ಕವ್ಯ ಸಂಗಾತಿ
ಕೈ ತೋಟದಲ್ಲೊಂದು ಕಾಡು
ಡೋ ನಾ ವೆಂಕಟೇಶ
ನಿಮ್ಮ ಮನೆ ಕೈ ತೋಟ
ಸೂರ್ಯ
ಕಾಡಿನ ನಡುವೆ ಬೆಳಗಿದ
ಸೂರು. ನೂರಾರು
ಚಿಲಿಪಿಲಿ ಪಕ್ಷಿ ಮತ್ತದರ ಗೂಡು.ಹಸಿರು ಪರಿಸರದ
ಒಳಗೆ ಹೊರಗೆಲ್ಲಾ ಸಂಭ್ರಮಿಸುವ ಹೆಸರಿಟ್ಟ ಹಕ್ಕಿ
ಹೆಸರಿಡದ ಪಕ್ಷಿ.
ಮತ್ತೆ
ನಿಮ್ಮ ಮನೆ ಅಂಗಳದ ಕಾಡು
ನಾಡಿನ ತುಡಿತಕ್ಕೆ
ಒಳಗೆಲ್ಲಾ ಹೊರಗಾಗದ ಬೆರಗು;
ನಿಮ್ಮ ಕಾಡನ್ನೇ ಒಳಗೊಂಡ ಮನೆ ಬಣ್ಣದ ಅರಮನೆಗೆ
ಬೆರಗಾಗದೇ ಇರಲಿ
ಇರಲಿ ಬಿಡಿ ಇಲ್ಲಿ ಗುಲಾಬಿ ಸೇವಂತಿ ಮತ್ತೆ ಘಮಘಮ
ಮಲ್ಲಿಗೆ ಬೆಳಗಾಗ ಸೂರ್ಯಕಾಂತಿ !
ರಾತ್ರಿ ನೋಡ ನೋಡುತ್ತ
ಮನಶ್ಯಾಂತಿ ಸುಖಶ್ಯಾಂತಿ
ತಳಿರು ತೋರಣ.
ಯಾರಿಗುಂಟು ಯಾರಿಗಿಲ್ಲ
ಈ ಕನಸು ಈ ಮನಸು
ನಿಮ್ಮ ಮನೆ ಕಾಡಿನ ಒಳಗಿರುವ ಹೆದ್ದಾರಿ
ಮತ್ತದರ ದಡಲ್ಲಿರುವ
ತಿಳಿಗೊಳ
ತಳಮಳ ರಹಿತ ಸೀದಾ ಸಾದಾ
ಜೀವನ
ಜೀವ ಜಂತುಗಳ ಉಗಮ
ಎಂದೇ ಧನ್ಯೋಸ್ಮಿ ಧನ್ನ್ಯೋಸ್ಮಿ
ಕಾಡು ಬೆಳೆಸಿ, ನಾಡು ಉಳಿಸಿ..
ಕೈ ತೋಟವೇ ಮೊದಲ ಕಾಡು…
ಸುಂದರ ಸಾಲುಗಳು.
Thanks Surya
Very nice poem Venkanna,
ಅಹಂ ಧನ್ಯೋಸ್ಮಿ
Thank you Manjanna for your encouragement
Beautiful poem! Enjoyed reading it.
Thanks Usha for that appreciation