ದಾರಿಯೇ ಕೈಹಿಡಿಯಿತು

ಕಾವ್ಯ ಸಂಗಾತಿ

ಒಲವು

ದಾರಿಯೇ ಕೈಹಿಡಿಯಿತು

ನಾನು ಇಚ್ಚಿಸಿರಲಿಲ್ಲ
ಈ ದಾರಿಯ

ದಾರಿಯೇ ಬಂದು
ಕೈ ಹಿಡಿಯಿತು

ಇದ್ದಕ್ಕಿದ್ದಂತೆ ಬಂದು
ಕೈ ಎಳೆದ ದಾರಿಯ ಹಿಂದೆ

ಹೋಗದೆ ಇರಲಾಗಲಿಲ್ಲ
ಅದರ ಸೆಳೆತ ಅಷ್ಟಿತ್ತು

ಹೇಗೋ ಸುಳಿಯಿಂದ
ಹೊರಬರುವಷ್ಟರಲ್ಲಿ

ಪೂರ್ತಿ ತೊಯ್ದುಹೋಗಿದ್ದೆ
ಪ್ರೀತಿಯ ಗಮಲು

ಮೈಯ ಮುತ್ತಿಕ್ಕುತ್ತಿತ್ತು
ಮನಸ್ಸು ಮೃದುಹೂವಾಗಿತ್ತು

ಬೇಡ ಎನ್ನಲಾಗಲಿಲ್ಲ
ಒಲವ ಮತ್ತು ನೀಡುವ ಮುತ್ತನ್ನು

ಜಗವೇ ಜರಿಯಲಿ ಕೈಹಿಡಿದ
ದಾರಿಯನೆಂದೂ ದೂರ ಮಾಡೆನು.


Leave a Reply

Back To Top