ಕಾವ್ಯ ಸಂಗಾತಿ
ನಂಜೇರಿತ್ತು
ಮಾಜಾನ್ ಮಸ್ಕಿ
ನೂರೆಂಟು ಆಸೆಗಳನ್ನು ಹೊತ್ತು
ಬಿತ್ತಿದ್ದೆ ಬೀಜ
ಹೇಮರದಲ್ಲಿ ಸಿಹಿ ಹಣ್ಣುಗಳನ್ನು
ಬಯಸಿ
ಕತ್ತಲೆಯ ಗರ್ಭದಲ್ಲಿ ಅವಿತಿಟ್ಟಿದ್ದೆ
ಜೋಪಾನವಾಗಿ
ಮೊಳಕೆ ಒಡೆದು ಇಣುಕಿ
ನೀಡುತ್ತಿದಂತೆ
ಅಸೂಯೆಯ ಹದ್ದು ಅಂಗೈಯಲ್ಲಿಯ ಜೀವ
ಕುಕ್ಕಿ
ಒಯ್ದಿತ್ತು ಪ್ರಾಣ ಹಾರಿ
ಅಯ್ಯೋ ಪಾಪ ಎಂದು
ಮರುಗಿತ್ತು ಜೀವ
ಕೆಲವು
ಒಳಗೊಳಗೆ ನಗುತ್ತಿದ್ದವು
ನೊಂದು ಗೋಳಾಡುವುದನ್ನು ಕಂಡು
ಮರೆಯಾದ ಕರುಳ ಕುಡಿ
ನಂಜೇರಿಸಿತ್ತು ಬಾಣತಿ ಹೊಕ್ಕಳಕ್ಕೆ
ಮತ್ತೆ ಮತ್ತೇ ಮತ್ತೇ…
ಅರಿತೋ ಅರಿಯದೆಯೋ ಕಳುಹಿಸುತ್ತಿತ್ತು ಸಂದೇಶ
ಬರಿದಾದ ಬಂಜರಕ್ಕೆ ಹಸುರಿನ
ಮೊಳಕೆ
ಹೆಮ್ಮರವಾಗಿ ಬೆಳೆಸುವ ಬಯಕೆ…..