ಕೊಳ್ಳುವವರು ಬೇಕಾಗಿದ್ದಾರೆ…!

ಕಾವ್ಯಸಂಗಾತಿ

ಕೊಳ್ಳುವವರು ಬೇಕಾಗಿದ್ದಾರೆ…!

ಶಂಕರಾನಂದ ಹೆಬ್ಬಾಳ

ನನ್ನೆದೆಯ ಪೇಟೆಯಲಿ
ನಿನ್ನ ಚಿತ್ರವು ಮಾರಾಟದ
ಸರಕಾಗಿದೆ..
ಮೋನಾಲಿಸಾ ತೈಲಚಿತ್ರ
ನಿನ್ನ ಪೈಪೋಟಿಯಲ್ಲಿ
ಮೂಲೆ ಸೇರಿ ಅಳುತ್ತಿದೆ…
ನನಗೆ ಕೊಳ್ಳುವವರು
ಬೇಕಾಗಿದ್ದಾರೆ……!

ನಾನು ಕಲಾವಿದನಲ್ಲ
ವ್ಯಾಪಾರಿಯು ಅಲ್ಲ
ಸರಕು ಸಾಗಣೆಮಾಡುವ
ದಲ್ಲಾಳಿಯು ಅಲ್ಲ
ನನಗೆ ಕೊಳ್ಳುವವರು
ಬೇಕಾಗಿದ್ದಾರೆ….!

ನೆನಪುಗಳ ಗಂಟುಮೂಟೆ
ಕ್ವಿಂಟಾಲಗಟ್ಟಲೆ ಲೋಡಾಗಿವೆ
ಸಂತೆಬಝಾರನಲ್ಲಿ
ನಿರಂತರ ಜನಜಂಗುಳಿಯಿಲ್ಲ
ನನಗೆ ಕೊಳ್ಳುವವರು
ಬೇಕಾಗಿದ್ದಾರೆ…..!

ಅದು ಬೇಕಾ…?
ಇದು ಬೇಕಾ ಎನ್ನುವ
ಕೂಗು ಸೈರನ್ ಬಾರಿಸಿದೆ
ಬಿಕರಿಯಾಗಿ ಉಳಿದ
ನೆನಪುಗಳು ಕೊನಗೆ
ಬಾಡಿದ ಹೂವಾಗಿವೆ….
ಹೇಳಿ
ನನಗೆ ಕೊಳ್ಳುವವರು
ಬೇಕಾಗಿದ್ದಾರೆ….


One thought on “ಕೊಳ್ಳುವವರು ಬೇಕಾಗಿದ್ದಾರೆ…!

  1. ನಿಮ್ಮ ಕವನಗಳು ಓದುಗರನ್ನು ಎಲ್ಲೋ ಕರೆದೊಯ್ಯುತ್ತೇವೆ. . ಸೂಪರ್ ಸರ್.

Leave a Reply

Back To Top