ಬರೆದಿಟ್ಟ ಕವಿತೆಗಳು

ಕಾವ್ಯ ಸಂಗಾತಿ

ಬರೆದಿಟ್ಟ ಕವಿತೆಗಳು

ಸುಲಭಾ ಜೋಶಿ  ಹಾವನೂರ

ಬರೆದಿಟ್ಟ ಕವಿತೆಗಳು
ಅಲ್ಲಲ್ಲಿ ಎಲ್ಲೆಲ್ಲೋ
ಚೆಲ್ಲಾಪಿಲ್ಲಿ.
ಹುಡುಕಲ್ಲೆಲ್ಲಿ ಬಲು
ಕಸಿವಿಸಿ.
ಭಾವಾoತರಂಗದ
ಕಲರವದ ಅಲೆಗಳು
ತಟ್ಟಿದ್ದೆ ಸಾಕು
ಬರೆದಿಟ್ಟ ಕವಿತೆಗಳು ಮತ್ತೆ ಬೇರಿಳಿದು
ಚಿಗುರೊಡೆದು ಟಿಸಿಲೊಡೆದು
ಕೆಲವು ಮೊಗ್ಗಾದವು
ಕೆಲವು ಹೂವಾದವು
ಕೆಲವು ಹಣ್ಣಾದವು
ಬರೆದಿಟ್ಟ ಒಂದು
ಕವಿತೆಯಂತೂ ಪಕ್ಷಿಯಾಗಿ, ನೋಡು
ನೀನೇ ಬರೆದದ್ದು
ಕಲಕಲಕಿಸುತ್ತ ನನ್ನ
ಕವಿತೆಯನ್ನೇ ನನ್ನೆದುರು
ಓದಿ ತೋರಿಸಿತು.
ಮತ್ತೆ ಹಾರಿತು ಪಕ್ಷಿ
ನಕ್ಷತ್ರದೆಡೆಗೆ
ಹೆಕ್ಕಿ ತರಲು ಅಕ್ಷರಗಳನ್ನು.
ಇಕೊ ಉಡಿ ತುಂಬ ಹಿಡಿ
ಅಕ್ಷರಗಳನ್ನು.
ಭಾವ ಸ್ವಚ್ಚವಿದ್ದರೆ
ಇಟ್ಟ ಅಕ್ಷರಗಳ ಹಿಂದೆ
ಓಡಿ ಬರುತ್ತವೆ ಅರ್ಥ
ಬರಿದಾಗದೆ ಬರೆಯುತ್ತ
ಬರೆಯುತ್ತ
ಬರಿ ಬದುಕಲ್ಲೋ ಇದು
ಅರಿವಿನ ಅಂತಾರಾತ್ಮ.


One thought on “ಬರೆದಿಟ್ಟ ಕವಿತೆಗಳು

  1. ಮೇಡಂ ತುಂಬಾ ಚೆನ್ನಾಗಿದೆ ಕವಿತೆ.

Leave a Reply

Back To Top