ನದಿಯಂತೆ.

ಕಾವ್ಯ ಸಂಗಾತಿ

ನದಿಯಂತೆ.

ಪ್ರೊ ವಿಜಯಲಕ್ಷ್ಮಿ ಪುಟ್ಟಿ

close up of red roses flowers and white jasmines flowers garland on the street market near by god temple of Hindu, street flowers garlands market

ನನಗೊಮ್ಮೆ ಅನಿಸುತ್ತದೆ
ನಾನೊಂದು ನದಿಯಂತೆ ಹರಿಯಬೇಕು
ಪ್ರಶಾಂತವಾಗಿ
ಯಾರ ಅಡೆತಡೆಯಿಲ್ಲದೆ
ಯಾರ ಹಂಗಿಗೆ ಒಳಗಾಗದೆ
ನನಗೆ ಇಷ್ಟ ಬಂದಂತೆ
ಕಟ್ಟಲಾಗದು ಆಣೆಕಟ್ಟು
ನನ್ನ ಭಾವಗಳಿಗೆ
ಹಾಕಲಾಗದು ಸರಪಳಿಯ
ನನ್ನ ತನುವಿಗೆ
ಹರಿಯಲಿ ಬಿಡಿ
ಅದು ಬೇಕಾದಲ್ಲಿಗೆ
ತನಗಿಷ್ಟಬಂದಂತೆ
ಬೇಕಾದ ಗಮ್ಯದೆಡೆಗೆ
ಬೆಟ್ಟ-ಗುಡ್ಡಗಳ ಜಿಗಿದು ಉಬ್ಬುತಗ್ಗುಗಳ ಸರಿದು
ಕೊರಕಲು ಸೇರಿ
ಬಯಲ ಹರವಿ
ಒಮ್ಮೊಮ್ಮೆ ಆಕಸ್ಮಿಕ
ಪ್ರವಾಹ ಹಾನಿ
ಹುಚ್ಚು ಹೊಳೆ
ರಚ್ಚು ಕೊಳೆ
ಕೊನೆಗೊಮ್ಮೆ ಮುಟ್ಟಿ
ಗಮ್ಯ ಸ್ಥಾನ
ಶಾಂತ ಪ್ರಶಾಂತ
ನಿಶಾಂತ ಹರವು
ನದಿ ಪಾತ್ರ
ಯಾರ ಅಂಕೆಯಲ್ಲಿರದ
ನಿರಾತಂಕತೆ


Leave a Reply

Back To Top