ಆಹುತಿ.

ಕಥಾ ಸಂಗಾತಿ

ಜ್ಯೋತಿ  ಡಿ  , ಬೊಮ್ಮಾ.

ಆಹುತಿ.

ವಿಕಾಸ ಎರಡು ಕೈಗಳಿಂದ ತಲೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಹಿಂದಕ್ಕೊರಗಿದ.ತಲೆಯಲ್ಲೆಲ್ಲ ಕೋಲಾಹಲ. ಸಮಸ್ಯೆ ಇಷ್ಟು ಜಟಿಲವಾಗಬಹುದೆಂದು ಊಹಿಸಿಯು ಇರಲಿಲ್ಲ.ತಾನು ಪ್ರೀತಿಸಿದ್ದೆ ದೊಡ್ಡ ಅಪರಾಧ ಎಂಬತೆ ಮುನಿಸಿಕೊಂಡ ಮನೆಯವರ ಮೇಲೆ ಸಿಟ್ಟು ಬರತೊಡಗಿತು. ಪ್ರೀತಿ ಏನು ಹೇಳಿ ಕೇಳಿ ಆಗುತ್ತದೆಯೇ, ಅದು ಘಟಿಸುತ್ತದೆ.ತನಗೂ ಆಯಿತು ಅಷ್ಟೆ.ಕುಲ ಗೋತ್ರ ನೋಡಿ ಪ್ರೀತಿಸಬೇಕಂತೆ. ಎಲ್ಲವನ್ನೂ ನೋಡಿ ಪ್ರೀತಿಸುವದು ಪ್ರೀತಿಯಾಗಲಾರದು , ಹೊಂದಾಣಿಕೆಯಾಗುತ್ತದಷ್ಟೆ.

ಹಾಗೆ ನೋಡಿದರೆ ವಿಕಾಸನಿಗೆ ಪ್ರೀತಿ ಪ್ರೇಮದ ವಿಷಯಗಳೆಡೆ ಆಸಕ್ತಿ ಇರಲಿಲ್ಲ.ಸಹಪಾಠಿಗಳು ಹುಡುಗಿಯರ ಬಗ್ಗೆ ಕುತೂಹಲಿಗಳಾಗಿದ್ದರು ಇವನು ಹುಡುಗಿಯರ ವಿಷಯದಲ್ಲಿ ಅತಿ ಆಸಕ್ತಿ ಹೊಂದಿದವನೆ ಅಲ್ಲ . ಓದಿನಲ್ಲಿ ಚುರುಕಾಗಿದ್ದ ಅವನು ಪ್ರತಿ ಕ್ಲಾಸ್ ನಲ್ಲೂ ಫಸ್ಟಕ್ಲಾಸ್ ನಲ್ಲಿ ಪಾಸಾಗುತ್ತ ಮುಂದುವರೆಯುತಿದ್ದ. ಎಮ್ ಬಿ ಎ  ಮುಗಿಸಿ ಉನ್ನತ ವ್ಯಾಸಂಗಕ್ಕಾಗಿ ಹೊರದೇಶಕ್ಕೆ ಹೋಗುವ ಕನಸು ಹೊತ್ತಿದ್ದ. ಒಬ್ಬನೆ ಮಗನಾದ ಅವನ ಆಸೆಗೆ ಪೊಷಕರ ಬೆಂಬಲವೂ ಇತ್ತು.

ಚಿಕಾಗೋ ಯುನಿವರ್ಸಿಟಿ ಯಲ್ಲೆ ಅವನಿಗೆ ರಶ್ಮಿ ಯ ಪರಿಚಯವಾಗಿದ್ದು.ಇಬ್ಬರೂ ಸಹಪಾಠಿಗಳು ಒಂದೇ ಭಾಷೆಯವರಾದ ಕಾರಣ ಸಹಜವಾಗಿ ಆತ್ಮೀಯತೆ ಬೆಳೆದಿತ್ತು.ನೀಳಕಾಯದ ಸ್ನೇಹಪರತೆಯ ರಶ್ಮಿಯ ಸ್ನೇಹ ವಿಕಾಸನಿಗೆ ಪರದೇಶದಲ್ಲಿನ ಎಕತಾನತೆಯ ಭಾವ ಹೊಡೆದೂಡಿಸುವಲ್ಲಿ ಸಹಕಾರಿಯಾಗಿತ್ತು. ರಶ್ಮಿ ಭಾರತದ ಇನ್ನೂ ಕೆಲವು ಹುಡುಗಿಯರೊಂದಿಗೆ ಒಂದು ಮನೆಯಲ್ಲಿ ವಾಸಿಸುತಿದ್ದಳು. ವಿಕಾಸನು ತನ್ನ ಕೆಲಸಹಪಾಠಿಗಳೊಂದಿಗೆ ಮನೆ ಶೇರ್ ಮಾಡಿಕೊಳ್ಳುತಿದ್ದನು. ಅಲ್ಲಿ ಭಾರತದ ಅನೇಕ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ಇದ್ದರು.ತಮಗೆ ಬೇಕಾದ ಆಹಾರ ತಾವೆ ತಯ್ಯಾರಿಸಿಕೊಳ್ಳಬೇಕಿತ್ತು.  ಅವರೆಲ್ಲರ ಭಾಷೆ ಆಹಾರ ಪದ್ಧತಿಗಳೆಲ್ಲ ಬೇರೆ ಬೇರೆಯಾಗಿದ್ದರೂ ಅಲ್ಲಿ ತಾವೆಲ್ಲ ಭಾರತಿಯರು ಎಂಬ ಒಗ್ಗಟ್ಟು ಇರುತಿತ್ತು. ಅಲ್ಲಿನ ಜೀವನ ಭಾರತದಲ್ಲಿರುವಷ್ಟು ಸುಲಭವಲ್ಲ , ಅಲ್ಲಿನ ಅವರ ಖರ್ಚು ತೂಗಿಸಲು ಅವರ ಪೋಷಕರು ಇಲ್ಲಿ ಹೆಣಗಬೇಕಾಗಿರುತ್ತದೆ. ಎಷ್ಟು ಹಣ ಕಳಿಸಿದರು ಅಲ್ಲಿನ ಜೀವನ ಪದ್ದತಿಗೆ ಅದು ಏನೇನು ಸಾಕಾಗುತ್ತಿರಲಿಲ್ಲ. ಡಾಲರ್ ನ್ನು ರೂಪಾಯಿಗಳಿಗೆ ಕನ್ವರ್ಟ ಮಾಡಿ ಖರ್ಚು ಮಾಡಲು ಹಿಂದೆಟು ಹಾಕಬೇಕಾಗುತಿತ್ತು. ಮುಂಜಾನೆ ಅಡುಗೆ ಮಾಡಿಕೊಂಡು ತಿಂದು ಡಬ್ಬಿಗೆ ಹಾಕಿಕೊಂಡು ಹೋಗಬೇಕು.ಮನೆಗೆ ಬರುವಷ್ಟರಲ್ಲಿ ಸುಸ್ತು.ಮತ್ತೆ ಅಡುಗೆ ಮಾಡಿಕೊಂಡು ತಿನ್ನಲು ಮನ ಒಪ್ಪುತ್ತಿರಲಿಲ್ಲ. ಊಟ ತಿಂಡಿಗೆ ದುಡ್ಡು ಸುರಿಯುವದು ಅಂದರೆ ಅತಿ ದುಬಾರಿ.ಎಷ್ಟೋ ರಾತ್ರಿಗಳು ಬರಿ ಜ್ಯೂಸ್ ಕುಡಿದೆ ಮಲಗುತಿದ್ದವು ಹುಡುಗರು. ಪರದೇಶದಲ್ಲಿ ಓದುತ್ತಿರುವದು ಇರುವದು ಹೆಮ್ಮೆ ವಿಷಯ ಎನಿಸಿದರು ಅವರು ಪಡುವ ಪರಿಪಾಟಲು ಅವರಿಗೆ ಗೊತ್ತು. ನಮ್ಮ ದೇಶದಲ್ಲಿ ಮಕ್ಕಳಿಗೆ ಮದುವೆ ಮಾಡಿಯೂ ಅವರನ್ನು ತಂದೆಯಾಯಿಗಳೆ ಸಲಹುತ್ತಾರೆ.ಆದರೆ ಅಮೆರಿಕದಲ್ಲಿ ಎಲ್ಲರದು ಸ್ವಾವಲಂಬಿ ಬದುಕು.

 ವಿಕಾಸ್ ಮತ್ತು ರಶ್ಮಿಯರು ತಮ್ಮ ವಿದ್ಯಾಭ್ಯಾಸ ದೊಂದಿಗೆ ಪಾರ್ಟ ಟೈಮ್ ಜಾಬ್ ಮಾಡಲು ನಿರ್ಧರಿಸಿದರು.ಅವರ ಪೋಷಕರು ಕಳಿಸುವ ದುಡ್ಡು ಅವರ ವಿದ್ಯಾಭ್ಯಾಸ ಮತ್ತು ಊಟತಿಂಡಿಗೆ ಬಿಟ್ಟರೆ ಮತ್ತಾವದಕ್ಕೂ ಸಾಕಾಗುತ್ತಿರಲಿಲ್ಲ. ಇಬ್ಬರಿಗೂ ಒಂದು ದೊಡ್ಡ ಮಾಲ್ ನಲ್ಲಿ ಸೇಲ್ಸಮನ್ ಕೆಲಸ ದೊರಕಿತು. ತಮ್ಮ ಕಾಲೇಜಿನ ಸಮಯದ ನಂತರ ಇಬ್ಬರೂ ಜೊತೆಯಾಗಿ ಕೆಲಸಕ್ಕೆ ತೆರಳುತಿದ್ದರು .ವಿಕೆಂಡ್ ಗಳಲ್ಲಿ ಬೇರೆ ಬೇರೆ ಸ್ಥಳಗಳನ್ನು ನೋಡಲು ತೆರಳುತಿದ್ದರು.ಹೆಚ್ಚಾಗಿ ರಶ್ಮಿ ಯೇ ವಿಕಾಸನ ಊಟತಿಂಡಿಗಳ ವ್ಯವಸ್ಥೆ ನೋಡಿಕೊಳ್ಳುತಿದ್ದಳು.ಅಡುಗೆ ಬಾರದ ಅವನಿಗೆ ಬೆಯಿಸಿಕೊಂಡು ತಿನ್ನುವದು ಒಂದು ದೊಡ್ಡ ತೊಂದರೆಯಾಗಿತ್ತು. ಹೊಟ್ಟೆಯಿಂದ ಶುರುವಾದ ಆತ್ಮೀಯತೆ ಇಬ್ಬರ ನಡುವೆ ಪ್ರೀತಿಯ ಮೊಳಕೆ ಚಿಗುರಿಸಿತು.

ವ್ಯಾಲನ್ಟೈನ್ ದಿನದಂದು ವಿಕಾಸನು ರಶ್ಮಿ ಗೆ  ಕೆಂಪು ಗುಲಾಬಿಯನ್ನಿತ್ತು ತನ್ನ ಪ್ರೇಮ ನೀವೇದನೆಯನ್ನು ಮಾಡಿದ ಅವಳು ಅವನ ತುಟಿಗೆ ಹೂ ಮುತ್ತನಿಟ್ಟು ತನ್ನ ಒಪ್ಪಿಗೆ ಸೂಚಿಸಿದಳು. ರಶ್ಮಿ ವಿಕಾಸರು ತಮ್ಮ ತಮ್ಮ ವಾಸ್ತವ್ಯ ಬಿಟ್ಟು ಒಂದೇ ಮನೆಯಲ್ಲಿ ವಾಸಿಸಲು ನಿರ್ಧರಿಸಿದರು. ಕಾಲೇಜಿನ ಸಮಿಪವೆ ಒಂದು ಮನೆ ಬಾಡಿಗೆ ಪಡೆದುಕೊಂಡರು ವಾಸಿಸತೊಡಗಿದರು.ಬೆರೆತ ಮನಸ್ಸುಗಳು ದೇಹಗಳ ನಿರ್ಭಂಧನೆಯ ಯಾವ ಪ್ರಯತ್ನವು ಮಾಡಲಿಲ್ಲ. ಎರಡು ವರ್ಷ ಒಂದು ಮನೆಯಲ್ಲಿ ಇದ್ದರು ಜೋಡಿ ಹಕ್ಕಿಗಳಂತೆ ಪ್ರಪಂಚದ ಪರಿವೆ ಬಿಟ್ಟು. ಅವರ ಮನೆಯವರಿಗೆ ಈ ಯಾವ ವಿಷಯಗಳ ಅರಿವು ಇರಲಿಲ್ಲ.

ಇಬ್ಬರವಿದ್ಯಾಬ್ಯಾಸ   ಮುಗಿದು ತಾಯ್ನಾಡಿಗೆ ಮರುಳುವ ಸಮಯ ಬಂದಿತು.ಅಲ್ಲೆ ಉಳಿದು ನೌಕರಿ ಹುಡುಕುವ ಪ್ರಯತ್ನ ಮಾಡಿದ್ದರೂ ಆದರೆ ಅಮೇರಿಕದಲ್ಲೆ ಉದ್ಯೋಗ ದ ಅಭಾವ ಸೃಷ್ಟಿ ಯಾಗಿದ್ದರಿಂದ ಅವರು ಮರಳಬೇಕಾಯಿತು.

ತಮ್ಮ ದೇಶಕ್ಕೆ ಬಂದ ಕೆಲವೆ ದಿನಗಳಲ್ಲಿ ಅವರಿಗೆ ಉದ್ಯೋಗ ವು ದೊರಕಿತು.ಇಬ್ಬರಿಗೂ ಬೇರೆಬೇರೆ ಊರಲ್ಲಿ.

ಅಷ್ಟರಲ್ಲಾಗಲೆ ಇಬ್ಬರ ಮನೆಯಲ್ಲೂ ಮದುವೆಗೆ ಒತ್ತಡ ಬರತೊಡಗಿತು . ರಶ್ಮಿ ತನ್ನ ಮನೆಯಲ್ಲಿ ಮೊದಲೆ ವಿಷಯ ತಿಳಿಸಿದ್ದಳು.ಮಗಳು ಇಷ್ಟಪಟ್ಟವನೊಂದಿಗೆ ಅವಳ ಮದುವೆ ಮಾಡಲು ಅವಳ ಪೋಷಕರು ಸಿದ್ದರಿದ್ದರು.

ತೊಂದರೆ ಆಗಿದ್ದು ವಿಕಾಸನ ಮನೆಯಲ್ಲಿ.ಅತಿ ಸಂಪ್ರದಾಯವಾದಿಗಳಾದ ಅವನ ತಾಯಿ  , ಪ್ರೀತಿ ಪ್ರೆಮವಿರಲಿ ಜಾತಿ ಮೌಡ್ಯಗಳನ್ನು ಅತಿಯಾಗಿ ನಂಬುವವರು . ವಿಕಾಸನಿಗೆ ಯಾವ ಭಯವಿತ್ತೊ ಅದೇ ನಿಜವಾಯಿತು. ಅವನ ಪ್ರೀತಿ ಯನ್ನು ಯಾವದೇ ಕಾರಣಕ್ಕೂ ಒಪ್ಪಲಾಗದೆಂದು ಕಡ್ಡಿತುಂಡು ಮಾಡಿದಂತೆ ಹೇಳಿಬಿಟ್ಟರು. ವಿಕಾಸ ಅವರನ್ನು ಒಲಿಸಲು ಪ್ರಯತ್ನಿಸಿದಷ್ಟು ಅವರ ಹಠ ಹೆಚ್ಚುತಿತ್ತೆ ಹೊರತು ಅವನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಅವರು ಮಾಡಲೇ ಇಲ್ಲ.

ಎನಾದರು ಸರಿ ತನು ರಶ್ಮಿಯನ್ನೆ ಮದುವೆಯಾಗುವದಾಗಿ ಹಠ ಹಿಡಿದ ವಿಕಾಸ , ಅಸಾಧ್ಯ ಎಂದು ಪಟ್ಟು ಹಿಡಿದರು ಅವನ ತಾಯಿ. ಒಂದೆಡೆ ರಶ್ಮಿ ಯ ಆತುರ ಇನ್ನೊಂದೆಡೆ ತಾಯಿಯ ಹಠ , ಅಕ್ಷರಶಃ ನಲುಗಿ ಹೋದ ವಿಕಾಸ. ತಾನು ಇನ್ನಷ್ಟು ಹಠ ಮಾಡಿದರೆ ಹೃದ್ರೋಗಿ ಯಾದ ತಾಯಿಗೆ ಎಲ್ಲಿ ಆಪತ್ತು ಸಂಭವಿಸುವದೋ ಎಂದು ಮೌನವಾಗಿಬಿಟ್ಟ. ತಂದೆ ತಾಯಿಯರನ್ನು ಎದುರು ಹಾಕಿಕೊಂಡು ರಶ್ಮಿಯನ್ನು ವರಿಸುವದು ಅಸಾದ್ಯವಾಗಿತ್ತು ಅವನಿಗೆ.

ಹೀಗೆ ದಿನಗಳು ಉರಳತೊಡಗಿದವು.ವಿಕಾಸನ ಪೋಷಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ.ಒಬ್ಬನೆ ಮಗನೆಂದು ಮುದ್ದಿನಿಂದ ಬೆಳಸಿದ ಅವರು ಮಗ ಪ್ರೀತಿಸಿದ್ದಾನೆಂದು ತಿಳಿದಿದ್ದೆ ತಡ ವೈರಿಯಂತಾಡತೊಡಗಿದರು.

ತಾವು ಇಷ್ಟಪಟ್ಟವರನ್ನೆ ಮಕ್ಕಳು ಮದುವೆಯಾಗಬೇಕೆಂಬ ಆಸೆ ಎಲ್ಲಾ ಪೋಷಕರಿಗೆ ಇರುವದು ಸಹಜ.ಆದರೆ ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಳ್ಳುವದು ಪೋಷಕರ ಕರ್ತವ್ಯವಾಗಿದೆ.

ಮಗಳ ನಿರ್ಧಾರ ವನ್ನು ಸಂತೋಷದಿಂದ ಒಪ್ಪಿದ ರಶ್ಮಿ ಯ ತಂದೆತಾಯಿಯರಿಗೆ ವಿಕಾಸನ ಪರಿವಾರದಿಂದ ವಿರೋಧ ವ್ಯಕ್ತವಾಗಿರುವದು ತಿಳಿಯಿತು. ವಿಕಾಸನ ನಿರ್ಧಾರ ಕ್ಕಾಗಿ ಕಾಯತೊಡಗಿದರು.ಹೇಗೆ ಒಂದು ವರ್ಷ ಕಳೆಯಿತು.ರಶ್ಮಿ ಯ ಪೋಷಕರ ತಾಳ್ಮೆ ಮೀರತೊಡಗಿತು. ಇಷ್ಟರಲ್ಲಿ ರಶ್ಮಿ ಗೆ ವಿಕಾಸ ಅವನ ಪೋಷಕರನ್ನು ಮೀರಿ ತನ್ನ ವರಿಸುವದಿಲ್ಲ ಎಂಬುದು ಅರಿವಾಗಿತ್ತು.ವಿಕಾಸ ಬಾಯಿಬಿಟ್ಟು ಹೇಳದಿದ್ದರು ಅವನ ಮೌನ ಅದನ್ನೆ ಸಾರುತಿತ್ತು.

ರಶ್ಮಿ ಕೋಪಗೊಂಡಳು , ಚಿರಾಡಿದಳು ,ಅವನನ್ನು ಬಿಟ್ಟು ಬದುಕಲಾಗದೆಂದು ಬೇಡಿಕೊಂಡಳು .ವಿಕಾಸ  ಅಸಹಾಯಕನಾಗಿದ್ದ , ಅವನಿಗೂ ರಶ್ಮಿಯನ್ನು ಬಿಟ್ಟಿರುವದು ಸುಲಭವಾಗಿರಲಿಲ್ಲ ,ತನ್ನ ಪರಿವಾರವನ್ನು ಬಿಡುವ ದೈರ್ಯವೂ ಇರಲಿಲ್ಲ.

ಬೆರೆ ಉಪಾಯ ಕಾಣದೆ ಮನಸ್ಸು ಕಲ್ಲುಮಾಡಿಕೊಂಡು ರಶ್ಮಿ ವಿಕಾಸನಿಂದ ದೂರವಾದಳು.ಮುಂದೆ ಕೆಲವೆ ದಿನಗಳಲ್ಲಿ ಅವಳ ತಂದೆತಾಯಿ ಅವಳ ವಿವಾಹ ಮಾಡಿದರು.

ವಿಕಾಸನ ಜೀವನ ಯಾಂತ್ರಿಕವಾಗಿ ಸಾಗುತಿತ್ತು.ಅವನು ಪುರ್ಣವಾಗಿ ಮೌನವಾಗಿದ್ದ.

ಅವನ ತಂದೆ ತಾಯಿ ಮಗ ತಮ್ಮ ಮಾತು ಕೇಳಿದ ಎಂದು ಬೀಗಿ ಅವನ ಮದುವೆಗೆ ಹೆಣ್ಣು ಹುಡುಕತೊಡಗಿದರು.ವಿಕಾಸ ಎಲ್ಲದರಲ್ಲೂ ನಿರಾಸಕ್ತನಾಗಿದ್ದ. ಅವನ ತಾಯಿ ಮುಂದಾಗಿ ತಮ್ಮ ಬಳಗದಲ್ಲೆ ಒಂದು ಹೆಣ್ಣು ನೋಡಿದರು. ಹೆಣ್ಣುನೋಡುವಂತೆ ವಿಕಾಸನಿಗೆ ಒತ್ತಾಯಿಸತೊಡಗಿದರು.ಆದರೆ ವಿಕಾಸ  ತನ್ನ ಮೊದಲ ಪ್ರೇಮ ಪ್ರಕರಣ ಆ ಹುಡುಗಿಗೆ ತಿಳಿಸಿ ಅವಳು ಒಪ್ಪಿದರೆ ಮಾತ್ರ ಮದುವೆಯಾಗಲು ತಿಳಿಸಿದ. ಅವನ ತಾಯಿಗೆ ಮನಸ್ಸಿಲ್ಲದಿದ್ದರು ಒಪ್ಪಿದರು.

ನಿಶ್ಚಿತಾರ್ಥ ಕ್ಕೂ ಮೊದಲು ಜಯಾಳನ್ನು ಭೆಟಿಯಾಗಿ ವಿಕಾಸ ತನ್ನ ಮತ್ತು ರಶ್ಮಿ ಯ ಪ್ರೆಮದ ಕುರಿತು ಎನು ಮುಚ್ವಿಡದೆ ಹೇಳಿದ.ನಿರ್ದಾರ ಜಯಾಳ ಮೇಲೆ ಬಿಟ್ಟು ನಿರಾಳನಾದ.

ಮದುವೆಯಾದ ಮೇಲೆ ಮುರಿದು ಬಿದ್ದ ಎಷ್ಟೊ ಪ್ರಕರಣ ನೋಡಿದ್ದ ಜಯಾಳಿಗದ ಮದಲೆ ವಿಕಾಸ ಎಲ್ಲವನ್ನು ಹೇಳಿದ್ದಕೆ ಅವನ ಪ್ರಮಾಣಿಕತೆಗೆ ಮೆಚ್ಚಿದಳು .ಮದುವೆಗೆ ಸಮ್ಮತಿಸಿದಳು.

ಜಯಾ ಮತ್ತು ವಿಕಾಸರ ಮದುವೆಯಾಗಿ ಎರಡು ವರ್ಷ ವಾಯಿತು.ಅವರಿಗೆ ಒಂದು ಮಗುವು ಆಯಿತು.ವಿಕಾಸನ ಜೀವನದಲ್ಲಿ ರಶ್ಮಿಯಿಂದ ತೆರವಾಗಿದ್ದ ಸ್ಥಳ ಜಯಾ ತುಂಬಿದ್ದಳು.ಅಥವಾ ಬದುಕು ತುಂಬಿಸಿಕೊಂಡಿತ್ತು.

ಒಂದು ಸಲ ವಿಕಾಸ ಮತ್ತು ಜಯಾ ಪರಿಚಯದವರೊಬ್ಬರ ಮದುವೆಗೆ ತೆರಳಿದ್ದರು.ಅದೇ ಸಮಾರಂಭಕ್ಕೆ ರಶ್ಮಿ ಯ ಅವಳ ಗಂಡನೊಡನೆ ಆಗಮಿಸಿದ್ದಳು. ಎರಡು ವರ್ಷಗಳ ನಂತರ ದ ಭೆಟಿ ವಿಕಾಸ ರಶ್ಮಿಯರ ಮನಕ್ಕೆ ಮುದವನ್ನುಂಟು ಮಾಡಿತ್ತು.ಪರಸ್ಪರ ತಮ್ಮ ಗಂಡ ಹೆಂಡತಿಯರ ಪರಿಚಯ ಮಾಡಿಕೊಟ್ಟರು.ರಶ್ಮಯ ಗಂಡ ವಿಕಾಸನನ್ನು ಆತ್ಮೀಯವಾಗಿ ಕಂಡ. ರಶ್ಮಿ ಮತ್ತು ಅವಳ ಗಂಡ ಅನ್ನೊನ್ಯವಾಗಿರುವಂತೆ ಕಂಡರು ವಿಕಾಸನಿಗೆ.

ಪ್ರೇಮವೆನ್ನುವದು ನಿರಂತರ ಹರಿವ ನದಿ. ವಿಕಾಸನಿಗೆ ಒಮ್ಮೊಮ್ಮೆ ಆಶ್ಚರ್ಯ ವಾಗುತ್ತದೆ.ತಾನು ರಶ್ಮಿ ಒಬ್ಬರನೊಬ್ಬರು ಬಿಟ್ಟು ಅಸಾದ್ಯ ವೆಂದುಕೊಂಡವರು ಹೇಗೆ ಬದುಕಿತಿದ್ದೆವೆ.

! ಅದು ಮತ್ತೊಬ್ಬ ವ್ಯಕ್ತಿಯೊಂದಿಗೆ. ತಾನು ಜಯಾಳನ್ನು ಪ್ರೀತಿಸುತ್ತೆನೆಯೇ..ರಶ್ಮಿ ಅವಳ ಗಂಡನನ್ನು..! ಪ್ರಿತಿಸದೆ ಒಟ್ಟಿಗೆ ಬದುಕಲಾಗುವದೇ. ಈಗ ತಾವು ಜೊತೆಗಿದ್ದದ್ದು ಪ್ರೀತಿಯಿಂದಲೇ ಅಥವಾ ಹೊಂದಾಣಿಕೆಯಿಂದಲೋ , ಉತ್ತರವಿರದ ಪ್ರಶ್ನೆಗಳು. ಜವಾಬ್ದಾರಿಗಳು ಎಲ್ಲಾ ಪ್ರಶ್ನೆಗಳನ್ನು ಮರೆಸುತ್ತವೆ.ಬದುಕು ಕೈಬೀಸಿ ಕರೆಯುತ್ತದೆ.ಮಕ್ಕಳ ಭವಿಷ್ಯ ಕಣ್ಮುಂದೆ ಬಂದಾಗ ಹಿಂದಿನ ಪ್ರೀತಿ ಪ್ರೆಮಗಳೆಲ್ಲ ನಗಣ್ಯ ವೆನಿಸುವದುಂಟು.

ಹಿಂದಿನದೆಲ್ಲ ಮರೆತ ವಿಕಾಸ ರಶ್ಮಿಯರು ಒಂದು ಮಧುರ ಸ್ನೇಹವನ್ನು ಹೊಂದಿದ್ದರು ಈಗ.

ಇತ್ತಿಚೆಗೆ ಜಯಾ ಅನ್ಯಮನಸ್ಕಳಾಗತೊಡಗಿದಳು.ಸದಾ ಸಿಟ್ಟು , ಸಿಡಿಮಿಡಿ , ಗಂಡನನ್ನು ಕಂಡರೆ ಕೋಪ , ವಿಕಾಸ ಮನೆಗೆ ಬರುವದು ಸ್ವಲ್ಪ ತಡವಾದರು ಕಂಗಾಲಾಗುತಿದ್ದಳು.ಅವನು ಪೋನ್ ರಿಸಿವ್ ಮಾಡುವದು ಸ್ವಲ್ಪ ತಡವಾದರು. , ಅವನ ಫೋನ್ ಎಂಗೇಜ್ ಬಂದರು ನೂರೆಂಟು ಪ್ರಶ್ನೆ ಕೇಳಿ ತಲೆ ಚಿಟ್ಟು ಹಿಡಿಸುತಿದ್ದಳು.

ರಶ್ಮಿಯನ್ನು ಭೆಟಿಯಾದಂದಿನಿಂದಲೂ ಅವಳ ತಲೆಯಲ್ಲಿ ಅನುಮಾನದ ಕೀಟ ಹೊಕ್ಕಿಬಿಟ್ಟಿತ್ತು. ಅದು ಬೆಳೆಯುತ್ತ ಬೃಹತ್ತಾಗಿ ಅವಳನ್ನು ಪೂರ್ಣವಾಗಿ ತನ್ನ ಆಪೋಷನಕ್ಕೆ ತೆಗೆದುಕೊಂಡು ಬಿಟ್ಟತ್ತು. ವಿಕಾಸನಿಗೆ ಯಾವದೆ ಫೋನ್ ಬರಲಿ ರಶ್ಮಿ ಯದೆ ಇರಬಹುದೆಂದುಕೊಳ್ಳುವಳು. ಅವನು ನಗುತ್ತ ಲೋನ್ ನಲ್ಲಿ ಮಾತಾಡುತಿದ್ದರೆ ರಶ್ಮಿಯೊಂದಿಗೆ ಮಾತಾಡುತಿದ್ದಾನೆಂದು ಕಲ್ಪಿಸಿಕೊಳ್ಳುವಳು. ಇರಲಾರದ್ದನ್ನೆಲ್ಲ ಕಲ್ಪಿಸಿಕೊಂಡು ಕನಲಿಹೋದಳು.

ವಿಕಾಸನಿಗೆ ರಶ್ಮಿ ಯ ಮನಸ್ಥಿತಿ ಅರಿವಾಯಿತು. ತನ್ನ ಮತ್ತು ರಶ್ಮಿ ಯ ಸಂಬಂಧ ಮುಗಿದ ಅಧ್ಯಾಯ. ಈಗ ತವು ಬರೆ ಸ್ನೇಹಿತರ ಮಾತ್ರ ಎಂದು ಮನವರಿಕೆ ಮಾಡಲು ಪ್ರಯತ್ನಿಸುತಿದ್ದನು.

ಆದರೆ ಅನುಮಾನಕ್ಕೆ ಮದ್ದೆಲ್ಲಿದೆ..!  ಇರಲಾರದೆಲ್ಲ ಇರಬಹುದು ಎಂದು ಮನಸ್ಸಿಗೆ ನಂಬಿಸುತ್ತದೆ. ಕಲ್ಪಸಿಕೊಂಡದ್ದೆಲ್ಲ ನಿಜವಾಗಬಹುದು ಎಂಬ ಭ್ರಮೆಗೊಳಪಡುತ್ತಾರೆ. ಗಂಡನ ಮೇಲೆ ಅವಲಂಬಿತವಾದ ಹೆಣ್ಣಿಗೆ ಅಸ್ಥಿರತೆ ಕಾಡುತ್ತಿರುತ್ತದೆ.ಎಲ್ಲಿ ಗಂಡ  ತನ್ನ ಕಡೆಗಾಣಿಸುತ್ತಾನೊ ಎಂಬ ಭ್ರಮೆ ಸದಾ ಕಾಡುತ್ತಿರುತ್ತದೆ.ಅದಕ್ಕೆ ಅವನನ್ನು ಹಿಡಿತದಲ್ಲಿಟ್ಟುಕೊಳ್ಳಲು ಸದಾ ಪ್ರಯತ್ನಿಸುತ್ತಲೆ ಇರುತ್ತಾಳೆ. ಜಯಾಳಿಗಾದ್ದು ಇದೆ.ಅವನ ಮೊದಲ ಪ್ರೆಮಪ್ರಕರಣದ ಅರಿತಿದ್ದ ಅವಳ ಸುಪ್ತ ಮನಸ್ಸಿನಲ್ಲಿ ಈ ವಿಷಯ ಸದಾ ಜಾಗ್ತವಾಗಿರುತಿತ್ತು.ರಶ್ಮಿ ಯ ಭೆಟಿಯಾದ ನಂತರ  ಆ ಆತಂಕ ಅನುಮಾನದ ರೂಪ ತಳೆದು ಹೊರಹೊಮ್ಮಿತು. ಜಯಾಳ ಅನುಮಾನ ಮಾನಸಿಕ ವ್ಯಾಧಿಯಾಗಿ ಪರಿಣಮಿಸಿತು.

ಅವಳನ್ನು ನಂಬಿಸಲು ಪ್ರಯತ್ನ ಪಟ್ಟ ವಿಕಾಸ ಫಲಿಸದೆ ಸುಮ್ಮನಾದ. ಅವನ ಮೌನ ತಪ್ಪಾಗಿ ಅರ್ಥೈಸಿದ ಜಯಾ ಅವನು ತನ್ನನ್ನು ಕಡೆಗಾಣಿಸುತ್ತಿರುವನು ಎಂದು ನಂಬಿ ಮತ್ತಷ್ಟು ಉನ್ಮಾದದಿಂದ ವರ್ತಿಸತೊಡಗಿದಳು.ಪದೆ ಪದೆ ಸಾಯುವದಾಗಿ ಹೆದರಿಸತೊಡಗಿದಳು.ಇಬ್ಬರ ನಡುವೆ ಕೂಸು ಬಡವಾಗತೊಡಗಿತು.

ಗಂಡಹೆಂಡತಿಯ ಜಗಳ ವಿಕಾಸನ ಪೋಷಕರಿಗೆ ಚಿಂತೆಗೀಡು ಮಾಡಿತ್ತು. ಮೊಟ್ಟಮೊದಲ ಬಾರಿಗೆ ವಿಕಾಸ ಇಷ್ಟಪಟ್ಟ ಹೆಣ್ಣಿನೊಂದಿಗೆ ಅವನ ಮದುವೆ ಮಾಡಿದರೆ ಚೆನ್ನಾಗಿತ್ತು  ಅನಿಸಿತ್ತು.

ಜಯಾಳ ಅನುಮಾನ ವಿಕಾಸನ ಉದಾಸೀನ ಇಬ್ಬರನ್ನೂ ನಿರಂತರ ದೂರಮಾಡತೊಡಗಿತು. ಸದಾ ವಿಕಾಸನಿಗೆ ಮಾತಿನ ಬಾಣದಿಂದ ಇರಿದು ಘಾಸಿಗೊಳಿಸಿ ವಿಕೃತ ಸಮಾಧಾನ ಹೊಂದುತಿದ್ದಳು ಜಯಾ.   ಅವಳನ್ನು ಆಪ್ತಸಮಾಲೋಚಕರೆಡೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆಂಬ ಅವನ ಪ್ರಯತ್ನ ಕ್ಕೆ ಅವಳು ಸಮ್ಮತಿಸುತ್ತಿರಲಿಲ್ಲ . ವಿಕಾಸ ಮೌನಿಯಾದ ಮನೆಗೆ ಬರುವದನ್ನೆ ಕಡಿಮೆಮಾಡಿದ .ಇಲ್ಲದ ಕೆಲಸ ಹುಡುಕಿಕೊಂಡು ಹೊರಗೆ ವ್ಯಸ್ತವಾಗಿರತೊಡಗಿದ.  ಅವನ ನಿರ್ಲಕ್ಷ್ಯ ಅವಳನ್ನು ಇನ್ನೂ ಸಿಟ್ಟಿಗೆಳಿಸುತಿತ್ತು.

ದಿನಾ ಇದೇ ಜಗಳದಿಂದ ರೋಸಿಹೋದ ವಿಕಾಸ ಅವಳಿಂದ ಬೇರೆಯಾಗಲು ನಿರ್ಧರಿಸಿದ.ಇದನ್ನು ಕೇಳಿ ರೋಷಗೊಂಡ ಜಯಾ ರಶ್ಮಿಗಾಗಿಯೇ ತನ್ನನ್ನು ದೂರಮಾಡುತ್ತಿರುವನೆಂದು ಆರೋಪಿಸಿ , ನಿನಗೆ ಬುದ್ದಿ ಕಲಿಸದೆ ಬಿಡಲಾರೆ ಎಂದು ಮಗುವನ್ನು ದರದರನೆ ಎಳೆದುಕೊಂಡು ಮನೆ ಬಿಟ್ಟು ಹೊರಟಳು.ಹತಾಶನಾದ ವಿಕಾಸ ತಡೆಯುವ ಪ್ರಯತ್ನ ಮಾಡದೆ ಸುಮ್ಮನಿದ್ದ.

ಬೆಳಗಾದರು ಇನ್ನೂ ಬಾರದ ಜಯಾ ಮತ್ತು ಮಗುವಿಗಾಗಿ ಆತಂಕಗೊಂಡ ವಿಕಾಸ  ಹೊರಗೆ ಬಂದಾಗ ಜನರು , ದೂರದ ಬಾವಿಯಲ್ಲಿ ತಾಯಿ ಮಗುನವಿನ ಶವ ತೇಳಾಡುತ್ತಿವೆ ಎಂದು ಮಾತಾಡಿಕೊಳ್ಳುತಿದ್ದರು.

ಮುಂದಕ್ಕೆ ಹೆಜ್ಜೆ ಇಡದೆ ಕುಸಿದು ಕುಳಿತ ವಿಕಾಸ.


ಜ್ಯೋತಿ  ಡಿ  , ಬೊಮ್ಮಾ.

Leave a Reply

Back To Top