ಕಥಾ ಸಂಗಾತಿ
ರಂಗಸ್ವಾಮಿ ಮಾರ್ಲಬಂಡಿ
ಶ್ಯಾವಂತ್ಲೇರು ಗೋತ್ರ
“ಹ್ಞೇ… ಯಮನಮ್ಮ ನಿನ್ ಮಗ್ಗ ಮದ್ವೆ ಮಾಡು ಮೊನ್ನೆ ವದ್ದಾರ ಮತ್ತೆ ವತ್ತ್ಯಾರ ನೋಡು ಅವ್ನೆಗೆ ಅರ್ಥ ಆಗಲ್ಲೇನು ನಾವು ಯಾರು ಅಂತ…?” ” ನಮ್ ಗೋತ್ರ, ನಿಮ್ ಗೋತ್ರ ಬೇರೆ ಏನು ..? “ಆ ಬಸಪ್ಪನವರ ರಾಜ ಮನೆತನ ಬಂದು ಹೇಳಿಹೋದ ಇವನ್ಗೆ ನೋಡಿದ್ರೆ ಆ ಸುಸ್ತಿಗೆ ಯಾರು ಹೆಣ್ಣು ಕೊಡ್ತಾರೇನೊ ಎಂಬ ಗೊಂದಲದಲ್ಲಿದ್ದಾಗ ಪಕ್ಕದ ಮನೆಯ ಮಾಸ್ತರ ನನ್ ಮಗನ ಕರ್ಕೊಂಡು ಬಂದ ಅಲ್ಲಿಬಿದ್ದಿದ್ದ ಎಬ್ಬಿಸಿ ಕುಂದ್ರಿಸಿದ್ರಂತೆ ನಾನು ಗರ್ಜಪ್ಪ ಗುಡಿ ಕಟ್ಟೆಗೆ ಕುಂತಿದ್ರೆ ಕರ್ದು ಕಳುಹಿಸಿದನಂಗೆ ಅವ ಬೀರಪ್ಪ ನವರ ಲಸುಮ ಅಂದ “ನಾನು ಎಷ್ಟು ಹೇಳಿದ್ರು ಕೇಳವಲ್ಲ ಪಾ ಸಿಯ್ಯ ಬಿಡು ಅಂದ್ರೆ ಬಿಡಲ್ಲ ಅವರಪ್ಪ ಇದ್ದಿದ್ರೆ ವದ್ದು ಬಿಡಿಸ್ ತಿದ್ದ ಇವಾಗ ಗಂಡಸ್ರು ಇಲ್ಲದ ಮನೆ ಕೇಳು ಅಂದ್ರೆ ಹೆಂಗ ಕೇಳ್ತಾನೆ ಕೈಗೆ ಬಂದ ಮಗ” ಅಂತ ನಾನು ನನ್ ತಿಪ್ಲನಾ ಅವನ್ಗೆ ತಿಳಿಸಿ ಹೇಳದೆ ಅವನು ನನ್ ಮಾತಿಗೆ ಹ್ಞೂ ಹ್ಞೂ ಅಂತ ನಮ್ಮ ಕಟ್ಟೆ ಮೇಲೆ ಕೂತ.
ನನ್ ಗಂಡ ಸತ್ತು ಈ ಮಣ್ಣೆತ್ತಿನ ಅಮಾಸೆಗೆ ಆರು ವರ್ಷ ಆಗ್ತಾ ಬಂತು ಆತ ಯಾಪಾರ ಮಾಡಿ ಹಾಳ್ ಮಾಡಿ ಹತ್ತಿ ಬಿತ್ತಿದ ಅವ ಮಾಡಿದ ಸಾಲ್ಕ ನಾನು ಹೋದ ವರ್ಷ ಆ ಹುಸೇನಿಯವರ ಒಂಭತ್ತುಗೆ ಐದು ಎಕರೆ ವಲ ಮಾಡ್ಸಿಬಿಟ್ಟೆ ಇಲ್ಲಂದ್ರೆ ಇನ್ನೊಂದು ಎಲ್ಡು ವರ್ಸಕ ಆ ಸಾಲ ನಮ್ ಗನ್ಯಾಲಮಾಗಿ ಹತ್ತು ಎಕ್ರೆ ವಲ ತಿಂದು ಬಿಡುತಿತ್ತು ಅದ್ಕೆ ಪಂಚಾಯಿತಿ ಹಾಕಿ ವೋದ ವರ್ಷ ಬಗೆಹರ್ಸಿಬಿಟ್ಟೆ.
ಟೀ ಕಾಸಿಕೊಂಡು ಹೋಗಿ ಪ್ಯಾಂಟಿಣಿಗೆ ಮೇಲೆ ಕೂತು ಮಾಸ್ತ್ರನತ್ರ ಸುದ್ದಿ ಶುರುಮಾಡಿದೆ.
ನೋಡಪ್ಪ ಇವ ವಲ್ದಾಗ ಬದ್ಕು ಮಾಡೋದು ಕಲಿ ಅಂದ್ರೆ ಆಕೆ ಹಿಂದೆ ಬಿದ್ದೆ ,ಈಕೆ ಹಿಂದೆ ಬಿದ್ದೆ ಅಂತ ನೀನಾದ್ರು ಹೇಳಪ್ಪ…! ಅಂದೆ
ಅದಕ್ಕವ ಅದು ಕರೆಬಿಡು ಅದೆಲ್ಲ ಯಾಕೆ ಬೇಕು ಇನ್ನ ಸಣ್ ವಯಸು ಸುಮ್ನೆ ಇದ್ರಾಯಿತು…
ನೋಡು ತಮ್ಮ ಹೇಳು ಸಲ್ಪ ಬೇಸು ಹ್ಞಾ..! ಇವ್ನಿಗೆ ಅರ್ಥ ಆಗವಲ್ದು ಎಂದ ನನಗೆ ಹೋಗ್ಲಿ ಬಿಡಕ್ಕ ನನಗೆ ಸಲ್ಪ ಕೆಲ್ಸ ಆಯ್ತೆ ಬರ್ತೀನಿ ಅಂತೇಳಿ ಎದ್ದು ಹೋದ.!
ಆಗಿನ್ನು ವಯಸ್ಸು ನನಗೆ ನಲ್ವತ್ತು ಇದ್ವೇನೊ ಈ ನನ್ ಗಂಡ ಮಾತ್ ಮಾತ್ಗೆ ಉರುಕುಂದುಗೆ ಹೋತಿದ್ದ ಅಲ್ಲಿ ಮೊದ್ಲನೇ ಹೆಣ್ತಿ ಇದ್ಳು ಅದ್ಕೆ ಅವ ವಾರಕ್ಕೊಂದು ಸಾರಿ ಅಲ್ಲಿಗೋತಿದ್ದ ಇಲ್ಲಿ ಸಣ್ ಹೆಣ್ತಿ ಬಾಳೆವು ಗಮನ ಹರ್ಸಲಾರದಂಗ…! ನಾನು ಒಂದಿನ ಅಲ್ಲಿಗೆ ಹೋಗ್ಯಾನ ಅನ್ಕಂಡು ನಾನು ನನ್ ಗೆಳೆಯನ ಕರಿಸಿದ್ದೆ ಅವತ್ತು ಅವ ಹೊಗೆಸೆಟ್ನಲ್ಲಿ ಕೂತಿದ್ದ ಮಾರಾಯ….
ನಾನು ನೋಡಿದ್ರೆ ನನ್ಗೆ ಮಗ ಬೇಕೆಂತೇಳಿ ನಮ್ ವಂಶ ಉದ್ಧಾರ ಮಾಡಕ ಅವ್ನ ಜತೆ ಕಟ್ಟಿದ್ದೆ ಇವ್ನ ಅಂದರೆ ನನ್ ಗಂಡನ ರಸ್ದಾಗ ಬೀಜ ಇಲ್ಲಂತೇಳಿ ನಾನು ಆ ಲಸುಮನವರ ಅಪ್ಪ ಹನುಮಂತ ನ ಜತೆ ಕಟ್ಟಿದ್ದೆ ನಾನು ಮದ್ವೆಕ್ಕಿಂತ ಮೊದ್ಲು ಅವ್ನ ಜತೆ ಇದ್ರೂನೂ ನಾನು ಮದ್ವೆ ಆದಮೇಲೆ ಅವ್ನ ಜತೆ ಬಿಟ್ಟಿದ್ದೆ, ಮದ್ವೆ ಆಗಿ ನಾಕು ವರ್ಷ ಆದ್ರೂ ಮಕ್ಳಾಗಲಿಲ್ಲಂತೇಳಿ ನಮ್ ಅತ್ತೆ ನನ್ ಗಂಡಗ ಮೂರ್ನೆ ಮದ್ವೆ ಮಾಡಕ ಶುರು ಮಾಡಿದಾಗ ನಾನು ಅನಿವಾರ್ಯವಾಗಿ ನನ್ನ ಹಳೆ ಜತೆಗಾರನ ಜತೆ ಕಟ್ಟಿದೆ, ನಮ್ ಅತ್ತೆ ವೂರಗಿಲ್ಲದ ಸೂಳೆ ಮಗಳಿಗಾದ್ರೆ ಮಕ್ಳಲಿಲ್ಲಂದ್ರೆ ಆ ದೇವರು ಈ ದೇವರು ಅಂತ ತಿರ್ಗತಾಳೆ ನಮ್ನಾದರೆ ಆಕೆ ಅವ್ಯಾವು ಇರ್ಲದಂಗ ಇನ್ನೊಂದು ಇನ್ನೊಂದ ಮದ್ವೆ ಮಾಡಾಕೊಂಟಾಳ ಬೆರ್ಕಿ ಹೆಂಗಸು ತುಡುಗಿ…!
ಗರ್ಜಳ್ಳದ ವಲ್ದಾಗ ನಾನು ಎಮ್ಮೆ ಮೇಸಾಕೆ ಹೋಗಿ ಗೆಳೆಯನ ಮಾನಣ್ಣು ತಿಂದು ಎಮ್ಮೆಗಳ್ನ ಹಳ್ಳದಾಗ ಇಸಾಡಕ ಬಿಟ್ಟು ಅವನತ್ರ ಕುಂತಾಗ” ನಾನು ನಿನ್ನ ಬಿಟ್ಟಿಲ್ಲ ಮನಸಾರೆ ಇಷ್ಟ ಪಟ್ಟೀನಿ ಮದ್ವೆ ಆಗಿ ಬಿಡೋಣ ನಡಿ ನೀನ ಯಾಕ ಅವನ್ಗೆ ಎಲಡ್ನೆ ಹೆಣ್ತಾಗಿ ಯಾಕ ಇರ್ತಿ” ಅಂದಿದ್ದ ಅದ್ಕ ನಾನು ನೋಡ ನಾನು ನಿನ್ ಹತ್ರ ಬರೋದು ಮಗನ ಸಲುವಾಗಿ ನಮ್ ಮಾವನ ಬೀಜ್ಕ ಮಗ ಆಗಿದ್ರೆ ನಿನ್ನ ತಿರ್ಗಿ ಕೂಡ ನೋಡತಿದ್ದಿಲ್ಲ ಅಂತೇಳಿ ಎದ್ದು ಬಂದಿದ್ದೆ, ಅವ್ನು ಹಂಗಂದಾಗ ನಾನು ಹೋಗಿದ್ರೆ ಅವ್ನ ಶ್ಯಾವಂತ್ಲೇರು ಗೋತ್ರ ನನ್ ಮಗ್ಗ ಬರ್ತಿತ್ತು ಇವತ್ತು ಜಗ್ಳ ಮಾಡಿದ್ದು ಕೇಳ್ದಾಗ ನಾನು ಆಕೆನಾ ಎಬ್ಸಿಕೊಂಡು ಬಾ ಅಂತಿದ್ದೆ …
ಏನೇ ಆಗ್ಲಿ ಬಿಡು ಅಂತ ಮನಸ್ಸನ್ನ ಸಮಾಧಾನ ಮಾಡಿಕೊಂಡು ನಾನು ಮತ್ತೆ ನನ್ ಮಗನ ಎಬ್ಬಿಸೋಕೆ ಶುರು ಮಾಡಿ , ಎಬ್ಬಿಸಿ, ಅಲ್ಲಿ ಗೊಜ್ಜಲಳ್ಳದಲ್ಲಿ ಇರೊ ನಮ್ ತಮ್ಮ ಕೋನುಕೂರು ಗುರ್ಲಿಂಗನಿಗೆ ನನ್ ಮಗ್ಗ ಹೆಣ್ ಹುಡುಕು ಅಂತೇಳಿ ಏಳಿ ಬರೋನು ಅಂತೇಳಿ ತಲೆಗೆ ಸೆರ್ಗಕ್ಕಂಡು ಗರ್ಜಳ್ಳದ ಕಡೆ ಹೋದೆ.
ರಂಗಸ್ವಾಮಿ ಮಾರ್ಲಬಂಡಿ
Wow…
Keep going bro…✌