ಕಾವ್ಯ ಸಂಗಾತಿ
ಸುತ್ತಿ ಸುತ್ತಿ ಸುಳಿಯೇಗಾಳಿ
ಮೂಲ ಮರಾಠಿ – ಕೃ. ಭ. ನಿಕುಂಭ
ಅನುವಾದ -ಸುಲಭಾ ಜೋಶಿ ಹಾವನೂರ.
ಸುತ್ತಿಸುತ್ತಿ ಸುಳಿಯೇಗಾಳಿ
ನನ್ನ ಹಿತ್ತಲ್ಲಲ್ಲಿ
ಪರಿಮಳದ ಸುರಿಮಳೆಯಲ್ಲಿ
ತಾಯಿ ಮನೆ ತುಂಬಿಸು.
ಸುಖಿ ಕುವರಿ
ಇರುವುಳೆoದು
ತಾಯಿ ಕಿವಿಗೆ ಹೇಳು
ಅಣ್ಣ ತಾಯಿಗಾಗಿಮಾತ್ರ
ಸದಾ ತವಕವೆಂದು.
ಮರೆತೆಯಾ ಹರುಷವೇ
ಹರುಷ ಭಾದ್ರಪದ
ವರುಷ.
ತವರು ಮನೆ ಸೌಖ್ಯ ನೆನೆದು ತಂಪಾತು ಮನವು.
ಮತ್ತೆ ಮತ್ತೆ ಉಕ್ಕಿತು
ನೆನಪು ದುಃಖಿಯಾದ
ಜೀವ
ಚಂದ್ರಕಳೆಯ ಸೀರೆಯ
ಸೆರಗು ತೊಯ್ದು
ತಪ್ಪಡಿಯಾತು.
ಕಪ್ಪು ಕಪಿಲೆಯ ಗೌರಿ
ಬಲು ತುಂಟ ಖೋಡಿ
ಓಡೋಡಿ ಅವಳಹಿಂದೆ
ನಾನು ಬರಿ ಹೈರಾಣ.
ಹಿತ್ತಲ ತುಂಬಪಾರಿಜಾತ
ಥಳಿ ರಂಗವಲ್ಲಿ
ಹೂವನಾರಿಸಲು ಗೆಳತಿ
ಕರೆಯಲೆಂದು ಬರುವಿ? ಮೃದು ದಟ್ಟ ಕೆನಿ ಕೆಳಗೆ
ಕಪಿಲೆಯ ಗಟ್ಟಿ ಹಾಲು
ಮಮತೆ ನನ್ನಮೇಲೆ
ದಟ್ಟ
ನಿನ್ನ ಮಮತೆಯಂತೆ.
ತುಂಬಿ ತುಂಬಿತುಳುಕಿತು
ಕಣ್ಣ, ಗದ್ಗದಿತ ಕಂಠ
ತಾಯಿ ನಿನ್ನ ನೆನಪಿನಲ್ಲಿ
ಸದಾ ವ್ಯಾಕುಲವಿ ಜೀವ.
ಸುತ್ತಿ ಸುತ್ತಿ ಸುಳಿಯೇ
ಗಾಳಿ ನನ್ನ ಹಿತ್ತಲಲ್ಲಿ.
ಎಂಥಾ ಆರ್ದ್ರ ಭಾವಗಳ ಕವಿತೆ….. ತುಂಬಾ ಚೆನ್ನಾಗಿದೆ ಮೇಡಂ