ಕಥಾ ಸಂಗಾತಿ
ಯಲ್ಲಮ್ಮದೇವ್ರು
ರಂಗಸ್ವಾಮಿಮಾರ್ಲಬಂಡಿ
“ಆಕೆ ಭಾಷ ಎಲ್ಲಿಗೆ ಹೋಗ್ಯಾಳ ಆಕೆನ ಬಿಡಬೇಕಿಲ್ಲ ತಲೆನ ತೋಳ್ಯಾಕ ಗಂಡಸಾಗಿ ಮಾಂಸನ ಕಡಿ ಅಂದ್ರ ಹೆಂಗಸಾಗಿ ಕುಂಭ ಹೊರಕೊಂಟಾಳ ನೀನನ ಮದುವೆ ಮಾಡ್ಕೊಂಡು ಹೋಗವಂತೆ ತಾ ಆ ತಲೆನಾ ನಿನ್ಗೆ ತೊಳೆಯಾಕ ಬರಲ್ಲ ” ಅಂತ ನಮ್ ಮಾಮ ನನ್ ಕೈಯಲ್ಲಿರೊ ಕುರಿ ತಲೆ ಇಸ್ಕೊಂಡು ಕುತ್ತಿಗೆಯಿಂದ ಬೇರಾದ ತಲೆಗೆ ಅಂಟಿದ ರಕ್ತನ ತೊಳೆಯಾಕ ಶುರು ಮಾಡಿದ ನಾನು ಏನಾದ್ರು ಮಾಡ್ಬೇಕ ಅನ್ಕೊಂಡು ಬಗಲಾಗ ಇದ್ದ ಕಟುಗರ ಬುಡೆನ್ ಸಾಬ ಚಾಕು ತಗೊಂಡು ಮಾಂಸ ಕಡಿಯೊ ಗುಂಪಿನಾಗ ಕುಂತ್ಗಂಡೆ ಎಮ್ಕೆ ಇರೊ ಮಾಂಸ ನೋಡಿ ಕೊಯ್ಯಾಕ ಬರಲ್ಲ ಅಂತೇಳಿ ನಾನು ಬಟ್ಟಿ ಕೊಯ್ಯಾಕ ಶುರು ಮಾಡಿದೆ.
ಅಪ್ಪ ಬ್ಯಾಡ ಬ್ಯಾಡ ಅಂತೇಳಿದ್ರೂ ನಾನು ದೇವ್ರು ಮಾಡ್ಲೆ ಬೇಕು ಅಂತೇಳಿ ಈ ಕೊಸ್ಗಿಗೆ ಕರಕೊಂಡು ಬಂದಾಳ ನಮ್ಮ ಅಮ್ಮ,ಕುಂಭ ವರ್ಸತೀನಿ ಅಂತೇಳಿ ಕ್ವಾಸ್ಗಿ ಯಲ್ಲಮ್ಮಗೆ ಸಣ್ ಮಾಡಿಕಂಡೀನಿ ಅಂತೇಳಿ ನಮ್ ಅಮ್ಮ ನಮ್ ಅಣ್ಣಗ ಅಲ್ಲ ಅಕ್ಕೊ ಏನು ಅನ್ಬೇಕೊ ಇವಾಗ ಮಾತ್ರ ಅಣ್ಣ ಇದಾನೆ ಮುಂದೆ ಅಕ್ಕ ಅಗ್ತಾನೆ ಅಂತ ಅದ್ಕ ಅವ್ನು ಸಲುವಾಗಿ ದ್ಯೇವ್ರು ಮಾಡಾಕ ಬಂದೀವಿ ಜಾಲಿ ಮದ್ದಿನ ಮೇಲೆ ಖಂಡ ಇರೊ ಎಮ್ಕೆಗೆ ನಮ್ ಕಕ್ಕ ಶ್ಯಾಣಪ್ಪ ಹಾಕೊ ಏಟಿಗೆ ಖಂಡದ ತುಂಡು ಬಂದು ನನ್ ಅಂಗಿ ಮೇಲೆ ಬಿತ್ತು ಅದಕ್ಕವ “ಅಂಗಿ ಬಿಚ್ಚಿ ಕುಂದ್ರಾಕ ಬರಲ್ಲ ಕತ್ತೆಗಳು ಆಗೀರಿ” ಅಂತ ಅವ ಕೂಡ ಸಿಟ್ಟನ್ನು ನನ್ ಮೇಲೆ ತೋರ್ಸೋಕೆ ಶುರು ಮಾಡಿದ ನಾನು ಜಾಸ್ತಿ ತಲೆ ಕೆಡ್ಸಿಕೊಳ್ಳದೆ ಅದು ಬಿಟ್ಟು ಯಲ್ಲಮ್ಮನ ಗುಡಿ ಕಡೆ ಪ್ರಯಾಣ ಬೆಳೆಸಿದೆ ರಾತ್ರಿ ನೀರು ಕುಡಿದಿಲ್ಲಂತೇಳಿ ಮುಂಜಾನೆ ದಡ್ಡಿಗೆ ಕೂಡ ಬಂದಿದಿಲ್ಲ ಅದ್ಕ ದಡ್ಡಿಗೆ ಹೋಗಬೇಕಂತೇಳಿ ಟ್ರಾಕ್ಸಿನ್ಯಾಗ ಇರೊ ಬಾಟ್ಲಿನ ತಗಂಡು ಗುಡಿತಾಕ ಇರೊ ಟ್ಯಾಂಕಿಗೆ ನೀರು ಹಿಡಿಯಾಕ ಹೋದೆ.
ಡ್ರಗ್ಗ, ಡ್ರಗ್ಗ, ಡಗಡ್ರಗ್ಗ ಅಂತೇಳಿ ಡೊಳ್ಳಿನ ಶಬ್ದ ಕಿವಿಗೆ ರಾಜುಸುವಾಗ ಏಽಽಽ ಅಂತೇಳಿ ಒಬ್ಬ ಹೆಂಗಸು ಮೈಮೇಲೆ ದ್ಯಾಸ ಇಲ್ದಂಗ ಸೆರುಗು ಕೆಳ್ಗ ಬೀಲ್ ತಿದ್ರೂ ಕುಣಿತಿದ್ಲು “ನಾಕಿವ್ವಂಡೆ ನಾಕಿವ್ವಂಡಿ” ಅಂತ ತುಟಿ ಕಡಿಯುತ್ತಾ ಮೈ ಮುರಿಯುತ್ತ ಅರ್ಸತಿದ್ರೆ “ನೀಕೇಮ್ ತಕ್ಕುವ್ ಚೆಸಾಮ್ ಸೆಪ್ಪು ತಕ್ಕವ್ ಸೆಸಿಂಟೆ ಸೆಪ್ಪಾಲಿ” ಅಂತ ಇನ್ನೊಬ್ಬ ಮುದುಕಿ ದ್ಯಾವ್ರ ಮೇಲಿನ ಸಿಟ್ನ ಆಕೆ ಮೇಲೆ ತೋರ್ಸತಿದ್ಳು ಇವ್ಯಾವು ತಲೆಗೆ ಹಚ್ಚಿಕೊಳ್ಳದೆ ನಾನು ಸೆಂಬನ್ನು ತುಂಬಿಸಿಕೊಂಡು ದಡ್ಡಿಗೆ ಹೋದೆ….
ಗುಡಿ ಇರೋದೆ ಊರ ಹೊರಗ ಬಗ್ಲಾಗ ದೊಡ್ ಗುಡ್ಡ ವಿಶಾಲವಾದ ಮೈದಾನ ಪಕ್ಕದಲ್ಲೆ ರೋಡ್ ಆ ರೋಡಿನ ಪಕ್ಕದಲ್ಲೆ ರೈಲಿನ ಹಳಿ ಸುರ್ ಅಂತ ಸುಡೊ ಬಿಸಿಲು ಬಿಸಿಲೊ ಸುಡ್ ತಾತೋ ? ಗಾಳಿ ಸುಡ್ ತಾತೊ ಗೊತ್ತಿಲ್ಲ ಆದರೆ ಮನಷ್ಯೋರು ಮಾತ್ರ ಕಾವ್ ಕಾವ್…!
“ಹೋಗಣಡ್ರಿ ಹೋಗಣಡ್ರಿ ವತ್ತಾಗತದೆ ” ಅಂತ ನಮ್ ಮಾವ ಮತ್ತೆ ಬಂದು ಶ್ಯಾಮಲ್ ಕೆಳಗ ಇರೊ ಕೊಡುಪಾನ ತಗಂಡು “ಕುಂಭ ವರ್ಸರ” ಅಂತ ನಮ್ ದೊಡ್ಡ ಕಕ್ಕಗೆ ಹೇಳಿ ಮುಂದೆ ಮುಂದೆ ಹೋದ ಅಷ್ಟುರೊಳಗೆ ನಮ್ ಅಕ್ಕನ ಜೊತೆಗಾರರರು ಸೀರೆ ಉಟುಗೊಂಡು ತಮ್ಮನ್ಯಾಗ ಮದುವೆ ಯಾದ್ರೆ ಹುಡುಗೀರು ಇರೋ ಉತ್ಸಾಹಕಿಂತ್ಲು ಇವ್ರಿಗೆ ಜಾಸ್ತಿ ಇತ್ತು ನಮ್ ಅಪ್ಪ ಮಾತ್ರ ಮೂಲೆಮಾರಿಗೆ ಹಣೆಗೆ ವಲ್ಲಿ ಸುತ್ತಿ ಕೂತಿದ್ದ….
ಮಾಂಸ ಕೊತ ಕೊತ ಕುದುತಿತ್ತು, ಖಂಡಗಳು ಸಾರಿನ ಜೊತೆ ಮೇಲೆರಿ ಬರ್ ತಿದ್ವು, ಬಗಲಾಗ ಇರೊ ಹೆಂಡ ಮುದುಕರ ಗಂಟ್ಲ ಸೇರ್ತಾ ಇತ್ತು, ಕುಡಿದಾದ ಮೇಲೆ ಮೀಸೆ ಮೇಲೆ ಕೈ ಆಡ್ಸ್ತ್ ಹ್ಞಾಽಽ ಅಂತಾ ಮುನಿಗಿ “ಎಂತ ಕೆಲ್ಸ ಮಾಡಿಬಿಟ್ಟೊ ಅಳಿಯ ಹೋಗ್ಲಿ ನಡಿ ಯಲ್ಲಮ್ಮವ್ವ ಒಲೇದು ಅಂದ್ರ ಸುಮ್ನೆ ಅಲ್ಲ ವಲ್ತು ಬಿಟ್ಟಾಳ ನಿನ್ಗೆ ಅಂತೇಳಿ ತಮ್ಮ ಮಾತು ತಾವೇ ಸವರುತಿದ್ದರು, ಬಗ್ಲಾಗ ಇರೊ ಇನ್ನೊಬ್ಬ ಮಾವ ನಿಮ್ ಮನೆದೇವರ ನ ಕೇಳಬೇಕು ಅಂದ ಅದಕ್ಕ ನಮ್ ಅಪ್ಪ ಮಾವ ನಮ್ ಮನೆದೇವರು ಈಕೆ ಮಾರಾಯ ಅಂದ ಅಲ್ಲೊ ಮಾಮ ನಿಮ್ ತುರುಕುರು ದೇವ್ರು ಎಂದು ಹೇಳಬೇಕಾದಾಗ “ಗುಡಿಗೆ ಎಡೆ ಕಳ್ಸಿ” ಅಂತ ನಮ್ ದೊಡ್ ಮಾವ ವದಿರಿದ, ಅದ್ಕ ನಮ್ ಅಪ್ಪ ನಡ್ರಿ ನಡ್ರಿ ಅಂತೇಳಿ ಮತ್ತೆ ಕೈಯಾಗಿನ ಹೆಂಡ ಬಾಯಾಗಿಟ್ಟ…
ಅಣ್ಣ ತಲೆ ಮೇಲೆ ಕುಂಭ ಹೊತ್ತಿದ್ದ, ನಮ್ ತಂಗಿ ಕಳಸ ಇಡಿದಿದ್ಲು, ನಾನು ಕುಂಭದ ಆಕಡೆ ಈ ಕಡೆ ನಿಂಬೆಣ್ಣು, ಉಳಗಡ್ಡಿ ಕೊಯ್ದು ಹಾಕ್ತ ಇದ್ದೆ…
ನಮ್ ಗುಂಪಿನಾಗ್ ಒಬ್ಬಾಕೆ ಮೆಲ್ಕ, ಕಾಲು ಕದಲಿಸದೇ ಮೈ ಅಳ್ಳಾಡಿಸಿ ಅರ್ಸೊಕೆ ಶುರು ಮಾಡಿದ್ಲು ನಾನು ನೋಡ್ತಾನೆ ನಿಂತಿದ್ದೆ ಇದ್ದಕ್ಕಿದ್ದಂತೆ ಅವಳು ಕುಂಭದ ಮೇಲಿರೋ ಬೇನ್ತಪ್ಪಲು ತಗಂಡು ಅರ್ಸೊಕೆ ಶುರು ಮಾಡಿದ್ಳು, ಕಿರಿಚುವ ಆಕೆನ ನೋಡ್ತಾ ಇರಬೇಕಾದ್ರೆ ಆಕೆ ಇದ್ದಕಿದ್ದಂತೆ ನಿಂತು ಮೈ ಮುರಿದು ಬರ್ರ್ ಲೋ ಅಂದು ಸಣ್ಣಿ, ಅಂತ ನನ್ ಹೆಸರಿಟ್ಟು ಕರ್ದಳು ನಾನು ಮುಂದೆ ಹೋಗಿ ನಿಂದ್ರುವಷ್ಟರಲ್ಲಿ ನಮ್ ಮಾಮ ಕೈ ಹಿಡಿದು ” ತಲೆ ಕೆಟ್ಟಿದೆ ಏನು ನಡಿ ಸುಮ್ನೆ” ಅಂತ ಕೈ ಹಿಡಿದು ಮುಂದೆ ಬೇರೆ ಕಡೆ ಎಳ್ಕೊಂಡು ಹೋದ..
“ಲೇ ಜಲ್ದಿ ಬಾ” ಅಂತೇಳಿ ನಮ್ ದೊಡ್ ಮಾಮ ಮತ್ತೆ ನನ್ ಕರೆಯಾಕ ಶುರು ಮಾಡಿದ ನಾನು ಮತ್ತೆ ಗುಡಿ ಹೊಳಗೋದಾಗ “ರೆಂಡುವೇಲ ಐದವಂದ್ಲು ಇವ್ವಂಡಿ” ಅಂತ ಗುಡಿ ಪೂಜಾರಿ ಹೆಣ್ತಿ ನಮ್ ಭಾಷನತ್ತರ ಹೇಳ ತಿರಬೇಕಾದಾಗ “ನಾ ದಗ್ಗರ ಪದೈದು ವಂದ್ಲೆ ವುಂಡಾಯಿ ತಿಸ್ಕೋ” ಅಂತ ಉತ್ತರ ಕೊಡತಿದ್ದ,
ನಾನು ಕೊಡ್ಲ ರೊಕ್ಕ ಅಂತ ಕೇಳಿದ್ರೆ ಅವ ಬೇಡ ಬೇಡ ನಾನೇ ನನ್ ದುಡ್ಡಿನಿಂದ ಕೊಡಬೇಕು ಅನ್ಕಂಡೀನಿ ಅಂತೇಳಿ ದೇವರು ಕೂಡ ಅಷ್ಟುಕೊಡು ಇಷ್ಟುಕೊಡು ಅಂತ ಕೇಳಾಕತ್ತಾರ ಎಂದು ಗೊಣುಗುತ್ತಾ ತಮ್ ಜೊತೆಗಾರತ್ರ ಹಿಸ್ಕಂಡು ಬರ್ತೀನಿ ಅಂತೇಳಿ ಹೋದಾಗ ಎಲ್ರು ಅವ್ನೆ ನೋಡ್ತಾ ನಿಂತಗಂಡಾಗ ನಾನು ಹೊರಬಂದು ಪರಶು ರಾಮ ನ ಕಟ್ಟೆಗೆ ಕುಂತೆ ನಮ್ ಭಾಷ ಓಡೋಡಿ ಬರ್ಬೇಕಾದಾಗ ನನ್ ದೇವತೆಯ ಫೋನ್ ರಿಂಗಾಯಿತು ಆಕೆ ಫೊನ್ ನಲ್ಲಿ ತನ್ ಪುರಾಣ ವದರ್ತಿರಬೇಕಾದಾಗ ಮನಸ್ಸಲ್ಲಿ ಎಲ್ಲೊ ಒಂದುಕಡೆ ನಮ್ ಭಾಷ ನಮ್ ಅಪ್ಪ ನ ಮಾತ್ ಮೀರಿ ಸೀರೆ ಉಟ್ಕಂಡ ಆದರೆ ಪೂಜಾರಿ ಮಾತ ಮಾತ್ರ ಮೀರವಲ್ಲ ಅಲ್ಲ ಅನ್ಸತಾ ಇತ್ತು…….!
ರಂಗಸ್ವಾಮಿ ಮಾರ್ಲಬಂಡಿ
Super Rangaswamy Sir
Wow…✌ Nice Bro