ಕಾವ್ಯ ಸಂಗಾತಿ
ಮಾತು-ಮೌನ ಗೆದ್ದವಳು

ಒಲವು

ಇವಳಿಲ್ಲಿ ಮೌನವಾಗಿ
ಹರಿಯುತ್ತಾಳೆ
ಮಾತು ಸದ್ದುಗದ್ದಲದ
ಗೋಜಿಗೆ ಹೋಗದೆ
ಮೌನವಿದೆ ಇವಳಲ್ಲಿ,
ಗಟ್ಟಿತನವಿದೆ ಹರಿವಿನಲ್ಲಿ,
ಹಾಗೆಂದು
ಶಬ್ದ ಮಾಡುವುದಿಲ್ಲ
ಹರಿವ ದಾರಿ,ದಿಕ್ಕುಗಳ
ಅರಿವಿದೆ ಅವಳಿಗೆ
ದಾರಿ ತಪ್ಪಿಸುವವರ
ಅರಿವೂ ಇದೆ
ಆದರೂ ನಗುತ್ತಾಳೆ
ಅಳುವ ನುಂಗುವುದಿಲ್ಲ
ಕಣ್ಣೀರಲ್ಲೇ ಮುಳುಗಿ
ನಗುವ ಅಭ್ಯಾಸ ಮಾಡುತ್ತಾಳೆ
ಕಲ್ಲ ಬೀಸದಿರಿ,ಮೌನ ಕದಡಲು
ಮಾತಿಗೆಳೆದು ಪರೀಕ್ಷಿಸಲು,
ಇವಳು ಮಾತು-
ಮೌನವನ್ನೂ ಗೆದ್ದವಳು.
ಒಲವು