ಡಾ. ನಿರ್ಮಲಾ ಬಟ್ಟಲ,ಪರಿಸರ ದಿನ

ಕಾವ್ಯ ಸಂಗಾತಿ

ಡಾ. ನಿರ್ಮಲಾ ಬಟ್ಟಲ,ಪರಿಸರ ದಿನ

ನನಗೂ ಇಂದು
ಗಿಡ ನೆಡುವುದಿದೆ….!
ತಿಮ್ಮಕ್ಕನಂತೆ
ಸಾಲು ಸಾಲಾಗಿ ನೆಟ್ಟು
ಪೊಷಿಸಲು ಅಲ್ಲಾ…!
ಒಂದೆ ಒಂದು ಗಿಡ ನೆಡಲು
ತುಸು ಜಾಗ ಸಿಕ್ಕರೆ ಸಾಕಿದೆ….!

ಮನೆಯಂಗಳದಲಿ ಅಂಗೈಯಗಲ
ಜಾಗವಿಲ್ಲ , ರಸ್ತೆ ಬದಿಯಲಿ ಗಿಡ
ನೆಟ್ಟರೆ ಉಳಿಗಾಲವಿಲ್ಲ…!
ಕಾಪಾಡಲು ಬಹುಗುಣರಂತೆ ತಬ್ಬಿಕೊಳ್ಳಲಾಗುವುದಿಲ್ಲ…!

ನೀರುಣಿಸಿ ಆರೈಕೆ
ಮಾಡಲು ಪುರುಸೊತ್ತು ನನಗಿಲ್ಲ
ಇಂದು ಸೆಲ್ಫಿ, ಫೋಟೋ …
ನಾಳೆ ಪತ್ರಿಕೆ ಯಲಿ
ವರದಿ ಬಂದರೆ ಸಾಕಿದೆ….!
ಫೇಸ್ಬುಕ್ ಗೆ ಒಂದು ಫೋಟೋ
ಸ್ಟೇಟಸ್ ಗೆ ಒಂದು ಕ್ಯಾಪ್ಶನ್
ಬರೆದು ಹಾಕಲು ಬೇಕಿದೆ…‌!

ಪ್ರತಿ ವರ್ಷವೂ
ನೆಟ್ಟಗಿಡಗಳ ಲೆಕ್ಕವಿದೆ
ನೆಟ್ಟ ಜಾಗದಲಿ ಬದುಕಿದ
ಕುರುಹುಗಳಿಲ್ಲಾ….!!
ನಾನು ಪರಿಸರವಾದಿ, ಅದಕ್ಕೆ
ಪ್ರತಿ ವರ್ಷವೂ
ಮರನೆಡುವುದನ್ನ
ನಾನು ಬಿಡುವುದಿಲ್ಲ…!


ಡಾ. ನಿರ್ಮಲಾ ಬಟ್ಟಲ

4 thoughts on “ಡಾ. ನಿರ್ಮಲಾ ಬಟ್ಟಲ,ಪರಿಸರ ದಿನ

  1. ಕವಿತೆ ನಿಮ್ಮ ಪಾಡ ಷ್ಟೆ ಅಲ್ಲ ಸಮಕಾಲೀನರಬವಣಿ ಗೆ ಕನ್ನಡಿ ಆಗಿದೆ ಬಹುಗುಣರನ್ನು ನೆನಪಿಸಿದ್ದು ನಿಮ್ಮ ಆಳವಾದ ಅಧ್ಯನದ ಸಾಕ್ಷಿ

  2. ವಾಸ್ತವ…. ಚೆಂದದ ಕವಿತೆ ನಿರ್ಮಲಾ…

  3. ಕವನ ಪ್ರಭುದ್ದತೆಯಿಂದ ಮತ್ತು ಸೂಕ್ಷ್ಮತೆಯಿಂದ ಕೂಡಿ ನಿಮ್ಮ ವ್ಯಕ್ತಿತ್ವಕ್ಕೊಂದು ಕೈಗನ್ನಡಿಯಂತಿದೆ

Leave a Reply

Back To Top