ಕಾವ್ಯ ಸಂಗಾತಿ
ಅಪ್ಪ
ಮಾಜಾನ್ ಮಸ್ಕಿ
ಬದುಕಿನ ಕಲೆ ಅರಿತ
ಕಲೆಗಾರ ನನ್ನಪ್ಪ
ಬಣ್ಣಗಳಲ್ಲಿ ಭಾವನೆಗಳನ್ನು
ಕಂಡ ಆಲದ ಮರ
ನೋವು ನಲಿವುಗಳನ್ನು
ಮನದಲ್ಲಿ ಬಚ್ಚಿಟ್ಟ ಸಾಗರ
ಅದರಡಿಯಲ್ಲಿ ಅಡಗಿ ಕುಳಿತು
ಕಣ್ಣೀರನ್ನು ಮುಚ್ಚಿಟ್ಟ ಕಪ್ಪೆ ಚಿಪ್ಪು
ಮೇಲ್ನೋಟಕ್ಕೆ ಕೋಪ ತೋರಿ
ಒಳಗೊಳಗೆ ಬೀಗುವ
ರಕ್ಷಣೆ ಹಬ್ಬಿಸಿದ ಆಕಾಶ
ನನ್ನಪ್ಪ
ಕೂಡು ಕಳೆಯುವ ಭಾಗಲಬ್ದ
ಕಲಿಸಿ
ಬದುಕು ಶೂನ್ಯದಿಂದಲೇ ಪ್ರಾರಂಭ
ಕೊನೆಯು ಶೂನ್ಯದಿಂದಲೇ
ಬದುಕು ಶೂನ್ಯ ಎಂದು
ಮನದಟ್ಟು ಮಾಡಿದ
ಗಣಿತಕಾರ ನನ್ನಪ್ಪ
ಎಲ್ಲರನ್ನು ತೃಪ್ತಿ ಪಡಿಸಿ
ದೂರದಿಂದಲೇ ನೋಡುತ್ತಾ
ಕುಳಿತ ಮೌನಿ ನೆನಪಾಗುವುದು
ಮಾಣಿಕ್ಯ ನನ್ನಪ್ಪ
ನನ್ನಂತಯೇ ನನ್ನ ಅಪ್ಪ….?
ಅಪ್ಪನಂತೆಯೇ ನಾನು…..?