ಕಾವ್ಯ ಸಂಗಾತಿ
ಏನೆಂದು ಹೇಳಲಿ ಚಿನ್ನ
ಡೋ ನಾ ವೆಂಕಟೇಶ
ಕನಸು ಹೊಸತಾಗುವ ಸಮಯ ಬಲಿತ ಹಣ್ಣುಗಳು
ಸುವಾಸನೆ ಸೂಸುವ ಹೊತ್ತು
ಮಣ್ಣಿಂದ ಮಣ್ಣಿಗೆ ಸೊಗಡು
ಹಸಿ ಹಸಿ ವಾಸನೆ
ಪ್ರಿಯೇ ಸಂಧ್ಯಾಕಾಲದಲ್ಲಿ
ಉಷೆಯ ನಶೆ.ಜೀವ ಜೀವನದ
ಬೀಜ ಚಿಗುರುವ ಒಂದಿಲ್ಲೊಂದು ಕಡೆ ಉದ್ಭವ
ಬದುಕು ಜಟಕಾ ಬಂಡಿ
ವಿಧಿ ಅದರ ಸಾಹೇಬ
ಬಲ್ಲವರ ಮಾತು ಉಳ್ಳವರು
ಕೇಳಲಿಲ್ಲ.
ಮಣ್ಣಲ್ಲಿ ಮಣ್ಣಿನ ಸೊಗಡು
ಅಡರಲೇ ಇಲ್ಲ ಪ್ರಿಯೇ
ಸದ್ದು ಶಬ್ಧಾತೀತವಾಗಿ
ಜೀವ ಹುಟ್ಟಿದ್ದೇ ಇಲ್ಲವಾಗಿ
ಪ್ರಪಂಚ ನಶ್ವರ!
ಮತ್ತೆ ಮತ್ತೆ ಕನಸು ನನಸಾಗುವ ಹೊತ್ತು
ಎಂದೇ ಕಣ್ಣ ಮುಚ್ಚಿ
ಕುರುಡಾಗುವ ಹೊತ್ತು
ಪ್ರಿಯೇ!
ಕನಸು ನನಸಾದ ಕನಸು
ನಿಜವಾಗಿಯೂ ನಾನು ನೀನೋ ನೀನು ನಾನೋ
ಆದರೆ ಬದುಕು ಜಟಕಾ ಬಂಡಿ
ವಿಧಿಯದರ ಸಾಹೇಬ
ಮದುವೆಗೋ ಮಸಣಕೋ!!
Thank you
ಅಣ್ಣಾ. ಸೂಪರ್
ಸೂರ್ಯ ಧನ್ಯವಾದಗಳು!
ತುಂಬಾ ಚೆನ್ನಾಗಿ ಬಂದಿದೆ ನಿಮ್ಮ ಈ ಕವಿತೆ
ಮಂಜು, ಧನ್ಯವಾದಗಳು!
Excellent
Thanks