ಕಾವ್ಯಸಂಗಾತಿ
ಹೇಮಗಂಗಾರವರ ಹಾಯ್ಕುಗಳು
ಏಕಾಂತದಲ್ಲಿ
ಸುಖದ ನರಳಿಕೆ
ಪ್ರಥಮ ರಾತ್ರಿ
ದಣಿವಾದರೂ
ಕಾಯಕೆ ಶೃಂಗಾರದಿ
ಹೊಸ ಚೈತನ್ಯ
ತಂಪು ಗಾಳಿಗೂ
ಮಿಲನದ ಕೋಣೆಯ
ಶಾಖ ತಟ್ಟಿದೆ !
ಬೆಚ್ಚಗಾಗಲಿ
ಮೈ ನಿನ್ನಪ್ಪುಗೆಯಲ್ಲಿ
ಕೊರೆವ ಚಳಿ
ಆಷಾಢ ಮಾಸ
ವಿರಹದುರಿಯಲಿ
ಕೆಂಡ ಹಾಸಿಗೆ
ನಲ್ಲೆಯ ಕೆನ್ನೆ
ಸೋಕಲು ತಂಗಾಳಿಯೂ
ಕಾತರಿಸಿತು
ಮೊದಲಿರುಳು
ಬಯಕೆಗಳ ಹಾವು
ಹೆಡೆ ಬಿಚ್ಚಿತು
ಮಧುಮಂಚದಿ
ಮಿಲನಕೆ ಹೂಗಳು
ನಲುಗಿದವು
ಗುಲ್ಮೊಹರ್ ನ
ಕೆಂಬಣ್ಣದಂತೆ ನಲ್ಲೆ
ಅಧರಗಳು
ವಿರಹವೆಂದೂ
ಪ್ರೇಮ ರಸಕಾವ್ಯದ
ಕಹಿ ಅಧ್ಯಾಯ
ರಸಿಕ ಪತಿ
ಪತ್ನಿಗೆ ಪ್ರತಿನಿತ್ಯ
ಮಧುಚಂದ್ರವೇ !
ಸಜ್ಜೆಮನೆಯ
ಕಿಟಕಿಯಲ್ಲಿಣುಕಿ
ಚಂದ್ರ ನಾಚಿದ
ಹೇಮಗಂಗಾ ಮೇಡಂ
ಬಹಳ ಸೊಗಸಾದ ಹಾಯ್ಕುಗಳು….ನವಬಾಳಿನ ನವ ಭಾವನೆಗಳನ್ನು ಓದುಗರ ಮುಂದೆ ತೆರೆದಿಟ್ಟು ಮುದ ನೀಡುತ್ತವೆ…
ಬಾಳು ಬಂಗಾರ
ಸುಂದರವಾದ ಚಂದದ
ಸವಿ ನೆನಪು
ಅಷ್ಟೊಂದು ಭಾವ
ಸುಂದರ ಮನೋಭಾವ
ಶೃಂಗಾರ ಶೀಲ
ಗಂಗಾ ತರಂಗ
ಹೇಮ ಗಂಗಾ ಯಮುನಾ
ಭಾವಸಂಗಮ
ಅರ್ಥ ಅದ್ಭುತ ಮನೋ ಇಂಗಿತ ಹಾಯ್ಕುಗಳು
ಸ್ಫುರಿತ ಭಾವ ಸ್ಪಂದನ ಚಂದದ ನುಡಿ ಮುತ್ತು ಗಳು ಮೇಡಂ ಅಭಿನಂದನೆಗಳು
ಜಯಮಂಗಳ ಜವಳಿ ಬೆಂಗಳೂರು