ಲೇಖನ
ಭ್ರಮೆ ಮತ್ತು, ವಾಸ್ತವಗಳ ನಡುವೆಯೂ..!
ಕೆ.ಶಿವು.ಲಕ್ಕಣ್ಣವರ
ನಾವು ಒಂದು ಕಾಮನ ಬಿಲ್ಲನ್ನು ದೂರದಲ್ಲಿ ನೋಡುತ್ತೇವೆ.
ಆ ಕಾಮನ ಬಿಲ್ಲು ನಿಜವೆ.!? ಅದು ನಿಜವಲ್ಲ; ಏಕೆಂದರೆ, ಅದು ಕಾಣಿಸಿದ ಸ್ಥಳಕ್ಕೆ ಹೋದರೆ, ಅಲ್ಲಿ ಅದು ಇರುವುದೇ ಇಲ್ಲ. ನಾವು ನಮ್ಮ ಸ್ಥಳವನ್ನು ಬದಲಾಯಿಸಿದರೆ ಅದರ ಸ್ಥಾನವೂ ಬದಲಾಯಿಸಿದಂತೆ ತೋರುತ್ತದೆ. ಹಾಗಾದರೆ ಅದು ಸುಳ್ಳೆ..? ಅಲ್ಲ, ಅಲ್ಲ ಅದು ಸುಳ್ಳೂ ಅಲ್ಲ, ಏಕೆಂದರೆ ಅದು ದೂರದಲ್ಲಿ ಇದ್ದಂತೆ ತೋರುತ್ತದೆ. ಅದನ್ನು ಕಂಡಾಗ ನಮ್ಮ ಮೇಲೆ ಪರಿಣಾಮವೂ ಆಗುತ್ತದೆ, ಕಾಮನಬಿಲ್ಲು ಸುಳ್ಳೂ ಅಲ್ಲ, ನಿಜವೂ ಅಲ್ಲ. ಎರಡು ಕೂಡಿದ್ದೂ ಅಲ್ಲ. ಅದು ಭ್ರಾಂತಿ — ಅನಿರ್ವಚನೀಯ..!
ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬವನ್ನು ನೋಡುತ್ತೇವೆ.
ನಮ್ಮ ಪ್ರತಿಬಿಂಬ ಸುಳ್ಳೆ.!? ವೇದಾಂತವು ‘ಅಲ್ಲ, ಅದು ಸುಳ್ಳೂ ಅಲ್ಲ’ ಎನ್ನುತ್ತದೆ. ಏಕೆಂದರೆ, ಅದು ನಮಗೆ ಕಾಣುತ್ತದೆ. ನಮ್ಮ ಮನಸ್ಸಿನ ಮೇಲೆ ಪರಿಣಾಮವನ್ನೂ ಮಾಡುತ್ತದೆ. ಹಾಗಾದರೆ ಅದು ನಿಜವೆ.!?
ಅಲ್ಲ. ಅದು ನಿಜವೂ ಅಲ್ಲ. ಏಕೆಂದರೆ, ನೀವು ಅತ್ತಲಾಗಿ ಮುಖವನ್ನು ತಿರುಗಿಸಿದರೆ, ಅದು ಕಣ್ಮರೆಯಾಗುತ್ತದೆ.
ಇದು ನಿಜವೂ ಅಲ್ಲದ ಸುಳ್ಳೂ ಅಲ್ಲದ ಒಂದು ಭ್ರಮೆ. ಇದರಲ್ಲಿ ಹಿಂದೆಯೇ ಹೇಳಿರುವಂತೆ ಎರಡು ಬಗೆಯಿದೆ. ಹಗ್ಗದಲ್ಲಿ ಕಾಣುವ ಹಾವು ಒಳಗಿನ ಸಹಜವಾದ ಭ್ರಮೆ. ಇದರ ವೈಶಿಷ್ಟ್ಯವೇನೆಂದರೆ, ಭ್ರಾಂತಿ ಜನ್ಯವಾದ ವಸ್ತುವು ಕಾಣುವಾಗ ನಿಜವಾದ ವಸ್ತುವು ಕಾಣುವುದಿಲ್ಲ. ನಿಜವಾದ ವಸ್ತುವು ಕಂಡಾಗ ಭ್ರಾಂತಿಯ ವಸ್ತುವು ಕಾಣುವುದಿಲ್ಲ..!
ಹೀಗೆಯೇ ಎರಡೂ ಕೂಡಿ ಇರಲಾರವು. ಭ್ರಮೆಯ ಹಾವು ಕಂಡಾಗ ನಿಜವಾದ ಹಗ್ಗವು ಕಾಣುವುದಿಲ್ಲ; ನಿಜವಾದ ಹಗ್ಗವು ಕಂಡಾಗ ಹಾವು ಕಾಣುವುದಿಲ್ಲ. ನಿಜವಾದ ಹಗ್ಗವನ್ನೂ ಭ್ರಾಂತಿಯ ಹಾವನ್ನೂ ಒಟ್ಟಿಗೆ ಕಾಣುವುದು ಸಾಧ್ಯವಿಲ್ಲ. ಹಗ್ಗವಿದ್ದಾಗ ಹಾವಿಲ್ಲ, ಹಾವಿದ್ದಾಗ ಹಗ್ಗ ವಿರುವುದಿಲ್ಲ. ಯಾವುದಾದರೂ ಒಂದು ಹೋಗಬೇಕು ಇನ್ನೊಂದಿರಬೇಕು..!
ಅದರೆ ಹೊರಗಿನ ಭ್ರಮೆಯಲ್ಲಿ ಎರಡೂ ಕೂಡಿರುತ್ತವೆ. ಹೊರಗೆ ಬಿಂಬವೂ ಕನ್ನಡಿಯಲ್ಲಿ ಪ್ರತಿಬಿಂಬವೂ ಕೂಡಿ ಇರುವಂತೆ ನಿಜವೂ ಮತ್ತು ಭ್ರಮೆಯೂ ಏಕಕಾಲದಲ್ಲಿ ಕಾಣಿಸಿಕೊಳ್ಳುತ್ತವೆ..!
ಮುಖವು ನಿಜವಾದ ವಸ್ತು; ಕನ್ನಡಿಯಲ್ಲಿರುವ ಪ್ರತಿಬಿಂಬವು ನಿಜವಲ್ಲ, ತೋರಿಕೆ ಮಾತ್ರವಾದ ಭ್ರಮೆ ಆದರೂ ಅವೆರಡೂ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ..!
ಇದೇ ಅವರ ವೈಶಿಷ್ಟ್ಯವು. ಇದರಲ್ಲಿ ಇನ್ನೊಂದು ವಿಶೇಷವೇನೆಂದರೆ ಕನ್ನಡಿಯಂಥ ಮಧ್ಯಮ — ಉಪಾಧಿ ಇರುತ್ತದೆ. ಆದ್ದರಿಂದ ಬಾಹ್ಯಸ್ಥ ಭ್ರಮೆಯಲ್ಲಿ ಒಂದೇ ಸಮಯದಲ್ಲಿ ನಿಜ ವಸ್ತುವೂ ಮಧ್ಯಮ ಉಪಾಧಿಯೂ ಭ್ರಮಾ ವಸ್ತುವೂ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ..! ಸಹಜವಾದ ಅಂತಸ್ಥ ಭ್ರಮೆಯಲ್ಲಿ ಸಮಯದಲ್ಲಿ ಒಂದೇ ವಸ್ತುವು ಕಾಣಿಸಿಕೊಳ್ಳುತ್ತದೆ..!
ಇಡೀ ವಿಶ್ವದ ಅಖಂಡತೆಯನ್ನೂ ಮನಗಂಡಿದ್ದಾರೆ. ಅವರು ತಮ್ಮ ವಿಚಾರ ಶೋಧಗಳಿಂದಲೂ ಧಾರ್ಮಿಕ, ಸಾಧನೆಗಳಿಂದಲೂ ಪ್ರಯೋಗ-ಪ್ರಗತಿಗಳಿಂದಲೂ ಧ್ಯಾನ, ಯೋಗ, ಜ್ಞಾನಯೋಗಗಳಿಂದಲೂ ಪಡೆದ ಸತ್ಯಾನುಭವದಿಂದ ಚಿದಾನಂದ ಸ್ವರೂಪ ಅತ್ಮ ಒಂದೇ ಸತ್ಯವೆಂದೂ ಅದ್ವಿತೀಯವೆಂದೂ ಆದರೆ ಅದರಲ್ಲಿ ಭ್ರಮೆಯಿಂದ ಹಗ್ಗದಲ್ಲಿ ತೋರುವ ಹಾವಿನಂತೆ ಮಾಯೆಯಿಂದ ಪ್ರಪಂಚವು ತೋರುತ್ತಿದೆಯೆಂದೂ ತೋರಿಸಿಕೊಟ್ಟಿದ್ದಾರೆ ಅಥವಾ ಸಿದ್ಧಾಂತ ಮಾಡಿದ್ದಾರೆ..!
ಈ ಪ್ರಪಂಚವು ತೋರುವುದಕ್ಕೆ ಕಾರಣವಾದ ಭ್ರಮೆಯಲ್ಲಿ ಅವರು’ ಎರಡು ಬಗೆಯನ್ನು ತೋರಿಸಬಹುದು’ ಎನ್ನುತ್ತಾರೆ..!
ಇದೇ ಒಳಗಿನ ಬ್ರಮೆ ಮತ್ತು ಹೊರಗಿನ ಭ್ರಮೆ. ಒಬ್ಬ ಮನುಷ್ಯನು ಧಾರ್ಮಿಕ ಜೀವನವನ್ನು ಪ್ರಾರಂಭಿಸಿ ತನ್ನೊಳಗೇ ದೇವತ್ವವನ್ನು ಕಾಣುವುದಕ್ಕೆ ತೊಡಗಿದಾಗ ಅವನು ಹೊರಗಿನ ಭ್ರಮೆಯನ್ನು ಅಥವಾ ಮಾಯೆಯನ್ನು ಮಾತ್ರ ಮೀರುತ್ತಾನೆ..!