ಅಂಕಣ ಬರಹ

ಸಾಧಕಿಯರ ಯಶೋಗಾಥೆ

ಸಮಾಜಿಕ ಕಾರ್ಯಕರ್ತೆ

ಮತ್ತು ಶಿಕ್ಷಕಿ

ಶಾಹೀನ್ ಮಿಸ್ಟ್ರೀ (1971)

ಶಾಹೀನ ಅವರು ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತೆ ಮತ್ತು ಶಿಕ್ಷಕಿಯಾಗಿದ್ದಾರೆ. ಇವರು 16 ಮಾರ್ಚ್ 1971 ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರ ತಂದೆಯವರು ಹಿರಿಯ ಬ್ಯಾಂಕ್ ಅಧಿಕಾರಿಯಾದ್ದರಿಂದ ಶಾಹೀನ ಅವರು 5 ದೇಶಗಳಲ್ಲಿ ಬೆಳೆದಳು. ಇವರು ತಮ್ಮ 18 ನೇ ವಯಸ್ಸಿನಲ್ಲಿ ಮುಂಬೈಗೆ ಮರಳಿ ಬಂದರು. ಮುಂಬೈ ವಿಶ್ವವಿದ್ಯಾಲಯದಲ್ಲಿ ಪದವಿಗಾಗಿ ಇವರು ಪ್ರವೇಶವನ್ನು ಪಡೆದರು. ಮುಂಬೈಯಲ್ಲಿರುವ ಕೊಳಗೇರಿಗಳ ಬಗ್ಗೆ ಮತ್ತು ನಗರ ಜೀವನದ ಕುರಿತು ತಿಳಿದುಕೊಳ್ಳಲು ಪ್ರಯತ್ನಿಸಿದರು. ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿರುವ ಅಸಮಾನತೆ, ತಾರತಮ್ಯಗಳಿರುವುದರ ಕುರಿತು ತಾವು ವಿದೇಶಗಳಲ್ಲಿದ್ದಾಗ ಕೇಳಿದ್ದರು. ಆದರೆ ಇವರು ಕಣ್ಣಾರೆ ಕಂಡಾಗ ತುಂಬಾ ಬೇಸರ ವ್ಯಕ್ತಪಡಿಸಿದರು. ಬಿ.ಎ ಪದವಿಯನ್ನು ಮುಂಬೈ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಎಂ.ಎ ಪದವಿಯನ್ನು ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಿಂದ ಪಡೆದರು. ಶಾಹೀನ್ ಅವರು ‘ರೀ-ಡ್ರಾಯಿಂಗ್ ಇಂಡಿಯಾ’ ಎಂಬ ಪುಸ್ತಕವನ್ನು ಬರೆದಿರುವರು.

ಶಾಹೀನ ಅವರು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಮುಂಬೈಯ ಕೊಳೆಗೇರಿಗೆ ಭೇಟಿ ನೀಡಿದ್ದರು. ಅಲ್ಲಿ ಬೀದಿಗಳಲ್ಲಿ ಓಡಾಡುವ ಮಕ್ಕಳಿಗೆ ಮತ್ತು ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದೇ ಇರುವ ಮಕ್ಕಳಿಗೆ ಶಿಕ್ಷಣ ನೀಡುವ ಆಸೆ ಇವರಲ್ಲಿ ವ್ಯಕ್ತವಾಗಿ, 1989 ರಲ್ಲಿ ‘ಆಕಾಂಕ್ಷೆ’ ಕೇಂದ್ರವನ್ನು ಸ್ಥಾಪಿಸಿದರು. ಮೊದಲಿಗೆ 15 ಜನ ಮಕ್ಕಳಿಗೆ ತನ್ನ ಸ್ನೇಹಿತರೊಂದಿಗೆ ಕಲಿಸಲು ಫ್ರಾರಂಭಿಸಿದರು. ಇವರ ಸ್ನೇಹಿತರು ಸ್ವಯಂ ಆಗಿ ಮಕ್ಕಳಿಗೆ ಕಲಿಸಲು ಒಪ್ಪಿಕೊಂಡರು. ಈಗ ಈ ಕೇಂದ್ರದಲ್ಲಿ 6500ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಶಾಹೀನರವರು ಯಾವುದೇ ಲಾಭವನ್ನು ಬಯಸದೇ ಶಿಕ್ಷಣವನ್ನು ನೀಡುತ್ತಿರುವರು. ಮಕ್ಕಳಿಗೆ ಹೊಸ ತಂತ್ರಜ್ಞಾನಗಳನ್ನು ಮತ್ತು ಹೊಸ ಕಲಿಕಾ ಮಾದರಿಗಳನ್ನು ಬಳಸಿಕೊಂಡು ಕಲಿಸುತ್ತಿದ್ದಾರೆ. ಈ ಸಂಸ್ಥೆಯು ಅಂತರಾಷ್ಟ್ರೀಯ ಮಟ್ಟದ ಗೌರವಗಳನ್ನು ಪಡೆದಿದೆ.

  2008ರಲ್ಲಿ ಬೇಸಿಗೆಯಲ್ಲಿ ಶಾಹೀನರವರು ‘ಟೀಚ್ ಫಾರ್ ಇಂಡಿಯಾ’ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಮೂಲಕ ಶಿಕ್ಷಣದಲ್ಲಿ ಇರುವ ಅಸಮಾನತೆ ಅಥವಾ ಅಂತರವನ್ನು ಕಡಿಮೆ ಮಾಡಲು ಭಾರತದಾದ್ಯಂತ ‘ಟೀಚ್ ಫಾರ್ ಇಂಡಿಯಾ’ದ ಕಾರ್ಯಗಳು ನಿರ್ವಹಿಸುವಂತೆ ಮಾಡಿದ್ದಾರೆ. ಭಾರತದ ಯುವ ಪದವಿಧರರು ಕಡಿಮೆ ಆದಾಯ ಇರುವ ಶಾಲೆಗಳಲ್ಲಿ ಕನಿಷ್ಟ ಎರಡು ವರ್ಷ ಬೋಧನೆ ಮಾಡಿದರೆ ಶೈಕ್ಷಣಿಕ ಅಂತರ ಕಡಿಮೆ ಮಾಡಬಹುದು ಎಂಬುದು ಇವರ ಮಹತ್ತರವಾದ ಆಸೆಯಾಗಿದೆ.

ಶಾಹೀನರವರು ‘ಆಕಾಂಕ್ಷಾ ಫೌಂಡೇಶನ್’ ಮತ್ತು ‘ಸಿಂಪಲ್ ಎಜುಕೇಶನ್ ಫೌಂಡೇಶನ್’ನ ಮಂಡಳಿಯಲ್ಲಿ ಸೇವೆಸಲ್ಲಿಸುತ್ತಿದ್ದಾರೆ. ಸೈನ್ ಫಾರ್ ಚೇಂಜ್ ಮತ್ತು ಟೀಚ್ ಫಾರ್ ಆಲ್ ಮಂಡಳಿಗಳ ಮಾಜಿ ಸದಸ್ಯರಾಗಿದ್ದಾರೆ.

ಇವರಿಗೆ ದೊರೆತ ಪ್ರಶಸ್ತಿಗಳು:

1) 2001 ರಲ್ಲಿ ಅಶೋಕ ಫೆಲೋ

2) 2002 ರಲ್ಲಿ ಗ್ಲೋಬಲ್ ಲೀಡರ್ ಫಾರ್ ಟುಮಾರೊ ವಲ್ರ್ಡ್ ಎಕಾನಾಮಿಕ್ ಪೋರಂ

3) 2006 ರಲ್ಲಿ ಏಷ್ಯಾ ಸೊಸೈಟಿ 21 ಲೀಡರ್ ದೊರೆತಿದೆ.


.

ಡಾ.ಸುರೇಖಾರಾಠೋಡ್

ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ

Leave a Reply

Back To Top