ಕವಿತೆ…

ಕಾವ್ಯ ಸಂಗಾತಿ

ಡಾ. ವಾಯ್ .ಎಮ್. ಯಾಕೊಳ್ಳಿ

ಕವಿತೆ

ಮನೆಗೆ ಕಿಟಕಿ
ಅಲ್ಲ ಬರಿ‌ ಬೆಳಕು ಬರುವ
ಅವಕಾಶ
ಹೊರ ಜಗತ್ತಿನೊಂದಿಗಿನ
ಬಂಧವೂ ಹೌದು

ಎಷ್ಟೊಂದು ಎದೆಗಳು
ಕಿಟಕಿಯೊಳಗಿಂದಲೇ
ತಮ್ಮ ಭಾವ ರವಾನಿಸುತ್ತವೆ
ಹೊರ ಜಗತ್ತಿಗೆ

ಕಿಟಕಿ ಹೊಸ ಕನಸುಗಳ ಬಿತ್ತುವ
ಆಸರೆಯೂ ಹೌದು
ಕಿಟಕಿಯ ಸರಳಿಗೆ ಒರಗಿ ತಮ್ಮ ಮುಕ್ತಿಯ
ದಾರಿ‌ಕಂಡುಕೊಂಡವರೆನಿತೊ

ಕೆಲವು ಮನೆಗಳೂ
ಜೇಲುಗಳಂತೆಯೇ
ಇರುವದು ವಿಪರ್ಯಾಸ

ಗೆಳೆಯ …
ಜೇಲಿಗೂ
ಸರಳುಗಳಿರುವದು
ಕಿಟಕಿಯ ಹಾಗೆಯೇ…


Leave a Reply

Back To Top