ಗಜಲ್

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ನಿನ್ನ ಕಣ್ಣ ಮಿಂಚು ಹೇಳುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ
ನಿರ್ಧಾರದ ನಗು ಕೇಳುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ

ತಪ್ಪು ನನ್ನದೋ ನಿನ್ನದೋ ಅರಿಯದಾಗಿದ್ದೇವೆ ಇಬ್ಬರು
ಮನದ ಒಲವು ನಂಬಿಸುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ

ಮಕರಂಧ ಹೀರುವ ಮತ್ತಿನಲ್ಲಿ ಮರೆತು ದುಂಬಿ ಅಪ್ಪಿದೆ
ಮುಂಜಾನೆ ತಾವರೆ ಅರಳುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ

ಪ್ರಕೃತಿಯ ಸೊಬಗಿನಲ್ಲಿ ನಮ್ಮದು ಪ್ರೇಮದಾಟವಿದೆ
ಮುಖದಲ್ಲಿ ಇಬ್ಬನಿ ಮೂಡುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ

ಕೇದಿಗೆಯ ತೋಟದಲ್ಲಿ ಹಾವುಗಳೇ ಹೆಚ್ಚು “ಮಾಜಾ”
ಸದಾ ನೆನಪು ಕಾಡುತ್ತಿದೆ ಯಾರನ್ನಾದರೂ ಯಾಕೆ ಪ್ರೀತಿಸಲಿ


Leave a Reply

Back To Top