ಕಾವ್ಯ ಸಂಗಾತಿ
ಹೈಕುಗಳು
ನಿಂಗಮ್ಮ ಭಾವಿಕಟ್ಟಿ
ನಮಿಸುವ ಕೈ
ಕತ್ತಿ ಹಿಡಿದು, ಭಕ್ತಿ
ಮಣ್ಣುಪಾಲಾಯ್ತು.
ನೀರ ಮೇಲಿನ
ಗುಳ್ಳೆಗೆ ಲಕ್ಷ ಹೋದ್ರು
ಲಕ್ಷ್ಯ ಕೊಡಲ್ಲ.
ನೆತ್ತಿ ಕೊರೆದ
ನೋವಿಗೆ ಕಣ್ ನೀರು
ಚಿಮ್ಮಿತೋ ಏನೋ
ಅಪಘಾತದ
ಕಾರ್ಮೇಲೆ ಬರೆದಿತ್ತು
ಜಸ್ಟ್ ಮ್ಯಾರೀಡ್.
ಮಕ್ಕಳಿಗೆಂದೇ
ಬೇಬಿ ಕೇರ್ ಸೆಂಟರ್
ಪಾಲಕರು ಫ್ರೀ.
ಗಡಿಯಾರಕೆ
ಆಗು ಹೋಗು ಗೊತ್ತಿಲ್ಲ
ಬೇಕಾಗೂ ಇಲ್ಲ
ಮುಂಗ್ಸಿ ಕಂಡರೆ
ಶುಭವೆಂದ ದಿನವೇ
ಮಾವ ಹೋದರು.
ಅವಶ್ಯಕತೆ
ಮೀರಿದ ಕೊಳ್ಳುಬಾಕ
ಕಾಯಿಲೆ ಜನ್ಕೆ