ಹುಡುಕಾಟದ ಪದ್ಯ

ಕಾವ್ಯ ಸಂಗಾತಿ

ಹುಡುಕಾಟದ ಪದ್ಯ

ಅರುಣಾ ನರೇಂದ್ರ

Baby hiking


ನಿನ್ನ ನೆನಪಿನಲ್ಲೇ
ಕಳೆದು ಹೋಗುತ್ತೇನೆ
ಸಾಗರವ ಸೇರಿದ
ಹನಿಯಂತೆ
ನಿನ್ನೊಳಗೆ
ಒಂದಾಗಿ ಬಿಡುತ್ತೇನೆ

ಅದೆಷ್ಟೋ ಪ್ರೇಮಿಗಳು
ಪ್ರೇಮ ರಾಗ ಹಾಡುತ್ತಾರೆ
ನನ್ನ ಧ್ವನಿ ನಿನಗೆ ಸುಮಧುರವಾಗಿ
ಕೇಳಿಸಿತು ದೊರೆಯೆ
ಧನ್ಯಳಾದೆ !

ನೀ ನನ್ನ ಹಿಂದೆ ಹಿಂದೆ ಬಂದು
ಅರುಣಾ ಎಂದು ಕರೆದು ಬಿಡು
ಮನಸೀಗ ಬಿಳಿ ಅರಳೆಯಂತೆ
ಪರಿಶುದ್ಧವಾಗಿದೆ ಪ್ರಭುವೆ…!

ನೀನಿರಲು ಅರಮನೆ ಅಂತಸ್ತುಗಳು
ನನಗೇಕೆ ಬೇಕು ದೊರೆಯೆ
ನನ್ನೆಡೆಗೊಮ್ಮೆ ದೃಷ್ಟಿ ಹಾಯಿಸಿ ಬಿಡು
ನನಗೆಷ್ಟೇ ಸಾಕು ದೊರೆಯೆ..!


Leave a Reply

Back To Top