ನಾ ನಿನ್ನ ನೆರಳಲ್ಲವೇ

ಕಾವ್ಯ ಸಂಗಾತಿ

ನಾ ನಿನ್ನ ನೆರಳಲ್ಲವೇ

ಸಿ.ಶಿವಾನಂದ

.

ನಾ ನಿನ್ನ ನೆರಳಲ್ಲವೇ
ಹೋದಲ್ಲಿಗೆ ನಾ ಹಾಜರಿ
ಕತ್ತಲು ಕವಿದಿದೆ ದೃಶ್ಯ ಮಂದಾಗಿದೆ
ನಾ ಆಶಾವಾದಿ ಬೆಳಕಿಗಾಗಿ ಕಾಯುವೆ..

ನೀ ನನ್ನ ಉಸಿರಲ್ಲವೆ
ನಿನ್ನ ಹೃದಯ ಬಡಿತಕ್ಕೆ
ನನ್ನ ಎದೆ ಕಂಪಿಸುತ್ತಿದೆ
ನಿನ್ನ ಹೆಸರಿನ ಲಬ್ ಡಬ್ ಶ್ರಾವ್ಯ..

ನೀ ನನ್ನರೆಡು ಕಣ್ಣಲ್ಲವೆ
ನನ್ನ ಪಟಲದಲ್ಲಿ ಸದಾ
ನೀ ತುಂಬಿರುವಿ
ಕಣ್ಮನ ಹಾಯಿಸುವಷ್ಟೂ ಗಾವುದ ದೂರ…

ನನ್ನ ಶರೀರ, ಶಾರೀರ ನೀನಲ್ಲವೆ
ನೀ ಅವರ್ಣಿನೀಯ,
ನನ್ನ ಆತ್ಮಬಂಧುವು
ನನ್ನ ಭಾಗ್ಯವಿಧಾತೆಯೂ …

ನನ್ನ ಕನಸಿನ ಮನಸಿನ ದೇವಿ
ನೀನಲ್ಲವೆ
ಒಲಿದಂತೆ ಮಿಡಿಯುವ
ಭಾವಗಳ ಬೆರಗು…


Leave a Reply

Back To Top