ಶರಣ ವಿಶ್ವರಾಧ್ಯ ಸತ್ಯಂಪೇಟೆ ಅವರ ಜನ್ಮದಿವೂ..

ವಿಶೇಷ ಲೇಖನ

ಶರಣ ವಿಶ್ವರಾಧ್ಯ ಸತ್ಯಂಪೇಟೆ ಅವರ ಜನ್ಮದಿವೂ..!

ಲಿಂಗಣ್ಣ ಸತ್ಯಂಪೇಟೆ ಅವರ ‘ಬಸವ ಮಾರ್ಗ’ ಎಂಬ ಮಾಸಿಕವು ಅದೊಂದು ಕಾಲಕ್ಕೆ ಬಹು ಮುಖ್ಯವಾದ ಪತ್ರಿಕೆಯಾಗಿತ್ತು..!

ಈಗಲೂ ಅಷ್ಟೇ ಅವರ ಮಗನಾದ ವಿಶ್ವರಾಧ್ಯ ಸತ್ಯಂಪೇಟೆ ಅವರ ಸಾರಥ್ಯದಲ್ಲಿ ಆ ‘ಬಸವ ಮಾರ್ಗ’ ಪತ್ರಿಕೆಯು ಬಹುಜನಪ್ರೀಯ, ಹಾಗೂ ಗಂಭೀರವಾದ ಶರಣರ ಅದರಲ್ಲೂ ಬಸವಣ್ಣನವರ ನಡೆ -‍- ನುಡಿಯನ್ನು ಸಾರುವ ಪತ್ರಿಕೆಯಾಗಿದೆ. ಈ ಪತ್ರಿಕೆಯನ್ನು ಇದೇ ವಿಶ್ವರಾಧ್ಯ ಸತ್ಯಂಪೇಟೆ ಅವರು ನಡೆಸುತ್ತಿದ್ದಾರೆ..!

ಹಾಗೆಯೇ ವಿಶ್ವರಾಧ್ಯ ಸತ್ಯಂಪೇಟೆ ಅವರ ತಮ್ಮನಾದ ಸತ್ಯರಂಜನ್ ಸತ್ಯಂಪೇಟೆ ಅವರು ‘ಶರಣ ಮಾರ್ಗ’ ಎಂಬ ಗಂಭೀರವಾದ ಮಾಸಿಕವನ್ನು ನಡೆಸುತ್ತಿದ್ದಾರೆ. ಅವರೂ ಬಹುಗಂಭೀರವಾದ ಶರಣರ ನಡೆ, ನುಡಿಯನ್ನು ಅಲ್ಲದೇ ಶರಣರ ವಚನ ಸಾಹಿತ್ಯವನ್ನು ಬಲುರೋಚಕ ಹಾಗೂ ಬಲು ಗಂಭೀರವಾಗಿ ಪ್ರತಿಪಾದಿಸಿಸುತ್ತಿದ್ದಾರೆ..!

ಈ ವಿಷಯವನ್ನು ಈಗೇಕೆ ಹೇಳುತ್ತಿದ್ದೇನೆ ಅಂದರೆ ಇತ್ತೀಚೆಗೆ ಈ ‘ಬಸವ ಮಾರ್ಗ’ದ ವಿಶ್ವರಾಧ್ಯ ಸತ್ಯಂಪೇಟೆ ಅವರು ತಮ್ಮ ಹುಟ್ಟಿದ ಹಬ್ಬವನ್ನು ಆಚರಿಸಿಕೊಂಡರು. ಅಂದರೆ ವಿಶ್ವರಾಧ್ಯ ಸತ್ಯಂಪೇಟೆ ಅವರ ಜನ್ಮ ದಿನದ ಪ್ರತಿಕ್ರಿಯೆಯಾಗಿ ಈ ಬರಹವನ್ನು ಬರೆಯುತ್ತಿದ್ದೇನೆ.

ವಿಶ್ವರಾಧ್ಯ ಸತ್ಯಂಪೇಟೆ ಮೂಲತಃ ಯಾದಗಿರಿ ಜಿಲ್ಲೆಯವರು. ಅದರಲ್ಲೂ ಸುರಪುರ ತಾಲೂಕಿನ ಸತ್ಯಂಪೇಟೆಯವರು.

ತಂದೆಯವರಾದ ಹಿರಿಯ ಲೇಖಕ, ಚಿಂತಕ, ಪತ್ರಕರ್ತ ಲಿಂಗಣ್ಣ ಸತ್ಯಂಪೇಟೆ ಅವರು ಬಹು ಹಿಂದೆಯೇ ಬಸವಣ್ಣನವರ ಅನುಯಾಯಿಗಳು..!

ಅಲ್ಲದೇ ಇವರ ತಾಯಿಯಾದ ಶಾಂತಮ್ಮ ಸತ್ಯಂಪೇಟೆಯವರೂ ಲಿಂಗಣ್ಣ ಸತ್ಯಂಪೇಟೆ ಅವರಂತೆಯೇ ಅವರ ಜೊತೆಯಲ್ಲಿ ವಚನಕಾರರ ಜೀವನದಂತೆ ಬಾಳಿದವರು..!

ಇಂತವರ ಮಗನಾದ ವಿಶ್ವರಾಧ್ಯ ಸತ್ಯಂಪೇಟೆ ಅವರು ಬಿ.ಎ ಮುಗಿಸಿ, ಡಿಪ್ಲೋಮಾ ಇನ್ ಜರ್ನಲಿಸಂ ಪೂರ್ಣಗೊಳಿಸಿದವರು. 

ಹವ್ಯಾಸಿ ಪತ್ರಕರ್ತರೂ ಆದವರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯೂ ಹಾಗೂ ಸತ್ಯಂಪೇಟೆಯವರ ಬಸವಮಾರ್ಗ ಪ್ರತಿಷ್ಠಾನದ ಅಧ್ಯಕ್ಷರೂ ಆಗಿದ್ದಾರೆ..!

ಈ ಪ್ರತಿಷ್ಠಾನದಿಂದ ಪ್ರತಿ ತಿಂಗಳು ‘ಬಸವ ಬೆಳಕು’ ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ, ‘ಮನೆಯಲ್ಲಿ ಮಹಾಮನೆ’ ಶೀರ್ಷಿಕೆಯಡಿ ಬಸವ ತತ್ವ ಪ್ರಚಾರ —

ಪ್ರಸಾರವೇ ಜೀವಾಳವಾಗಿರಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ..!

ಇಂತಹ ವಿಶ್ವರಾಧ್ಯ ಸತ್ಯಂಪೇಟೆ ಅವರ ಸಾಹಿತ್ಯ ಕೃಷಿಯೂ ಅವರ ಬಹು ಇಷ್ಟದ ಹವ್ಯಾಸವಾಗಿದೆ. ಚಿತ್ತ ಚೋರರು, ಬಸವಣ್ಣ ಮತ್ತು ಲೋಹಿಯಾ, ನಿನಗೆ ಕೇಡಿಲ್ಲವಾಗಿ, ಹರಕೆಯ ಕುರಿಗಳು, ಧರ್ಮ ಮತ್ತು ದಗಲ್ಬಾಜಿಗಳು, ಮಠದೊಳಗಣ ಬಾವುಗಗಳು, ಎನ್ನನದ್ದಿ ನೀನೆದ್ದು ಹೋಗು, ಅಜ್ಞಾನದ ಕೇಡು, ಕಂಗಳ ಮುಂದಿನ ಬೆಳಕು, ಮಠದ ಗೂಳಿಗಳು, ದೇವರ ಹುಡುಕುತ್ತ, ಕಾವಿಯೊಳಗಿನ ಕೆಂಡ, ಕಲ್ಲದೇವರ ಮಾಡಿ, ಅಧರಕ್ಕೆ ಕಹಿ, ಉದರಕ್ಕೆ ಸಿಹಿ, ಮುಗಿಲ ಮರೆಯ ಮಿಂಚು, ಅಪ್ಪನನ್ನು ಅರಸುತ್ತ, ಪ್ರಳಯಾಂತಕರು, ಕಲ್ಯಾಣದ ಪ್ರಣತೆಯಲ್ಲಿ, ಬಸವಮಾರ್ಗ, ಅಪ್ಪನ ನೆನಪುಗಳು ಅವರ ಪ್ರಕಟಿತ ಕೃತಿಗಳು..!

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಇಳಕಲ್ಲಿನ ಚಿತ್ತರಗಿ ಮಠದಿಂದ ಈ ವಿಶ್ವರಾಧ್ಯ ಸತ್ಯಂಪೇಟೆ ಅವರಿಗೆ ‘ಬಸವ ಕಾರುಣ್ಯ ಪ್ರಶಸ್ತಿ,’ ಚಿತ್ರದುರ್ಗದ ಮುರುಘಾಮಠದ ಬಸವ ಕೇಂದ್ರದಿಂದ ‘ಶರಣ ದಂಪತಿಗಳು’ ಪ್ರಶಸ್ತಿ, ‘ಮಾನವ ಬಂಧುತ್ವ ವೇದಿಕೆ ಕರ್ನಾಟಕ’ ವತಿಯಿಂದ ‘ಮಾನವ ಬಂಧುತ್ವ’ ಪ್ರಶಸ್ತಿ, ‘ದಲಿತ ಸಂಘರ್ಷ ಸಮಿತಿ’ಯಿಂದ ‘ಪೆರಿಯಾರ’ ಪ್ರಶಸ್ತಿ, ‘ಬಸವ ಜ್ಯೋತಿ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿ,– ಗೌರವಗಳು ಲಭಿಸಿವೆ..!

ಇಷ್ಟು ವಿಶ್ವರಾಧ್ಯ ಸತ್ಯಂಪೇಟೆ ಅವರ ಬಗೆಗೆ ಹೇಳಲೇಬೇಕಾದ ವಿಷಯಗಳು ಎನ್ನತ್ತಾ ಈ ವಿಶ್ವರಾಧ್ಯ ಸತ್ಯಂಪೇಟೆ ಅವರಿಗೆ ಮತ್ತೊಮ್ಮೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಕೋರುತ್ತಾ ಈ ಲೇಖನವನ್ನು ಮುಗಿಸುತ್ತೇನೆ..!


 ಕೆ.ಶಿವು.ಲಕ್ಕಣ್ಣವರ

Leave a Reply

Back To Top