕಳ ಹುಟ್ಟಿಸೋ ಅಂಗಡಿ ಅದ್ಕ ಕೆಲಸ ಆಯ್ತೆ..! ಹಾಕು ಅಂದೆ,

ಮಕ್ಕಳ ಹುಟ್ಟಿಸೋ ಅಂಗಡಿ..! ಇದೆಂಥದು ಲೇ…!

ಹ್ಞೂ..! ಬಂದೋರಿಗೆಲ್ಲ ಮಕ್ಳು ಹುಟ್ಟಿಸೋದೆ ಕೆಲ್ಸ ನೋಡು ಆ ಅಂಗಡಿದು, ನೀನು ಬರ್ತೀಯೇನು ಕೆಲ್ಸಕ..?

ಮಕ್ಳು ಹುಟ್ಟಿಸೋದು ಅಂದ್ರೆ ಏನು ಮರಾಯ ದಿನಂದುಗಾಲ ಮಾಡಕಾಗಬೇಕಲ್ಲ ಅಂಗಡಿಟ್ ಮೇಲೆ

ಹ್ಞೇ… ನಾವು ಮಾಲೀಕರು ಲೇ ಅಂಗಡಿಟ್ಟ ಮೇಲೆ ನಾವೇ ಮಾಡಂಗಿಲ್ಲ ನಾವು ಟೈಮ್ ಪ್ರಕಾರ ಅಂಗಡಿಗೆ ಬರೋದು ಅಲ್ಲೆ ವರೆಗೆ ನಮ್ಮ ಕೈಯಾಗ ಕೆಲಸ ಮಾಡೋರೆ ಮಾಡ್ತಾ ಇರ್ತಾರೆ

ಕೈಯಾಗ ಕೆಲ್ಸ ಮಾಡೋರು..? ಎಷ್ಟು ಮಂದಿ ಬೇಕಾತಾರೇನು..?

ಒಂದು ಐದು ಮಂದಿ ಗಂಡ್ಸರು ಐದು ಮಂದಿ ಹೆಂಗ್ಸರು

ಹೆಂಗಸ್ರು…! ಹೆಂಗ್ಸರ್ಯಾಕೋ ದೋಸ್ತ

ಹ್ಞೂನೋ ಗಂಡು ಗಿರಾಕಿಗೆ ಮಕ್ಳು ಹುಟ್ಟಿಸಾಕ ಬೇಕಲ್ಲ ಮತ್ತೆ ಅದ್ಕೆ ಹೆಂಗ್ಸರು ಕೂಡ ಇರಬೇಕು…!

__

 ಸಮಯ ಮಧ್ಯಾಹ್ನ ಒಂದು ಘಂಟೆ ಆಗಿತ್ತು ನಾನು ನೌಕರಿ ಮುಗ್ಸಿಕೊಂಡು ಮನೆ ಕಡೆ ಪ್ರಯಾಣ ಬೆಳೆಸಿದ್ದೆ ಕಿವಿಯಲ್ಲಿ “ಅಮ್ ಅಮ್ಮಮ್ಮೋ” ಅಂತ ರವಿಚಂದ್ರನ ಸಾಂಗ್ ಗುಣುಗುತಿತ್ತು ಇಷ್ಟರಲ್ಲೆ ಪೋನ್ ಬರಲು ಶುರುವಾಯಿತು ಹೆಂಡತಿದು ಮೊನ್ನೆ ತಾನೆ ಗಂಡುಮಗ ಹುಟ್ಟಿದ್ದ ದೋಸ್ತರೆಲ್ಲ ಪಾರ್ಟಿ ಕೊಡು, ಪಾರ್ಟಿ ಕೊಡು ಅಂತ ಕಲೆಬಿದ್ದಿದ್ರು ನನ್ಗೂ ಕೊಡಬೇಕು ಅಂತ ಇದ್ರೂನೂ ಮನದಲ್ಲೆ ಮಗ ಹೆಂಡತಿ ಮೊದ್ಲು ಊರು ಸೇರ್ಲಿ ಅಂತ ಅನ್ಕೊಂಡು ಸುಮ್ನೆ ಆಗಿದ್ದೆ.

“ಹ್ಞೇ.. ಏನಾ ಆದೋನಿಗಂತ ಬರ್ತೀಯೇನು” ಅಂದ್ಲು

ಅದಕ್ಕ ನಾನು ಕೂಡ ಬಾ ಅಂದರೆ ಬರ್ತೀನಿ..

ಹೂ ಬಾ ನನ್ನ ಬೇರೆ ಆಸ್ಪತ್ರೆಗೆ ಚೆಕ್ ಮಾಡಾಕೆ ಕರಕೊಂಡು ಹೋಗ್ತಾರಂತ

ಸರಿ ಬರ್ತೀನಿಡು ಅಂತ ಪೋನ್ ಕಟ್ ಮಾಡಿ ಹೋಗಲು ಶುರು ಮಾಡಿದೆ ಅಲ್ಲೆ ವರಗೆ ಸುಮ್ಮನೆ ಇದ್ದ ನನ್ನ ಮನಸಿನ ಮೂವರು ಸಂಗಾತಿಯರು ಮಾತನಾಡೋಕೆ ಶುರು ಮಾಡಿದ್ರು ನಾನು ಸುಮ್ಮನೆ ಇರಂಗಿಲ್ಲ ಅವರಿಗೆ, ನಾನು ಯಾವಗಾಲೂ ಒಂದಿಲ್ಲೊಂದು ಕೆಲ್ಸದಾಗ ಬ್ಯುಸಿ ಇರಬೇಕು ಇಲ್ಲಂದ್ರೆ ನನ್ ಜೊತೆ ಯಾರಾದ್ರು ಮಾತನಾಡ್ತ ಇರಬೇಕು ಅದು ಇಲ್ಲಂದ್ರೆ ಅವರು ಬಂದು ನನ್ ಜೊತೆ ಸುದ್ದಿ ಹೇಳಾಕ ನಿಂದ್ರುತಾರೆ ಎದುರಿಗೆ ಮಾತ್ರ ನೋಡಿದ್ರೂ ನೋಡಲಾರದಂಗೆ ಹೋಗ್ತಾರೆ.

ಮೊದಲ್ನಾಕೆ ಕೋಸ್ಗಿ ಹುಲಿಗೆಮ್ಮ ಎರಡನೇದಾಕೆ ಭಾಗಮ್ಮ ಮೂರನೇದಾಕೆ ಸಂಜನಾ ಅಂತ ಮೊದಲಿಬ್ರು ಪೊನ್ ನ್ಯಾಗ ಮಾತನಾಡಿದ್ರು ಅವ್ರು ನೆನಪಾಗ್ತಾರೆ ಅಂದ್ರೆ ಒಂದು ಅರ್ಥ, ಈ ಮೂರ್ನೆದಾಕೆ ಏನಿಲ್ಲ ಎದ್ರಾಗಿಲ್ಲ ಸುಮ್ ಸುಮ್ಮನೆ ನೆನಪಾಗ್ತಾಳೆ ಎಂಬ ನನ್ ಮನಸ್ಸಿನ ಪ್ರಶ್ನೆಗೆ ಈಗಾಗಲೇ ನಾನೇ ಕಂಡುಕೊಂಡ ಸಿದ್ದ ಉತ್ತರ ಅವರು ನನ್ನ ನೆನಪು ಮಾಡಿಕಂಡಿರ್ತಾರೆ ಅದ್ಕ ನನಗೆ ಅವರು ನೆನಪು ಆಗ್ತಾರೆ ಎಂಬ ಭ್ರಮೆಯು ನನಗೂ ಖುಷಿ ಕೊಡುತಿತ್ತು…

ಇಷ್ಟರೊಳಗೆ ಹರಿವಾಣ ಬಂದು ಮನೆಯಲ್ಲಿದ್ದ ಕಾರು ತೆಗೆದ್ರೊಳಗೆ ಮತ್ತೊಂದು ಪೊನ್…!

 ಬಂದೆ ಬಂದೆ ಅಂತ ಅನ್ನದ್ರೊಳಗೆ ನಮ್ ಭಾಮೈದ “ಮಾಮ ಕರ್ನೂಲು ಗೆ ಹೋಗಬೇಕಂತೆ ಬೇಗ ಬಾ” ಅಂದ….

ಅಲ್ಲಿವರಗೆ ಸುಮ್ಮನಿದ್ದ ನನ್ ಶರೀರ ಸ್ವಲ್ಪ ಆತುರ ಪಟ್ಟು ಹೋಗಲು ಶುರುಮಾಡಿದೆ.

ಕಾರು ನಮ್ಮೂರು ಕ್ರಾಸ್ ದಾಟಿತು, ಹಳ್ಳ ದಾಟಿತು, ಅಕ್ಕಿ ಗಿರಿಣಿ ದಾಟಿತು ಬಗ್ಲಾಗ ಇರೊ ಇಟಿಗಾಳ್ ದಾಟಿತು ಕೂಡ್ಲುರ್ ಬರೋದ್ರೊಳಗೆ ಮತ್ತೆ ಭಾಗಮ್ಮ ಬಂದ್ಳು, ನನ್ಗೆ ಮಗ ಹುಟ್ಟಿದಾನೆ ಅಂತ ತನ್ ದೋಸ್ತಿ ರಂಜನಾ ಗೆ ಹೇಳ್ ತಿದಾಳೆ ಅದಕ್ಕವಳು ನಿನ್ ಮಗ ಹೇಗೆ ಆಗ್ತಾನೆ ಅವನು ಮತ್ತು ಅವಳ ಮಗ ಇಲ್ಲ ಅವ ನನ್ ಮಗ ಕೂಡ…!

 ಅವ ಕಳ್ಸತಾನೆ ಎಲ್ಲರನ್ನು ಪ್ರೀತಿ ಮಾಡೋದು.

ನಿನಗೆ ಮಗ ಹುಟ್ಟಿದರೆ..?

ನನಗೆ ಮಗ ಹುಟ್ಟಿದರೆ ಅವ ಕೂಡ ಅವ್ನ ತಮ್ಮನಾಗಿ ಬೆಳಿತಾನೆ ಅಂತ ಅವರಿಬ್ಬರ ನಡುವಿನ ಸಂಭಾಷಣೆ ನನ್ ಮನದಲ್ಲಿ ನಡೆದಿತ್ತು ಕೂಡ್ಲುರ್ ನಲ್ಲಿ ಸ್ಪೀಡ್ ಬ್ರೇಕರ್ ಭಾಗಮ್ಮಳ ಮಾತಿಗೆ ಬ್ರೇಕ್ ಹಾಕಿ ಇನ್ಮೇಲೆ ಸಂಜನಾ ಮಾತನಾಡೋಕೆ ಶುರು ಮಾಡಿದ್ಳು, ವಾಸ್ತವವಾಗಿ ಅವಳು ಮಾತಮಾಡುತ್ತಿಲ್ಲ ಸುಮ್ಮನೆ ನೋಡ್ತಿದಾಳೆ ಅದು ಅಷ್ಟೆ ನಿಜ ಜೀವನದಲ್ಲಿ ಕೂಡ ಆಕೆ ಅದನ್ನೆ ಮಾಡಿದ್ದು. ಅವಳ ಮೌನ ಸಹಿಸಲಾರದ ನನ್ ಮನದಲ್ಲಿ ಕೋಸ್ಗಿ ಹುಲಿಗೆಮ್ಮ ಬಂದ್ಳು ಅವಳ ಚಿತ್ರ ಬಂದ ತಕ್ಷಣವೇ ಮನಸ್ಸು ಪ್ರತಿಭಟನೆಗೆ ಇಳಿಯಿತು ಅವಳು ಆ ಬಸಣ್ಣ ನ ಪ್ರೀತಿ ಮಾಡಿ ಮದುವೆ ಆದ್ಳು ಆಕೆ ಬಂದ್ರು ನನ್ ಮನಸ್ಸಿನಲ್ಲಿ ಜಾಗ ಇಲ್ಲ..!

ಅಲ್ಲಿಂತ ಮನಸು ಆದೋನಿ ಟ್ರಾಫಿಕ್ ಕಡೆ ಒರಳಿತು ಜನ ಜಂಗುಳಿ  ಇರ್ಕಟ್ಟು ರೋಡ್ ಗಳು ನಾವು ಹಿಂದುಳಿದೀವಿ ಅಂತ ನಮ್ ನಗರ ನಿರ್ಮಾಣಗಳೆ ಹೇಳತಿರ್ತಾವೆ ಅದೋನಿ ಕೂಡ ಅದನ್ನೆ ಹೇಳ್ ತಿತ್ತು.

ಸೀದಾ ಹೋಗಿ ನನ್ ಹೆಂಡತಿ ಹಡ್ದ ಆಸ್ಪತ್ರೆಗೆ ಹೋದೆ ಅಲ್ಲಿ ನಮ್ ಭಾಮೈದ ಕಾರು ಏರಿದ.

ಏನಂದ್ರು ಡಾಕ್ಟ್ರು..?

ಎದೆ ಸುತ್ತಾ ನೀರು ಇರ್ತಾವೆ ಅಂತ ಮಾಮ ಬಟ್ ಈಯಮ್ಮಗೆ ಜಾಸ್ತಿ ಇದಾವಂತೆ ಅಂದ…

ಎದೆಗಾ ನೀರು..?  ಎದೆ ಸುತ್ತ ನೀರು ಯಾವುದು ಗೊತ್ತಿಲ್ಲ ಬಟ್ ಸಮಸ್ಯೆ ಮಾತ್ರ ದೊಡ್ಡದು ಅಂತ ಅರ್ಥ ಆಯಿತು..! ಅಲ್ಲಿಂದ ಸೀದ ಊರು ಹೊರಗ ಇರೊ ಆಸ್ಪತ್ರೆ ಮುಂದೆ ನಿಲ್ಲಿಸಿದೆ.ನಾನು ಕಾರು ಇಳಿದು ಒಳ ಹೋಗೊದ್ರೊಳಗೆ ನಮ್ ಅಮ್ಮ ನನ್ ಮಗನ ಕರ್ಕೊಂಡು ಹೊರ ಬಂದ್ಳು ಇನ್ನೊಂದು ದಾರಿಯಿಂದ ನನ್ ಹೆಂಡತಿ ಮತ್ತ ಅವಳನ್ನ ಹಿಡಕೊಂಡು ಅವರಮ್ಮ ಇಬ್ರು ಕಣ್ ತುಂಬ ನೀರು ತುಂಬಿಕೊಂಡು ಬಂದ್ರು ನನ್ ನೋಡಿ ನನ್ ಹೆಣ್ತಿ ಬಂದು ನನ್ ಮೇಲೆ ಬಿದ್ದು ಅಳೋಕೆ ಶುರುಮಾಡಿದ್ಳು.. ನಾನು “ಯಾಕೆ ಅಳ್ತಿ ಲೇ ಕರ್ನೂಲು ಅಲ್ಲ ಹೈದರಾಬಾದ್ಗೆ  ಹೋಗೋಣು ಸುಮ್ಮನಿರು ನಾನಿಲ್ಲ” ಅಂತ ಹೇಳಿ ನಾನೇ ಕರ್ಕೊಂಡು ಬಂದು ಕಾರಿನ ಹಿಂದಿನ ಸೀಟಿನಲ್ಲಿ ಕೂಡಿಸಿ ಕರ್ನೂಲ್ ನತ್ತ ಪ್ರಯಾಣ ಬೆಳೆಸಿದೆ.

ಕಾರು ಎಮ್ಮನೂರು ಸಮೀಪ ಬಂದಿದೆ ಮನಸ್ಸಿಗೆ ಮತ್ತೆ ರೆಕ್ಕೆ ಬರೋಕೆ ಶುರು ಆಯ್ತು. ಏನಾದ್ರೂ ಆದ್ರೆ ಮುಂದೆ ಜೀವನ…! ಇಲ್ಲ ಇಲ್ಲ ಏನು ಆಗಲ್ಲ ಆಗಕ ಬಿಡಲ್ಲ ಜೋಬಾಗಿರೊ ಹತ್ ಸಾವ್ರ ಹೋಗ್ಲಿ ಇನ್ನ ಅಕೌಂಟ್ ನ್ಯಾಗ ಇರೊ ರಕ್ಕಹೋಗ್ಲಿ ಅದು ಆಗಲಿಲ್ಲ ಅಂದ್ರೆ ಯೋನೊ ಯಾಪ್ ನ್ಯಾಗ ಆರ್ ಲಕ್ಷ ಸಾಲ ಎತ್ತಿ ತೋರ್ಸೋದು…!ಎಲ್ಲಿ ತೋರ್ಸಿತಿ ಕೆಲವೊಂದು ನಮ್ ಕೈಯಾಗ ಏನು ಇರಲ್ಲ ಇದು ವಾಸಿ ಆಗಲ್ಲ ಅಂದ್ರೆ..! ಹಂಗ ಅನ್ನಲ್ಲ ,ಇಲ್ಲ ಅಂತಾರೆ ಅವಾಗ ಏನ್ ಮಾಡ್ತಿ ಇನ್ನೊಂದು ಮದುವೆ ಆಗ್ತಿ…? ಇನ್ನೊಂದು ಮದುವೆ ಮತ್ತೆ ಭಾಗಮ್ಮ ಬಂದ್ಳು ನಾನು ನಿನ್ ಮಗನ ಚೆಂದ ನೋಡ್ಕೋತಿನಿ ತಾ ಅಂತಿದಾಳೆ..!

ನನ್ ಹೆಣ್ತಿ ಅಮ್ಮ ಅಪ್ಪ ಹೇಗೆ ನನ್ ಹೊರಾಗ ಬಿಡ್ತಾರೆ ಅವರ ಸಣ್ ಮಗಳು ಕೊಟ್ಟು ಮದುವೆ ಮಾಡ್ತಾರೆ ಇಲ್ಲ ಇಲ್ಲ ಅಕೆ ಸಣ್ಣಾಕೆ ಆಗ್ತಾಳೆ ಬೇಡ ನಾನು ಮದುವೆ ಆಗಲ್ಲ ಆಯಿತು ಎಲ್ಲರೂ ನೊಂದುಕೊಂಡು ಸಾಯಿಲಿ ಭಾಗಮ್ಮ ಸಂಜನಾ ಕೋಸ್ಗಿ ಹುಲಿಗೆಮ್ಮ ಎಲ್ರೂ ಸಾಯಿಲಿ ಅಂತ ಮನಸ್ಸು ಮತ್ತೆ ವಿವಾದದಿಂದ ಹೊರಬಂದಾಗ ನಮ್ಗೆ ಕರ್ನೂಲು ಸಮೀಪ ಬಂದಿತ್ತು.

ಕಾಣದ ಊರು ಒಂದ್ಸಾರಿನೂ ಬಂದಿಲ್ಲ ಮೊದಲು ತೋರಿಸಿದ ಡಾಕ್ಟರ್  ಅವರು ಬರೆದು ಕೊಟ್ಟಿದ್ದು ಬಿಟ್ಟು ಬೇರೆ ಡಾಕ್ಟರ್ ಹತ್ರ ಹೋಗಬೇಕಂತೆ ನಮ್ ಮಾಮ ಪೊನ್ ಮಾಡಿದ್ದ, ನನ್ ಚಿಕ್ಕಮ್ಮನ ಸೊಸೆಯ ಸೋದರಮಾವ ಇಲ್ಲಿ ಡಾಕ್ಟರ್ ಇದಾನೆ ಅದ್ಕೆ ಅವನ್ ಮಾತು ಕೇಳೊದು ಈ ಹಿಂದೆ ನಮ್ ಮಾಮ ಅಂದರೆ ನನ್ ಹೆಂಡತಿ ತಂದೆ ಕೂಡ ಕಿಡ್ನ್ಯಾಗ ಹಳ್ಳು ಬಿದ್ದಾವಂತ ಅತ್ನೆ ಹಿಡಿಕೊಂಡು ತೋರ್ಸಿಕೊಂಡ, ಆಮೇಲೆ ಆತ ಬೆಂಗ್ಳೂರು ಗೆ ಹೋಗಬಂದ್ರು ಕಡಿಮೆ ಆಗಲಿಲ್ಲ ಅದೇನೊ ಏನ್ ಕತೆ ಕೌತಾಳ್ ದಾಗ ಒಬ್ಬರು ಜೋಗಮ್ಮವ್ವ ಬಂದು ಕೋಸ್ಗಿ ಯಲ್ಲಮ್ಮ ದೇವರು ಜಾತ್ರೆ ಮಾಡು ಅಂದಿದ್ಳು ಅಂತೆ ಅದ್ಕ ಆತ ಕೋಸ್ಗಿ ಯಲ್ಲಮ್ಮಗೆ ಸನ್ ಮಾಡಿಕೊಂಡು ಬಂದ ತಕ್ಷಣ ಕಡಿಮೆ ಆಗಿತ್ತು ಅಂತ ನನ್ ಹೆಂಡತಿ ಹೇಳಿದ್ದ್ಳು. ಕೂಡಲೇ ನನ್ ಮನಸು ಕೂಡ ನಮ್ ಅಮ್ಮ ಮುನಿರಾಬಾದ್ ಹುಲಿಗೆಮ್ಮ ದೇವರು ಮಾಡ್ತೀನಿ ಅಂತ ಸಣ್ ಮಾಡಿಕೊಂಡಿದ್ದು ನೆನಪಾಯ್ತು ಈ ಹಿಂದೆ ನಾನು ದೇವರೆ ದೇವರೆ ಕಾಪಡಪ್ಪ ಅಂತ ಕಷ್ಟ ಸಮಯದಾಗ ಕೈಮುಗಿತಿದ್ದೆ ಆದರೆ ಅವ್ನುಗೂ ಕೂಡ ನಾ ಕೈ ಮುಗಿದೋ ಇಷ್ಟ ಇಲ್ಲ ಅನ್ಸುತ್ತೆ ಅದ್ಕೆ ನಾ ಏನು ಕೇಳಿದ್ರೂ ಮಾಡಿಲ್ಲ ಮಾಡೋದು ಇಲ್ಲ ಅವ ಮಾಡೋದು ತನಗೆ ಬೇಕಿದ್ದಿದ್ದು ಅಷ್ಟೆ…!

 ಕರ್ನೂಲ್ ನಲ್ಲಿ ಆಸ್ಪತ್ರೆ ಸಿಗೊವಲ್ದು ಕಾರ್ ಆಕಡೆ ಈ ಕಡೆ ಸುತ್ತುತಾ ಇದೀನಿ ಪೊನ್ ಗಳು ಮಾತ್ರ ಮತ್ತೆ ಮತ್ತೆ ಬರ್ತೀದಾವೆ, ಬರ್ತಾನೆ ಇದಾವೆ ಎಲ್ಲಿ ಏನು ಎತ್ತ ಅಂತ…?! ನಾನು ಲೇ ಬಸವ ಮೊದ್ಲು ಪೊನ್ ಕಟ್ ಮಾಡಿ ಗೂಗಲ್ ನಲ್ಲಿ ಮ್ಯಾಪ್ ಹಾಕು ಅಂತ ಗದಿರಿದೆ ಅವ ಕಟ್ ಮಾಡಿ ಗೂಗಲ್ ಹಾಕಿದ ಆಸ್ಪತ್ರೆಗೆ ಹೋದ್ವಿ ಅಲ್ಲೆ ವರಗೆ ಜೊತೆಗಿದ್ದ ಎಲ್ರೂ ದೂರ ಸರಿದ್ರು ನಮ್ ಅಮ್ಮಗೆ ಮನೆಯಿಂದ ಪೊನ್ ಬಂತು ನಮ್ ಅಕ್ಕ ಅಂದರೆ ನನ್ ಹೆಂಡತಿ ತಾಯಿ ಆಕೆ ನನ್ ಮಗನ ಎತ್ತಿಕೊಂಡು ಕೂತ್ಳು, ಅವ ನಮ್ ಭಾಮೈದ ಹೊರ್ಗ ಹೋದ ಆಸ್ಪತ್ರೆ ದೊಡ್ಡದು ಇದೆ ನೋಡೊಕೆ ಡಾಕ್ಟರ್ ಬಂದ್ರು ಏನೇನೊ ಕೇಳಿದ್ರು ಪಕ್ಕದಲ್ಲಿದ್ದ ಆಸ್ಪತ್ರೆಗೆ ಹೋಗ ಅಂದ್ರು ನಾನು ಅವಳು ಇಬ್ಬರೆ..! ಅವಳು ಮತ್ತೆ ಭಯ ಬರತಿದೆ ಅಂತ ಅಳ್ತಾ ನನ್ ಮೇಲೆ ಬಿದ್ಳು ನಾನು ಮತ್ತೆ ಸೊಕ್ಕನ್ನು ಪ್ರದರ್ಶನ ಮಾಡಿದೆ ” ಯಾಕ ಅಳ್ತಿ ನಾನಿಲ್ಲ ನಾನು ತೋರ್ಸತೀನಿ ಎಲ್ಲಿಗಾದ್ರು ಹೋಗಿ” ಎಷ್ಟಾದರೂ ಹೋಗ್ಲಿ ಅನ್ಬೇಕು ಅನ್ಕಂಡೆ ಆದರೆ ಧೈರ್ಯ ಸಾಲಲಿಲ್ಲ…!

     ಅಸ್ಪತ್ರೆ ಒಳಗೋಗಿ ನಿಮಿಷದಲ್ಲಿ ಹೊರಬಂದ್ಳು ಏನಾಯ್ತು ಅಂದೆ ಅದಕ್ಕವಳು ಹೇಳ್ದೆ ಬಂದೆ ಅಂದ್ಳು..! ಬಗ್ಲಾಗ ಇರೊ ಇನ್ನೊಬ್ಬ ಹೆಂಗಸು “ವೆಯ್ಯಿ ಇವ್ವಂಡಿ” ಅಂದ್ಳು ನಾನು ಸಾವ್ರ ತೆಗೆದು ಕೈಯಾಗಿಟ್ಟೆ ಆಕೆ ಕಂಪ್ಯೂಟರ್ ನಿಂದ ಏನೊ ತೆಗಿತಿದ್ಳು ಅಷ್ಟರೊಳಗೆ ಅವ ಹೊರಗ ಬಂದ ಡಾಕ್ಟ್ರು ಫುಲ್ ಇನ್ ಮಾಡಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಮ್ ಡಿ.ಸಿ. ಆಫೀಸ್ನಲ್ಲಿ ಇರೋ ಡಿ.ಸಿ ಬಂದಂಗೆ ಯಾರ್ನೂ ಮಾತಾಡ್ಸದೆ ಹೊಂಟ ಅವ್ಳು ತೆಗೆದ ಪೆಪರ್ ಗೆ ಸೈನ್ ಗೀಸಿ.

    ಮತ್ತೆ ಮರಳಿ ಬಂದ್ವಿ ಮೊದ್ಲು ತೋರಿಸಿದ ಆಸ್ಪತ್ರೆಗೆ ಅಷ್ಟರೊಳಗ ಅವ ನಮ್ ಡಾಕ್ಟ್ರು ಬಂದಿದ್ದ ಅವಳ್ನ ಮಾತಡ್ಸಿ “ಏಮ್ಕಾದು ಏಮ್ಕಾದು” ಅಂದ “ನುವ್ವೆಂದಕು ಅಟ್ಲುಂಡಾವ್ ನುವ್ವೆ ಭಯಪಡಿತೆ ಎಟ್ಲ” ಅಂತ ನನ್ನ ವಿಚಾರಿಸಿದ ನಾನು ಭಯ ಬಿದ್ದಿನೇನೊ ಗೊತ್ತಿಲ್ಲ ಅವ ಗುರಿತಿಸಿದ..! ನಾನು ಏನ್ ಆಗಿಲ್ಲ ಏನ್ ಆಗಿಲ್ಲ ಅಂದೆ ಅದ್ಕೆ ಅವ ಮತ್ತೆ ರಾ ಬಯ್ಟಪೋದಮ್ ಅಂದ ಹೊರ್ಗ ಬಂದ್ವಿ ಮನಸ್ಸು ತಾಳಲಿಲ್ಲ ಅವ್ನ ಬಿಟ್ಟು ಬೇರೆ ದಾರಿಗೆ ಬಂದೆ ಕಣ್ಣಲ್ಲಿ ನೀರು ತನ್ನಿಂದ್ ತಾನೆ ಹೊರ ಬರೋಕೆ ಶುರು ಆದ್ವು ನಾನು ಧೈರ್ಯ ಹೀನ ನಾಗಬಾರದು ಅಂತ ಮನಸ್ಸು ಹೇಳ್ತಿದೆ ಆದ್ರೂ ಧೈರ್ಯ ಸಾಕ್ ಆಗ್ತಿಲ್ಲ ಮತ್ತೆ ಅತ್ತೆ, ಕೈಯಾಗಿರೊ ಕರ್ಚೀಫ್ ತಗಂಡು ಕಣ್ ಒರೆಸಿಕೊಂಡೆ ಮತ್ತೆ ವಾಪಸು ಅವರತ್ರ ಹೋದೆ ಭೋನ್ ಚೆಯ್ಯಿ ಅಂದ ಆತ ನಾನು ವಲ್ಲೆ ಅಲ್ಲಿ ಅಮ್ಮನವರ ಜೊತೆ ತಿಂತೀವಿ ಅಂತ ಕನ್ನಡದಲ್ಲಿ ಉತ್ತರಕೊಟ್ಟೆ

 ಹ್ಞೂ ಪಾರ್ಸಲ್ ಕಟ್ಟು ಅಂತ ಹೋಟೆಲ್ ನವನಿಗೆ ಆದೇಶ ಕೊಟ್ಟು ದುಡ್ಡು ಕೊಟ್ಟ ನಾನು ಬೇಡ ಅಂದ್ರು ಕೊಟ್ಟ..! ಮತ್ತೆ ಆಸ್ಪತ್ರೆ ಒಳಗೆ ಬಂದ್ವಿ ಆಗ ಮೇಲೆ ಹೋದ್ರು ಅಂದ್ರು, ಮೇಲೆ ಹೋಗಿ ನೋಡಿದೆ ICU ಅಂತ ಬರೆದಿತ್ತು ಒಳ ಹೋದೆ ನನ್ ಹೆಂಡ್ತಿ ಬೆಡ್ ಮೇಲೆ ಮಲಗಿ ನನ್ನೆ ನೋಡ್ತಿದ್ಳು..

 “ಸಾರ್ ಇಕ್ಡ ರಂಡಿ ಇವಿ ತೀಸ್ಕೋರಂಡಿ” ಅಂತ ಸಿಸ್ಟರ್ ಕರೆದಳು.

ಅವಳ ಕೊಟ್ಟ ಚೀಟಿ ತಗಂಡು ಮೆಡಿಕೆಲ್ ಹೋಗಿ ಟೈಮ್ ನೋಡಿದೆ ಸರಿಯಾಗಿ ಹನ್ನೊಂದು ಅವಾಗಿಂದ ಅದು ತಾಂಬ ಇದು ತಾಂಬ ಅಂತ ಒಂದುಘಂಟೆ ವರ್ಗೂ ತಿರುಗಿದೆ ಆಮೇಲೆ ಕೆಳಗಡೆ ಇರೊ ರಿಸೆಪ್ಷನ್ ಹತ್ರ ಕುಂದ್ರಾಕಾಗಿದ ಕುರ್ಚಿ ಮೇಲೆ ಜನ ಮಲಗಿದ್ರು ಅದ್ನ ನೋಡಿ ನಾನು ಮಲಗಿದೆ.ಮುಂಜಾನೆ ಎದ್ದಾಗ ಸಮಯ ಆರು ಆಗಿತ್ತು ಕೆಳಗೋದೆ ಅಲ್ಲೊಂದು ಟೀ ಅಂಗಡಿ ಅವರತ್ರ ಮುಖ ತೊಳೆಯೊ ನೀರಿಸ್ಕಂಡು ಮುಖ ತೊಳೆದು ಒಂದು ಚಾಯ್ ಕುಡಿದೆ ಆಗ ನನ್ ಚಟಕ್ಕೆ ಮತ್ತೆ ನಾನು ಬಂದಂಗೆ ಆಯ್ತು ಅದ್ಕೆ ಬಿಡಪ್ಪ ಜನ ಯಾವುದಾದರೂ ಒಂದು ಚಟ ಇರಬೇಕಂತಾರೆ ಅಂತ ಅನ್ಕೊಂಡು ಒಂದು ಮೂರು ಚಾ ಪಾರ್ಸಲ್ ಮಾಡಿಕೊಂಡು ಮೇಲೆ ಹೋದೆ ಪಕ್ಕದಲ್ಲಿದ್ದ ಅಮ್ಮನವರಿಗೆ ಟೀ ಕೊಟ್ಟು ಒಳಹೋದ್ರೆ ಅವಳು ಮಾತ್ರ ಮಲಗಿದ್ಳು ಮುಖ ಬಾಡಿತ್ತು, ತುಟಿ ಒಣಗಿತ್ತು, ಬೇಜಾರ್ ಆಯ್ತು ಹೊರ್ಗಬಂದು ಇನ್ನೊಂದು ಚಾ ಕುಡಿದೆ ಮತ್ತೊಂದು ಹೀಗೆ ಹನ್ನೊಂದ್ರ ವರಗೆ ಕುಡಿದೆ ಆಮೇಲೆ ಅವ್ರಗೇನಾದ್ರು ಟಿಫಿನ್ ಅನ್ಕಂಡೆ ನಮ್ ಬಸವ ಕೊಟ್ಟಿದ್ದ, ಹನ್ನಂದಕ್ಕೆ ಮತ್ತೆ ಐಸಿಯು ನಲ್ಲಿ ಹೋದೆ ಅಲ್ಲಿ ನರ್ಸು ನಿಮಗೆ ರಾತ್ರಿ ಬ್ಲಡ್ ತೀಸ್ಕೊರಮ್ಮನಿ ಚೆಪ್ಪಿಂಟಿಮಿ ಅಂದ್ಳು ಹ್ಞೂ ಅಂತ ಚೀಟಿ ತೋರಿಸಿದೆ ಹೂ ನಡೀರಿ ಅಂದ್ಳು ಬ್ಲಡ್ ಸ್ಯಾಂಪಲ್ ಕೈಯಾಗಿಟ್ಟು,ಆ ಅಸ್ಪತ್ರೆ ಇರೋದು ಗಾಯತ್ರಿ ಎಸ್ಟೇಟ್ ನಲ್ಲಿ ಅಲ್ಲಿ ಸುಮಾರು ಇನ್ನೂರಕ್ಕು ಅಧಿಕ ಅಸ್ಪತ್ರೆ ಇದಾವೆ ಅಲ್ಲಿ ಪ್ರತಿ ಮನೆಯಲ್ಲೊಂದು ಕ್ಲೀನಿಕ್ಕೊ ಅಥವಾ ಸ್ಪೆಷಲಿಷ್ಟೊ ಯಾರೊ ಒಬ್ಬರು ಇರ್ತಾರೆ ಅಲ್ಲಿ ಮಾತ್ರ ಬ್ಲಡ್ ಬ್ಯಾಂಕ್ ಇಲ್ಲವೇನೊ ಅವಳು ಅಲ್ಲೆಲ್ಲೊ ಸುಮಾರು ಹತ್ತು ಕಿಲೋಮೀಟರ್ ದೂರ ಇರೊ ಬ್ಯಾಂಕ್ನಲ್ಲಿ ಬರ್ದಾಳೆ ಅವಾಗ ನಾವು ಅದರ ಅಡ್ರೆಸ್ ಹುಡುಕಾಕ ಮತ್ತೆ ನಮ್ ಡಾಕ್ಟ್ರಗೆ ಪೋನ್ ಮಾಡಿದಾಗ ಅವ ಪೊನ್ ಮೊದ್ಲು ಆ ಅಸ್ಪತ್ರೆ ಮಂದಿಗೆ ಕೊಡು ಅಂದ ನಮ್ ಬಸವ ಫೊನ್ ಕೊಟ್ಟ ನಾನು ನಿಂತಿದ್ದೆ “ಲೇದ್ ಸಾರ್ ಲೇದ್ ಸಾರ್ ಮಾಕು ತೆಲೀದು ಅಂತಿದ್ದ” ಆಮೇಲೆ ಪೋನ್ ಇಟ್ಟು ಪಕ್ಕದಲ್ಲಿದ್ದ ಬಿಲ್ಡಿಂಗ್ ತೋರ್ಸಿ “ಇಂದುಲೋ ಅಡುಗು ಅಂದ್ರು” ನಾವು ಬ್ಲಡ್ ಬ್ಯಾಂಕ್ ಹೆಸ್ರು ಓದಿ ಒಳಹೊಕ್ಕೆವು ನಮಗೂ ಧೈರ್ಯ ಇತ್ತು ಒಂದುವೇಳೆ ಅವ್ರು ಇಲ್ಲಂದ್ರೆ ನಾನು ನನ್ ರಕ್ತೆ ಕೊಡಬೇಕು ಅಂತ ನಿರ್ಧಾರ ಕೂಡ ಮಾಡಿದ್ದೆ, ಈ ಹಿಂದೆ ರೆಗ್ಯುಲರ್ ಚೆಕಪ್ ಗೆ ಹೋದಾಗ ಅವಳ್ದು ನನ್ದು ಒಂದೇ ಗುಂಪು ಅಂತ ಗುರಿತಿಸಿದ್ದೆ ಅವತ್ತು ಕೂಡ ಕೋಸ್ಗಿ ಹುಲಿಗೆಮ್ಮ ನೆನಪಾಗಿದ್ಳು ಆಕೆ ನನ್ ರಕ್ತ ನಿನ್ದು ಒಂದೇ ಆಗಿಲ್ಲ ಅಂತ ಪೊನ್ ನಲ್ಲಿ ಬೇಜಾರ್ ಆಗಿದ್ದು ಬಿಟ್ಟುಹೋಗಿದ್ದು ಎಲ್ಲ ನೆನಪಾಗಿದ್ವು ಈಗ್ಲೂ ನೆನಪಾದ್ವು,ಸಮಯ ಸಂಜೆ ಐದು ಆಗಿತ್ತು ನನ್ ಹೆಂಡ್ತಿ ನ ಬಿಟ್ಟು ನಮ್ ಮಾಮ, ನಾನು, ನಮ್ ಅಕ್ಕ ಮತ್ತೆ ನಮ್ ಅಮ್ಮ ಎಲ್ರು ಸಭೆ ಸೇರಿದಾಗ ನಮ್ ಮಾಮ ಕಡಿಮೆ ಆಗಿದಂತೆ ಬಿ.ಪಿ ನಾರ್ಮಲ್ ಇದೆ ಅಂತ ಅಂದ ನಾನು  ಅಲ್ಲಿಂದ ಎದ್ದೆ ದೇಹಕ್ಕೆ ಹೊಸ ಉತ್ಸಾಹ ಬಂದಿತ್ತು ಹೆಂಡತಿನ ನೋಡೊಕೆ ಹೋದೆ ಕಣ್ಣಲ್ಲಿ ನೀರು ಬರ್ತಿದ್ವು ಹಂಗೆ ಹೋದೆ ಅವ್ಳು ಮಲಗಿದ್ಳು ವಾಪಸು ಬಂದೆ ಡಬಲ್ ಚಾಯ್ ಕುಡಿದು ಮತ್ತೆ ಹೋದೆ ಅವ್ಳು ಎದ್ದಿದ್ಳು ಸಮೀಪ ಹೋದೆ ಆರಾಮಾಗಿದೆ ಅಂತ ಅಂದೆ ಯಾವಾಗ ಹೋಗೋದು ಮನೆಗೆ ಅಂದ್ಳು ಮಲ್ಲಣ್ಣ ಬರ್ಲಿ ಕೇಳ್ತೀನಿ ಅಂದು ಹೊರಬಂದೆ.

ಎಲ್ಗೊ ಗೊತ್ತಿಲ್ಲ ಸುಮ್ಮನೆ ಹೊಂಟೆ ದೇಹದಲ್ಲಿ ಉತ್ಸಾಹ ,ಕಣ್ಣಲ್ಲಿ ನೀರು, ಭಯ ವಿಲ್ಲದ ನಡಿಗೆ ಹೊಂಟಿತ್ತು ಮುಂದೆ ಹೋದೆ ಬಟ್ಟೆ ಅಂಗಡಿ ಕಂಡಿತು ಮುಂಜಾನೆ ಯಿಂದ ಹಲ್ ತಿಕ್ಕಿಲ್ಲ ಸ್ನಾನ ಮಾಡಿಲ್ಲ ನೆನಪಾಯಿತು ನಾಳೆ ಮಾಡೋಣ ಅನ್ಕಂಡೆ ವಾಪಸು ಬಂದೆ ಕೆಳಗೆ ಕುಂತೆ ಇವತ್ತು ಜವಬ್ದಾರಿ ಕಮ್ಮಿ ನಮ್ ಮಾಮ ಬಂದಾನ ನೋಡ್ಕತಾನೆ ಅನ್ಕಂಡು ಮಲಿಗಿದೆ, ಎದ್ದೆ , ಚಾಯ್ ಕುಡಿದೆ ಮತ್ತೆ ಮೇಲೊದೆ ನೋಡಿದೆ ವಾಪಸು ಬಂದೆ ಅಲ್ಲೆ ಕೂತೆ ಡಾಕ್ಟ್ರು ಯಾರು ಇಲ್ಲ ಹನ್ನೊಂದು ಆಯ್ತು ಡಾಕ್ಟ್ರು ಇಲ್ಲ ಆಸ್ಪತ್ರೆ ತುಂಬಾ ಜನ ಕೆಲ್ಸ ಮಾಡೋರು ಇದಾರೆ ಆದ್ರೆ ಡಾಕ್ಟರಿಲ್ಲ ಬೋರ್ಡ ಇದಾವೆ ಎಮ್ ಎಸ್, ಎಮ್ ಡಿ,ಅಂತ ನಾನು ಮತ್ತೆ ಬಂದು ಚಾಯ್ ಕುಡಿದೆ ವಾಪಸು ಬಂದೆ ಇನ್ನು ಬಂದಿಲ್ಲ ಹನ್ನೆಲ್ಡು ಆಗಿದೆ ಮತ್ತೆ ಐ ಸಿ ಯು ನಲ್ಲಿ ಯಾರ್ ನೋಡ್ತಾರೆ ನರ್ಸ್ ಗಳೊ ..?! ಆರ್ ಎಮ್ ಪಿ ಡಾಕ್ಟ್ರು ಗಳೊ ಗೊತ್ತಿಲ್ಲ ನಾನು ಒಂದು ಆಸ್ಪತ್ರೆ ಇಡಬೇಕು ನಮ್ಮೂರಾಗ ಜನ್ರಿಗೆ, ರಕ್ಕ ಬೇಕಲ್ಲ…?!ಬರ್ತಾವೆ ಬರ್ತಾವೆ ಕಾಯಿ ಅನ್ಕಂಡು ಮತ್ತೆ ಡಾಕ್ಟ್ರ ರೂಮ್ ಕಡೆ ನೋಡಿದೆ ಅವ ಇನ್ನ ಬಂದಿಲ್ಲ…! ಅಲ್ಲ ಮಾರಾಯ ಬಡಗನ ಮಕ್ಕಳ ಹುಟ್ಟಿಸೊ ಅಂಗಡಿ ಆದ್ರೆ ಹೇಗೆ ಅಂತ ಅಲೋಚನೆ ಬಂತು ಭಯ ಬಂತು, ನಾಚಿಕೆ ಆಯ್ತು ಎದ್ದು ಹೋದೆ ಮಗನತ್ರ, ಹೆಂಡ್ತಿ ಕೂಡ ಕೆಳಗೆ ಬಂದಾಳ ಸುದ್ದಿ ಹೇಳ್ ತಿದಾಳೆ ಮಾತನಾಡಿದೆ ಒಂದು ತಾಸು ಸುಮ್ನೆ ಕೂತೆ ಸಿನ್ಮಕ್ ಹೋಗ್ಲ ಅಂದೆ ಹೋಗು ಅಂದ್ಳು ಪಕ್ಕದಲ್ಲಿದ್ದ ನೀರು ಕುಡಿದು ಭಯ ಬೇಜಾರ್ ಎಲ್ಲ ಬಿಟ್ಟು ಟಾಕೀಸ್ ಕಡೆ ನಡಿಗೆ ಆರಂಭಿಸಿದೆ.

ರಂಗಸ್ವಾಮಿ ಮಾರ್ಲಬಂಡಿ

One thought on “ಮಕ್ಕಳು ಹುಟ್ಟಿಸೋ ಅಂಗಡಿ

Leave a Reply

Back To Top