ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ನಿಸರ್ಗವ ಸೂಕ್ಷ್ಮದಿ ವೀಕ್ಷಿಸು
ನಿಜ ಆನಂದವ ಅನುಭವಿಸು
ಹಕ್ಕಿಯ ಸವಿ ಗಾನವ ಆಲಿಸು
ನಿಜ ಆನಂದವ ಅನುಭವಿಸು
ಹಚ್ಚ ಹಸಿರಿನ ಎಡೆ ನೀ ತಪಿಸು
ನಿಜ ಆನಂದವ ಅನುಭವಿಸು
ಸತ್ಯ ಮಾರ್ಗವನೇ ನೀ ಸವೆಸು
ನಿಜ ಆನಂದವ ಅನುಭವಿಸು
ನಿನ್ನ ಗಳಿಕೆಯ ಬೆವರನೇ ಉಣಿಸು
ನಿಜ ಆನಂದವ ಅನುಭವಿಸು
ನಿನ್ನಲಿರುವ ಇಂಗಿತ ಜ್ಞಾನಕೆ ನಮಿಸು
ನಿಜ ಆನಂದವ ಅನುಭವಿಸು
ಪವಿತ್ರ ಪ್ರೇಮವ ಸದಾ ಹರಸು
ನಿಜ ಆನಂದವ ಅನುಭವಿಸು
ಹೊಳೆದ ಬ್ರಹ್ಮಾನಂದಕೆ ನಮಿಸು
ನಿಜ ಆನಂದವ ಅನುಭವಿಸು
ಕೃಷ್ಣಾ , ಕಾಮವ ಪಕ್ಕಕೆ ಇರಿಸು
ನಿಜ ಆನಂದವ ಅನುಭವಿಸು
ದೊರೆತ ಪತ್ನಿಯನೇ ರಮಿಸು
ನಿಜ ಆನಂದವ ಅನುಭವಿಸು