ಅಂಕಣ ಸಂಗಾತಿ

ನೆನಪಿನದೋಣಿಯಲಿ

ನಾನುಮತ್ತುವೇದಿಕೆ

ನನಗೆ ವೇದಿಕೆ ಎಂದರೆ ಏನೂ ಭಯ ಇಲ್ಲ ಆಗಲೂ ಈಗಲೂ. ಅದಕ್ಕೆ ಕಾರಣ ಚಿಕ್ಕಂದಿನಿಂದ ವಾಚಾಳಿಯಾದ್ದರಿಂದಲೋ ಏನೋ ಅಥವಾ ಕೇಳಿದವರು ಬಲು ಚೂಟಿ ಚೆನ್ನಾಗಿ ಮಾತನಾಡುತ್ತಾಳೆ ಅಂತ ಹೊಗಳುತ್ತಿದ್ದರಿಂದಲೋ ಏನೋ ಗೊತ್ತಿಲ್ಲ.

ನನ್ನ ಮೊಟ್ಟಮೊದಲ ವೇದಿಕೆ ನನಗೆ ನೆನಪಿಲ್ಲ ಆದರೆ ಅಮ್ಮ ಅಣ್ಣ ಹೇಳಿದ ಪ್ರಕಾರ ……ಒಮ್ಮೆ ಅಣ್ಣನ ಆಫೀಸಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದರಂತೆ ಎಲ್ಲರಿಗಿಂತ ಪುಟ್ಟ ಹುಡುಗಿ ಆಗಿದ್ದ ನನ್ನನ್ನು ಪ್ರಾರ್ಥನೆ ಮಾಡ್ತೀಯಾ ಅಂದದ್ದಕ್ಕೆ  ಓ ಅಂತ ಹೇಳಿ ಮೈಕ್ ಮುಂದೆ ಹೋಗಿ ನಿಂತೆ ನಂತೆ .  ಇನ್ನೂ ಒಂದನೇ ಕ್ಲಾಸಿಗೂ ಬಂದಿರಲಿಲ್ಲ.  ಬಂದ ಶ್ಲೋಕಗಳನ್ನು ನಿರರ್ಗಳವಾಗಿ ಹೇಳುತ್ತಲೇ ಹೋಗಿ ಕಡೆಗೆ ನಿರ್ವಾಹಕರು ಸಾಕು ಸಾಕು ಅಂತ ಮೈಕು ಕಿತ್ತುಕೊಂಡರಂತೆ .  ಆಗ ಅಣ್ಣ ಅಮ್ಮನ ಹತ್ತಿರ ತಮಾಷೆಯಾಗಿ ಇವಳು ಖಂಡಿತಾ ಲೆಕ್ಚರರ್ ಆಗ್ತಾಳೆ ಅಂತ ಅಂದಿದ್ರಂತೆ.

ಆಗ ತಾನೆ ಮೂರನೆಯ ತರಗತಿಗೆ ಸೆಂಟ್ ಥಾಮಸ್ ಶಾಲೆಗೆ ಸೇರಿದ್ದೆ. ಕಾನ್ವೆಂಟ್ ವಾತಾವರಣ.ಮಲೆಯಾಳಿ ಕ್ರಿಶ್ಚಿಯನ್ನರು ನಡೆಸುತ್ತಿದ್ದ ಶಾಲೆ .ಇಂಗ್ಲಿಷ್ ಕನ್ನಡ ಮೀಡಿಯಂ ಗಳೆರಡೂ ಇದ್ದವು. ನಾನು ಕನ್ನಡ ಮೀಡಿಯಂ .ಸ್ವಾಭಾವಿಕವಾಗಿ ಇಂಗ್ಲಿಷ್ ಮೀಡಿಯಂ ಅವರು ಬುದ್ಧಿವಂತರು ಎಂಬ ಅಭಿಪ್ರಾಯ. ನಮ್ಮ ಕ್ಲಾಸ್ ಟೀಚರ್ ಆಗಿದ್ದ ವಿಜಯಾ ಮಿಸ್ ನಾನು ಪ್ರಬಂಧ ಪೀರಿಯಡ್ಗಳಲ್ಲಿ ಬರೆದ ಪ್ರಬಂಧಗಳನ್ನು ನೋಡಿ ನನ್ನಲ್ಲಿನ ಪ್ರತಿಭೆ ಗುರುತಿಸಿದ್ದರು. ಅಲ್ಲದೆ ಫಸ್ಟ್ ರಾಂಕ್ ಸ್ಟೂಡೆಂಟ್ ಬೇರೆ ನಾನು.

ಆಗ ಶಾಲೆಯ ಪ್ರಾರ್ಥನಾ ಸಮಯದಲ್ಲಿ  ದಿನಪತ್ರಿಕೆಯ ಮುಖ್ಯಾಂಶಗಳನ್ನು ವಾಚಿಸುವ ಅಭ್ಯಾಸ ಹೊಸದಾಗಿ ಶುರುವಾಯಿತು. ಬರೀ ಇಂಗ್ಲಿಷ್ ಪತ್ರಿಕೆ ವಾಚನ ಎಂದಿದ್ದರು. ಆದರೆ ಬೇರೆ ಉಪಾಧ್ಯಾಯರು ದನಿಗೂಡಿಸಿದ್ದರಿಂದ ಕನ್ನಡ ಪತ್ರಿಕಾ ವಾಚನವೂ ಸೇರಿತ್ತು .ಸೀನಿಯರ್ ವಿದ್ಯಾರ್ಥಿಗಳು ಅಂದರೆ ಏಳನೆಯ ತರಗತಿಯ ವಿದ್ಯಾರ್ಥಿಗಳಿಂದ ಶುರುವಾಗಿ ಒಂದು ವಾರದಲ್ಲಿ ಮೂರನೇ ತರಗತಿಯ ತನಕವೂ ಬಂದಿತ್ತು .

ವಿಜಯ ಮೇಡಂ ನಾಳೆ ನಿನ್ನ ಸರದಿ ನಿಮ್ಮ ಮನೆ ಪೇಪರ್ ನಲ್ಲಿ ದೊಡ್ಡವರಿಂದ ಮುಖ್ಯ ವಿಷಯ ಗುರುತು ಹಾಕಿಸಿಕೊಂಡು ಬಂದು ಸ್ಪಷ್ಟವಾಗಿ ಓದಬೇಕು ಎಂದಿದ್ದರು. ಮನೆಗೆ ಹೋಗಿ ಹೇಳಿದ್ದೇ ಹೇಳಿದ್ದು .ಮನೆ ಬಳಿಯ ಗೆಳತಿಯರಿಗೂ ಡಂಗುರ ಹೊಡೆದೆ.ಅಮ್ಮ ಅಣ್ಣನಿಗೂ ಹೆಮ್ಮೆ. ಯೂನಿಫಾರಂ ತಿಕ್ಕಿ ತಿಕ್ಕಿ ಐರನ್ ಮಾಡಿ ಶೂಗೆ ಪಾಲಿಶ್ ಮಾಡಿದ್ದೇ ಮಾಡಿದ್ದು.

ನನ್ನ ಗುಣ (ನನ್ನ ತಂದೆ ಗುರುತಿಸಿ ಹೇಳಿದಂತೆ )ಯಾವುದೇ ಕೆಲಸವನ್ನು ವಿಭಿನ್ನವಾಗಿ ಮಾಡುವುದು. ಹಾಗಾಗಿ ನಾನು ರಾಜಕೀಯ ಕ್ರೀಡೆ ವಿಷಯಗಳ ಜೊತೆ ಅಂದಿನ ದಿನ ಪ್ರಕಟವಾಗಿದ್ದ  ಸುಭಾಷಿತವನ್ನು ಗುರುತು ಹಾಕಿಕೊಂಡು ಹೋಗಿ ಓದಿದ್ದೆ ಅದು ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು.

ಅಲ್ಲಿಂದ ಮುಂದೆ ಈಗ ಕಂಪೈರಿಂಗ್ ಅಂತಾರಲ್ಲ ಆ ತರಹದ ಘೋಷಣೆಗಳನ್ನು ಬಹುಮಾನ ಘೋಷಣೆಗಳನ್ನು ನನ್ನಿಂದಲೇ ಓದಿಸುತ್ತಿದ್ದರು ಆ ಶಾಲೆಯಲ್ಲಿ ಏಳನೇ ತರಗತಿ ಮುಗಿಸುವ ತನಕ .ನನ್ನ ಪತ್ರಿಕೆ ಓದು ಶಾಲೆಯಲ್ಲಿ ನನಗೊಂದು ಐಡೆಂಟಿಟಿ ಕೊಟ್ಟಿತ್ತು .ಸುಮಾರು ನಲವತ್ತು ಜನ ಪ್ರಾಧ್ಯಾಪಕರು ನಾನೂರು ವಿದ್ಯಾರ್ಥಿಗಳು ಇವರೆಲ್ಲರ ಮುಂದೆ ವೇದಿಕೆ ಏರಿ ಮೈಕಲ್ಲಿ ಮಾತಾಡಿದ್ದು ಎಲ್ಲರ ಮೆಚ್ಚುಗೆ ಗಳಿಸಿದ್ದು ಈಗಲೂ ನನ್ನ ಮನದಲ್ಲಿ ಹಚ್ಚ ಹಸಿರು .ಮುಂದೆ ಅನೇಕ ಬಾರಿ ವೇದಿಕೆಯೇರಲು ಇದು ಓಂ ಪ್ರಥಮವಾಗಿತ್ತು.

ನಂತರದ ದಿನಗಳಲ್ಲಿ ಚರ್ಚಾ ಸ್ಪರ್ಧೆಗಳಲ್ಲಿ ಆಶುಭಾಷಣ ಗಳಲ್ಲಿ ಶಾಲೆಯನ್ನು ಸಚಿನ್ ನರ್ತಿಸುತ್ತಿದ್ದುದರಿಂದ ವೇದಿಕೆ ಮೇಲೆ ಮಂಥನ  ಅಂತ ಅತಿಶಯದ ವಿಷಯ ಎನ್ನಿಸದೆ ಸಲೀಸಾಗಿ ಬಿಟ್ಟಿತ್ತು.  ಅದರಲ್ಲೂ ಅಶುಭಾಷಣವೆಂದರೆ ನನಗೆ ಪಂಚಪ್ರಾಣ. 

ಹೈಸ್ಕೂಲಿನ ದಿನಗಳಲ್ಲಿಯೇ ಅಷ್ಟೆ ಎಲ್ಲ ಚರ್ಚಾಸ್ಪರ್ಧಿಗಳಿಗೆ ರೆಸಸಿಟೇಶನ್ ಕಾಂಪಿಟೀಶನ್ ಗಳಲ್ಲಿ ಹೋಗಿ ಬಹುಮಾನ ತರುತ್ತಿದ್ದೆ.  ೧೯೭೯ ರಲ್ಲಿ ಅಂತರರಾಷ್ಟ್ರೀಯ ಮಕ್ಕಳ ವರ್ಷ ಎಂದು ಘೋಷಿಸಿದಾಗ ನಮ್ಮ ಶಾಲೆಯಿಂದ ಮಾಡಿದ 1 ಸಮಾರಂಭದಲ್ಲಿ ನನ್ನನ್ನೇ ಮುಖ್ಯ ಅತಿಥಿಯನ್ನಾಗಿ ಮಾಡಿ ಇಪ್ಪತ್ತು ನಿಮಿಷಗಳ ಕಾಲ ಮಾತನಾಡಲು ಹೇಳಿದ್ದರು ಅದೇನು ಮಾತನಾಡಿ ಜನವರಿ ಯಾರ ನೆರವೂ ಇಲ್ಲದೆ ಭಾಷಣ ಸಿದ್ಧಪಡಿಸಿದ್ದೆ ಎಂದು ನೆನಪು.  ಆ ಸಮಾರಂಭ ಆಗ ಮಕ್ಕಳ ಕೂಟ ಎಂದು ಕರೆಸಿಕೊಳ್ಳುವ ಸಭಾಂಗಣದಲ್ಲಿ ನಡೆದಿದ್ದು ಪ್ರಪ್ರಥಮ ಬಾರಿಗೆ ನನಗೆ ಹಾರ ಹಾಗೂ ಹಣ್ಣಿನ ಬುಟ್ಟಿ ಸಿಕ್ಕಿತ್ತು . ಆದರೆ ಅದನ್ನೆಲ್ಲಾ ಫೋಟೋ ತೆಗೆದು ಇಟ್ಟುಕೊಂಡು ಜನಿಸಬೇಕೆಂಬ ನಾಜೂಕುತನ ಇರಲಿಲ್ಲ . 

ಈಗಲೂ ಅಷ್ಟೆ ವೇದಿಕೆ ಏರಿ ಮಾತನಾಡುವೆ ಎಂದರೆ ಟೈಯಂತಹ ಹೊರತು ಬಿಡದೆ ನಿರೂಪಣೆ ನನಗೆ ಇಷ್ಟದ ಕೆಲಸ . ಆದರೆ ಅದಕ್ಕೆಲ್ಲಾ ಭದ್ರಬುನಾದಿ ಬಿದ್ದದ್ದು ತಂದೆ ತಾಯಿ ಹಾಗೂ ಚಿಕ್ಕಂದಿನ ಶಾಲಾ ಟೀಚರ್ಸ್ ಗಳು ತುಂಬಿದ ಆತ್ಮವಿಶ್ವಾಸ . ಅದಕ್ಕೆ ನಾನು ಚಿರಋಣಿ. 

ಈಗಿನ ಶಾಲಾ ಕಾರ್ಯಕ್ರಮಗಳನ್ನು ಗಮನಿಸಿದಾಗ ಮೊದಲಿನಿಂದಲೇ ಸಭಾಕಂಪನ ಇಲ್ಲದ ಹಾಗೆ ಮಕ್ಕಳನ್ನು ತಯಾರು ಮಾಡುತ್ತಾರೆ . ಪ್ರತಿಯೊಬ್ಬ ವಿದ್ಯಾರ್ಥಿಗೂ ವೇದಿಕೆಯ ಮೇಲೆ ಬರುವ ಅವಕಾಶವನ್ನು ಕೊಟ್ಟು ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸುತ್ತಾರೆ ಇದು ನಿಜಕ್ಕೂ ತುಂಬಾ ಒಳ್ಳೆಯ ನಡೆ .   ಕೆಲವೊಮ್ಮೆ ಎಷ್ಟೋ ಒಳ್ಳೆಯ ಪ್ರತಿಭೆಗಳು ವೇದಿಕೆಯ ಮೇಲೆ ಬರುವ ಧೈರ್ಯವಿಲ್ಲದೆ ಮುರುಟಿ ಹೋಗುತ್ತದೆ ಅದನ್ನು  ಬಾಲ್ಯದಲ್ಲೇ ರೂಢಿಸಿ ಮಾಡಿಸುವುದು ಒಳಿತು . 


ಸುಜಾತಾ ರವೀಶ್ 

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ 
ಬಯಕೆ ಲೇಖಕಿಯವರದು

Leave a Reply

Back To Top