ಕಾವ್ಯ ಸಂಗಾತಿ
ರಾಹುಕಾಲವೂ ಶುಭಶಕುನ
ಸಿ.ಶಿವಾನಂದ
ಅಮಾವಾಸ್ಯೆಯ ಕಾರ್ಗತ್ತಲಲ್ಲು
ನಿನ್ನ ವದನ ಹುಣ್ಣಿಮೆ ಚಂದ್ರನ ಬೆಳಕು ಸೂಸುತ್ತಿದೆ..ಕ್ಷಣಾರ್ಧದಲ್ಲಿ ಕತ್ತಲೋಡಿಸುವಂತಿದೆ..
ಬಾ ರಾಹುಕಾಲವೂ ಶುಭವಾಗುತ್ತಿದೆ..
ನಿನ್ನಾಗಮನದಿಂದ
ಎಡ ಕಾಲಿಟ್ಟು ಪ್ರೀತಿಯ ಸೌಧದೊಳು ಬಾ ಸಖಿ,
ಅದು ಹೃದಯದ ಪ್ರೀತಿಯ ಪರಿಭಾಷೆ ಆಗುತ್ತಿದೆ..
ಬಾ ಒಳಗೆ ಬಾ, ತಡಮಾಡದಿರು
ಚಡಪಡಿಕೆ ಶುರುವಾಗಿದೆ
ಬಯಕೆಗಳು ಇಮ್ಮಡಿಯಾಗುತ್ತಿವೆ
ನಿನ್ನಂತರಂಗವನು ತಲುಪಲು…
ನೀ ಬರುವಾಗ ಮಾರ್ಜಾಲದ ಸಹಜ ದಾರಿ
ಅದು ಶುಭ ಶಕುನ ಎಂದೇ ಭಾವಿಸು
ಎಲ್ಲ ದಿಕ್ಕುಗಳಿಗೂ ಪ್ರೀತಿ ಪಸರಿಸಿದೆ..
ಅದಕ್ಕೂ ನಮ್ಮ ಒಲವಿಗೆ ಅಭಿನಂದಿಸುವ
ಗುಣವಿದೆ..
ಬಾ ಇದು ಶುಭ ಘಳಿಗೆ
ಎವೆ ಇಕ್ಕದೆ ದಾರಿ ಕಾಯುತ್ತಿರುವೆ.