ಕವನದಲ್ಲಿ ಹುಡುಕಾಟ

ಕಾವ್ಯ ಸಂಗಾತಿ

ಕವನದಲ್ಲಿ ಹುಡುಕಾಟ

ಪ್ರೊ ರಾಜನಂದಾ ಘಾರ್ಗಿ

ಕವನದ ಸಾಲುಗಳಲಿ
ನನ್ನನು ಹುಡುಕುತ್ತಿದ್ದೆನೆ
ಓದುತ್ತ ಪದಗಳಲ್ಲಿ
ಭಾವಗಳ ಕೆದಕುತ್ತಿದ್ದೆನೆ

ಅರ್ಥಗಳ ಹುಡುಕುತ್ತ
ಸಂಕೀರ್ಣ ಪದಬಂಧಗಳ
ಸಂಕೋಲೆಗಳಲ್ಲಿ ಸಿಲುಕಿ
ಅಲ್ಲಿಯೇ ಸುತ್ತುತ್ತಿದ್ದೆನೆ

ಹೊರಬರಲು ದಾರಿ ಸಿಗದೇ
ಅಲ್ಲಿಯೇ ಸುತ್ತಾಡುತ್ತಿದ್ದೆನೆ
ಮುಡಿಗೇರಿಸಿದ ಕೀರಿಟವ
ತಡವಿ ಮುಟ್ಟಿ ನೋಡುತ್ತಿದ್ದೆನೆ

ಭಾವಗಳ ಅಲೆಗಳ ಮೇಲೆ
ನಿರೀಕ್ಷೆಗಳ ತೆಪ್ಪದಲ್ಲಿ
ತೇಲುತ್ತ ಮುಳುಗುತ್ತ
ಸಂಭ್ರಮಿಸುತ್ತಿದ್ದೆನೆ


2 thoughts on “ಕವನದಲ್ಲಿ ಹುಡುಕಾಟ

Leave a Reply

Back To Top