ನೆನೆಯುವೆ ಕವಿತೆಯಲಿ
ತ್ರಿವೇಣಿ ಜಿ.ಹೆಚ್.
ಮಾತು ಮಾತಿಗೂ ಕೋಪ
ಮನಸು ಮುನಿದ ರೂಪ..
ಈಗ ಕೇಳು!
ರಾಧೆಯ ಮನದಲಿ ಪರಿತಾಪ…
ಸರಿಸು ಮೌನವ ಕೊಳಲ ಆಲಾಪದಲಿ.
ಆದರೀಗ, ರಾಧೆ
ಒಲವ ಹಾಸಿ ನಿನ್ನ ಅರಸಿ
ಭಜಿಸಿ ಪೂಜಿಪಳು…
ಮರಳಿ ಬಿಡು ಬಿದಿರ ಕೊಳಲು ನುಡಿಸಲು..
ಹುಸಿ ಮುನಿಸು ತಣಿಸಲು
ಮಾತು ಮೌನ ಬೆಸೆದು ಒಳಗೆ..
ಶರಣಾಗಲಿ ಮನದೊಳಗೆ.
ಮಾಧವ, ಬಾರದೆ ಸರಿಯದಿರು…
ಬರೆದು ನೆನೆಯುವೆ ಕವಿತೆಯಲಿ.
**********
Beautiful
ಅಹಾ….!!!! ಆಲೌಕಿಕ ಆನಂದವುಂಟಾಯಿತು ನಿಮ್ಮ ಕವಿತೆಯನ್ನೋದಿ…