ಗಜಲ್

ಕಾವ್ಯ ಸಂಗಾತಿ

ಅನಸೂಯ ಜಹಗೀರದಾರ

ಗಜಲ್

ನೀನಲ್ಲದೆ ಇಲ್ಲಿ ಬೇರೇನೂ ಕಾಣುತ್ತಿಲ್ಲ ಇತ್ತಿತ್ತಲಾಗಿ
ಚಂಚಲ ಮನ ಒಂದೆಡೆ ಗಟ್ಟಿ ನಿಲ್ಲುತ್ತಿಲ್ಲ ಇತ್ತಿತ್ತಲಾಗಿ

ಅಂದಿನ ನೋಟ ಎವೆಯ ಜಾರುತ್ತಿಲ್ಲ ಇತ್ತಿತ್ತಲಾಗಿ
ನಿನ್ನ ಶೋಧದ ಗಳಿಗೆ ಲೆಕ್ಕಕ್ಕೆ ಸಿಗುತ್ತಿಲ್ಲ ಇತ್ತಿತ್ತಲಾಗಿ

ತಾರೆ ಎಣಿಕೆಯೂ ಬೇಸರ ತರಿಸುತ್ತಿಲ್ಲ ಇತ್ತಿತ್ತಲಾಗಿ
ಪ್ರಿಯದ ಇರುಳು ಕನಸು ಸರಿಯುತ್ತಿಲ್ಲ ಇತ್ತಿತ್ತಲಾಗಿ

ಏಕತಾರಿಯ ಬೆರಳು ದಣಿಯುತ್ತಿಲ್ಲ ಇತ್ತಿತ್ತಲಾಗಿ
ನಡೆವ ಫಕೀರನ ಹಾದಿ ಸವೆಯುತ್ತಿಲ್ಲ ಇತ್ತಿತ್ತಲಾಗಿ

ಬಿಸಿಲು ಅರೆಝಳವೂ ಬಾಧಿಸುತ್ತಿಲ್ಲ ಇತ್ತಿತ್ತಲಾಗಿ
ಮರಳಲಿ ಮೂಡಿದ ಹೆಜ್ಜೆ ಕದಲುತ್ತಿಲ್ಲ ಇತ್ತಿತ್ತಲಾಗಿ

ಬೆಟ್ಟಗಳ ನೆನೆದು ಭಯ ಆವರಿಸುತ್ತಿಲ್ಲ ಇತ್ತಿತ್ತಲಾಗಿ
ಅಭಯ ಕರದ ಚಿತ್ತ ಚಿತ್ರ ಮಾಸುತ್ತಿಲ್ಲ ಇತ್ತಿತ್ತಲಾಗಿ

ಅವನ ಲಹರಿ ಉನ್ಮಾದ ಇಳಿಯುತ್ತಿಲ್ಲ ಇತ್ತಿತ್ತಲಾಗಿ
ಅನು ಬೊಗಸೆಯಲಿ ಮೊಗೆದ ಜಲ ಬತ್ತುತ್ತಿಲ್ಲ ಇತ್ತಿತ್ತಲಾಗಿ


2 thoughts on “ಗಜಲ್

Leave a Reply

Back To Top