ಗಜಲ್

ಕಾವ್ಯ ಸಂಗಾತಿ

ಗಜಲ್

ಡಾ. ನಾಗರತ್ನ ಅಶೋಕ ಭಾವಿಕಟ್ಟಿ

ನಗುಮುಖದ ನೈದಿಲೆಯಂತೆ
ಕಂಠಸಿರಿ ಕೋಗಿಲೆಯಂತೆ ಕೆಳದಿ
ಶಾರದೆಯ ಐಸಿರಿಯಂತೆ
ಸಂಗೀತ ಲೋಚನೆಯಂತೆ ಕೆಳದಿ

ಸ್ವಚ್ಛ ಮನದ ಕಮಲಿನಿಯಂತೆ
ಹೃದಯ ವೈಶಾಲಿನಿಯಂತೆ
ಕಪಟರಹಿತ ಲೋಚನಿಯಂತೆ
ಬಿಚ್ಚು ಮಾತಿನ ಮಾಧುರಿಯಂತೆ ಕೆಳದಿ

ಕೃಷ್ಣವರ್ಣ ಸುಂದರಿಯಂತೆ
ಗುಂಡು ಮುಖದ ಚಾಂದಿನಿಯಂತೆ
ತೇಜ ನಯನತಾರಿಣಿಯಂತೆ
ನಿರರ್ಗಳವಾಗಿ ಹರಿವ ವಾಗ್ಝರಿಯಂತೆ ಕೆಳದಿ

ಬಿಂಕ ವಿಲ್ಲದ ರಾಗಿಣಿಯಂತೆ
ಬಿಗುಮಾನದ ಮೈಸಿರಿಯಂತೆ
ಸಲಿಗೆ ತೋರುವ ಅರಗಿಣಿಯಂತೆ
ಎಲ್ಲೆಡೆಯೂ ಕಾಣುವ ಗಾನ ತರಂಗಿಣಿಯಂತೆ ಕೆಳದಿ

ಕುಸುಮ ಕೋಮಲ ಹೃದಯಿಣಿಯಂತೆ
ಬಿರಿದ ದಾಳಿಂಬೆ ದಂತಸಿರಿಯಂತೆ
ರತುನಳ ಮೆಚ್ಚಿನ ಕುಮುದಿನಿಯಂತೆ
ನಿಜದ ಮಂದಹಾಸನೀಯಂತೆ ಕೆಳದಿ


Leave a Reply

Back To Top