ಕಾವ್ಯ ಸಂಗಾತಿ
ಅವನೋದದೆ ಉಳಿದ ಓಲೆ
ಶಂಕರಾನಂದ ಹೆಬ್ಬಾಳ
ಇದು ನೆತ್ತರಿನ ಬರಹವಲ್ಲ
ಭಾವಗಳ ಓಟವಿದೆ
ಕಲ್ಪನೆಗಳ ಮಹಾಪೂರವಿದೆ
ಆದರೂ ಇದು
ಅವನೋದದೆ ಉಳಿದ ಓಲೆ….
ಲೈಲಾ ಮಜ್ನುಗಳಂತೆ ಪ್ರೇಮವಿದೆ
ಸವಿಜೇನಿನ ಸವಿಯಿದೆ
ಖದ್ಯೋತದ ಬೆಳಕಿದೆ
ಆದರೂ ಇದು
ಅವನೋದದೆ ಉಳಿದ ಓಲೆ….
ಅಕ್ಕರೆಯ ಅಕ್ಷರವಿದೆ
ಸಕ್ಕರೆಯ ನುಡಿಗಳಿವೆ
ಅನುಪಮ ವರ್ಣನೆಯಿದೆ
ಆದರೂ ಇದು
ಅವನೋದದೆ ಉಳಿದ ಓಲೆ….
ಮೊಹಬ್ಬತ್ತಿನ ಮಹಲಲ್ಲಿದೆ
ಹೃದಯದಲ್ಲಿ ಅಡಗಿದೆ
ಪ್ರೇಮಲೋಕವ ತೋರಿಸಿದೆ
ಆದರೂ ಇದು
ಅವನೋದದೆ ಉಳಿದ ಓಲೆ…
ಕೈಮಾಡಿ ತನ್ನತ್ತ ಸೆಳೆಯುತಿದೆ
ಕಬ್ಬಿಣದ ಪೆಟ್ಟಿಗೆಯಲ್ಲಿದೆ
ಗೆದ್ದಲಿಗೆ ಆಹಾರವಾಗಿ ಕರೆವ
ಇದು
ಅವನೋದದೆ ಉಳಿದ ಓಲೆ….