ಕಾವ್ಯಸಂಗಾತಿ
ಗಜಲ್
ಮಾಜಾನ್ ಮಸ್ಕಿ


ನನ್ನಲ್ಲೇ ನಾನೇ ಮರೆಯಾಗುವ ಆಸೆ
ವಸಂತ ಕೋಗಿಲೆಯ ಹಾಡಾಗುವ ಆಸೆ
ಮರುಭೂಮಿಯಲ್ಲಿ ಅಲ್ಲಲ್ಲಿ ಓಯಾಸಿಸ್ ಇವೆ
ಕಣ್ಣಿಗೆ ಕಾಣುವ ಭ್ರಮೆಯಾಗುವ ಆಸೆ
ಎಲ್ಲೆಲ್ಲೂ ಶೃಂಗಾರದ ಸುಗಂಧ ಹಬ್ಬಿದೆ
ಬೆಟ್ಟದ ಮೇಲಿನ ಹೂವಾಗುವ ಆಸೆ
ಪ್ರತಿ ರಾತ್ರಿ ಆಕಾಶ ತುಂಬೆಲ್ಲಾ ನಕ್ಷತ್ರಗಳು
ಎಂದೋ ಮೂಡುವ ಕಾಮನ ಬಿಲ್ಲಾಗುವ ಆಸೆ
ಕಣ್ಣಿಗೆ ಹೊಳೆಯುವ ನೂರೆಂಟು ವಜ್ರ ವೈಡೂರ್ಯಗಳು
“ಮಾಜಾ” ಅಪರೂಪದ ಸ್ವಾತಿ ಮುತ್ತಾಗುವ ಆಸೆ