ಹಾಯ್ಕುಗಳು

ಕಾವ್ಯಸಂಗಾತಿ

ಹಾಯ್ಕುಗಳು

ಎ. ಹೇಮಗಂಗಾ

1 ಇರುವುದೊಂದೇ
ಭೂಮಿ, ಕಾಪಿಡಬೇಕು
ಪರಿಸರವ

2 ನಾಶವಾದರೆ
ಹಸಿರು, ನಿಲ್ಲುವುದು
ನಮ್ಮ ಉಸಿರು

3 ಪ್ರಕೃತಿ ಮಾತೆ
ಎಲ್ಲ ನೀಡುತಿಹಳು
ನರ ಕೃತಘ್ನ

4 ಬುವಿಯ ತಾಪ
ಹೆಚ್ಚಾಗುತ್ತಲೇ ಇದೆ
ಬಾಳು ನರಕ

5 ಪರಿಸರದ
ಮಾಲಿನ್ಯ ವಿನಾಶಕ್ಕೆ
ದಾರಿ ಇದ್ದಂತೆ

6 ಮೂಡಿಸಬೇಕು
ಜಾಗೃತಿ ನಿಸರ್ಗದ
ಉಳಿವಿಗಾಗಿ

7 ಪರಿಸರದ
ರಕ್ಷಣೆ ಆಗಬೇಕು
ನಿತ್ಯ ಕಾಯಕ

8 ಸೀಮೆ ಇರದ
ಮನುಜ ಸ್ವಾರ್ಥ ಎಲ್ಲ
ಕಲುಷಿತವೇ !

9 ಪ್ರಕೃತಿ ಸಿರಿ
ವರದಾನ ನಮಗೆ
ಪೋಷಿಸಬೇಕು

10 ಆರಾಧಿಸು ನೀ
ನಿಸರ್ಗ ಚೆಲುವನು
ಸುಖ ನಿನ್ನದೇ !


Leave a Reply

Back To Top