ಕಾವ್ಯ ಸಂಗಾತಿ
ನಿರ್ಲಿಪ್ತ
ದೇವರಾಜ್ ಹುಣಸಿಕಟ್ಟಿ
ಮುಕ್ತಿಗೇನು ಮಾರ್ಗ
ಧ್ಯಾನದ ನೆಪಒಡ್ಡಿ ನಿನ್ನಂತೆ
ಕಣ್ಮುಚ್ಚಿ ಕುಳಿತುಕೊಳ್ಳುವುದೇ…
ಸಂಸಾರ ನಿಸ್ಸಾರವೆಂದು
ಮೌನದಲಿ ಮುಳುಗಿಬಿಡುವುದೇ
ಇಲ್ಲಾ ಎಂಟು ಎಂಬತ್ತಾಗುವ
ಮೊದಲೇ ಗುರಿ ಇರದ ಬದುಕಿಗೆ
ಗೆರೆ ಎಳೆದು ಕಾನನದ
ಸಂಚಾರಕೆ ಸದ್ದಿಲ್ಲದೆ ಅಣಿಯಾಗುವುದೇ
ಮುಕ್ತಿಗೇನು ಮಾರ್ಗ
ಹೆಂಡತಿಯ ಮಗುವ ಜೀವನದ
ನಟ್ಟ ನಡು ದಾರಿಯಲ್ಲಿ ಗುಟ್ಟು
ಬಿಟ್ಟು ಕೊಡದೆ ಎದ್ದೋಗುವುದೇ
ಇಲ್ಲಾ
ಬಯಲಲಿ ಬೋಧಿ ಋಕ್ಷದ ಕೆಳಗೆ
ಕಾಮ ಕ್ರೋದ ಮದ ಮತ್ಸರಗಳ
ಅಡವಿಟ್ಟು ಬಿಡುವುದೇ
ಮುಕ್ತಿಗೇನು ಮಾರ್ಗ
ಜ್ಞಾನದ ನೆಪ ಒಡ್ಡಿ ಅಷ್ಟಐಶ್ವರ್ಯ
ತೊರೆದು ವಿರಾಗಿಯಾಗಿ ಬಿಡುವುದೇ…
ಇಲ್ಲಾ ಚೆಂಚಲದ ಮನಸ್ಸುನ್ನು
ಇಂಚಿಂಚು ಹಿಡಿದು ಕೊಂಚ
ಸಂಕೋಚವಿಲ್ಲದೆ ನಿರ್ಮೋಹಿ
ಗೊಳಿಸಿಬಿಡುವುದೇ..
ಮುಕ್ತಿಗೇನು ಮಾರ್ಗ
ಬಿಕ್ಕಿಕೊಳ್ಳಿವ ಭಾವಗಳಿಗೆ
ಬೀಗ ಜಡಿದು ಸುಖಾಸುಮ್ನೆ
ಜಟಾಧಾರಿಯಾಗಿ ಬಿಡುವುದೇ
ಇಲ್ಲಾ
ಕೊಂಕು ಬಿಂಕು ಬಿನ್ನಾಳಗಳ
ಪಿಸು ಮಾತುಗಳಿಗೆ
ಬಣ್ಣ ಬಳಿಯದೆ ಕಿವುಡಾಗಿಬಿಡುವುದೇ
ಮುಕ್ತಿಗೇನು ಮಾರ್ಗ ಸದ್ದು
ಗದ್ದಲವಿಲ್ಲದೆ ವಂಶಾವಳಿಯ
ಅಭಿರುದ್ದಿಯ ಬೆನ್ನುಲುಬು
ಮುರಿದು ಬಿಡುವುದೇ..
ಇಲ್ಲಾ
ಸೆಟೆದು ನಿಲ್ಲುವ ದೇಹ ವಾಂಛೆಗಳನು ಸುಟ್ಟು
ಸ್ಪುಟವಾಗದಂತೆ ಮಾಡುವುದೇ…