ಕಾವ್ಯಸಂಗಾತಿ
ಕಡಲು
ಡಾ. ನಿರ್ಮಲ ಬಟ್ಟಲ
ನೀನು ಕಡಲು
ನಿನ್ನಲ್ಲಿ ಒಂದಾಗಿ
ನನ್ನ ಅಸ್ಮಿತೆಯನ್ನು
ಕಳೆದುಕೊಳ್ಳುವ ನಾನು ನದಿ…!
ನೀನು ಕಡಲತೆರೆ
ಉಕ್ಕಿಹರಿವ ನಿನ್ನ
ತೇರೆದ ಬಾಹುಗಳಿಂದ
ಅಪ್ಪವು ನಾನು ದಡ…..!
ನೀನು ಕಡಲ ಬಸಿರು
ಕೌತುಕಗಳ ಹೊತ್ತ ನಿನ್ನೊಡಲಿಗೆ
ಮುತ್ತುಗಳ ರಾಶಿಯನು ಬಿತ್ತಿದ
ನಾನು ಸ್ವಾತಿ ಮಳೆಹನಿ….!
ನೀನು ಕಡಲ ಆಳ
ಜೀವಪಾತ್ರೆಯ ಮೇಳ
ನಿನ್ನೊಲುಮೆಯಾಳದಿ
ನಾನು ನಲಿವ ಜಲಪುಷ್ಪ….!