ಕಾವ್ಯ ಸಂಗಾತಿ
ಬಯಕೆ
ಮಾಜಾನ್ ಮಸ್ಕಿ
ನಿನ್ನ ಮೊಗದಲ್ಲಿ ಸದಾ
ಕಿರು ನಗೆಯೊಂದು ಅರಳಿರಲಿ
ನಿನ್ನ ನೆನಪಾದಾಗಲೆಲ್ಲ
ತಂಗಾಳಿ ಬೀಸಿ ಮನಕೆ
ಹಿತ ನೀಡಲಿ
ಬಯಕೆಗಳ ಸರಮಾಲೆ
ತೊಡಿಸಲಾರೇನು ನಾನು
ನನ್ನ ಭಾವನೆಗಳಿಗೆ
ಬಾಗೆಂದು ಹೇಳಲಾರೆನು
ನೀ ಇದ್ದಂತೆಯೇ ಇರು
ನನ್ನಂತಯೇ ನಾ
ಕಾಯುವೆನು ನೀ
ಬರುವ ಹಾದಿಯನು
ಸೋಲೋ ಗೆಲುವೋ
ಸಮ್ಮಿಲನಗಳ ಸವಿಯಲ್ಲಿ
ಸವಿಯಲು ಹಾತೋರೆಯುತ್ತಿದೆ
ಮನ