ನಾಚಿಕೆ

ಕಾವ್ಯ ಸಂಗಾತಿ

ನಾಚಿಕೆ

ಒಲವು

ಬರಸೆಳೆದು
ಚುಂಬಿಸಬೇಕೆಂದುಕೊಂಡೆ
ನಾಚಿಕೆ ಬೇಡವೆಂದಿತು

ಕಂಗಳ ದಿಟ್ಟಿಸಿ
ಕಣ್ಣು ಹೊಡೆಯಬೇಕೆಂದುಕೊಂಡೆ
ನಾಚಿಕೆ ಬೇಡವೆಂದಿತು

ಕೈಹಿಡಿದು ತುಸು ದೂರ
ನಡೆಯಬೇಕೆಂದುಕೊಂಡೆ
ನಾಚಿಕೆ ಬೇಡವೆಂದಿತು

ತಲೆಯ ನೇವರಿಸಿ
ಎದೆಗಪ್ಪಿ ಮುದ್ದಾಡಬೇಕೆಂದುಕೊಂಡೆ
ನಾಚಿಕೆ ಬೇಡವೆಂದಿತು

ಮಿಲನ ಮಹೋತ್ಸವಕ್ಕೆ
ಮುನ್ನುಡಿಯಾಗಬೇಕೆಂದುಕೊಂಡೆ
ನಾಚಿಕೆ ಬೇಡವೆಂದಿತು

This image has an empty alt attribute; its file name is watercolour-blue-painted-textured-heart-picture-id175599815.jpg

ಬಾ ಇನಿಯ
ಹೆಣ್ಣೆಂಬ ಕಾರಣಕ್ಕೆ ಹೇರಿಕೊಂಡ
ನಾಚಿಕೆ ಮರೆಸು
ವಿರಹ ಸರಿಸು…


Leave a Reply

Back To Top