ವಿಫಲ ಯತ್ನದ ಕವಿ

ಕಾವ್ಯ ಸಂಗಾತಿ

ವಿಫಲ ಯತ್ನದ ಕವಿ

ರಂಗಸ್ವಾಮಿ ಮಾರ್ಲಬಂಡಿ

ಗಾಳಿ ಗಾಳಿ ಗಾಳಿ…!
ನೀರ್ ಸೋಸುವ ಗಾಳಿ
ಮೋಡದ ಮುಂಬುರುವ ಗಾಳಿ,
ನಿನ್ನ ನೆನಪಿಸುವ ಗಾಳಿ
ನೆನಪುಗಳ ಪಾಳಿ…

ಕತ್ತಲು
ಕರಿಕತ್ತಲು ಸುತ್ತಲೂ,
ಅಮ್ಮನ ಸೆರಗಿನತ್ತಲೂ…!
ಹುಣ್ಣಿಮೆ ದೊರೆಯ ಸುಳಿವೇ ಇಲ್ಲ ದೊರೆಸಾನಿ…!!

ಈ ದೌರ್ಬಾಗಿಯ ಹಿಂಸಿಸಲು ಅದೆಷ್ಟು ಕಷ್ಟ ಪಟ್ಟಿರಬೇಡ ಆ ನಕ್ಷತ್ರ ಪುಂಜಗಳು…!
ಬೆಳಕನ್ನು ಸೋಸದೆ ಅಡಗಿಕೊಂಡು.

ನಿನಗೆ ಗೊತ್ತೆ ….!
ಇಲ್ಲಿ ಒಂದೇ ಒಂದು ನಾಯಿ ಕೂಡ ಬೊಗಳಲಿಲ್ಲ.
ಮಸ್ತಿಷ್ಕದಲ್ಲಿ ನಿನ್ನ ಪ್ರವೇಶವಾದಾಗ..!
ಸುತ್ತಲೂ ಅಡಗಿದ್ದ ಪವನವೂ ಶಬ್ದ ಮಾಡುತ್ತಿಲ್ಲ…
ಯಾಕೆ…!? ನಿನೆಂದರೆ ಅಷ್ಟು ಭಯವೇ…?!

ನಾಗಲೋಕದ ಅರಸನ ಆಹಾರ ಮಾತ್ರ ರೋಧಿಸುತ್ತಿದೆ
ಕಾಣದ ಮೇಘಗಳ ಕರುಗುವಿಕೆಗೆ…!
ಗೊತ್ತಿಲ್ಲ ಮೇಘ ಕರುಗುವುದೋ…?
ಇಲ್ಲ ವಿಫಲ ಯತ್ನದ ಕವಿಯಾಗುವುದೆಂದೊ..?


2 thoughts on “ವಿಫಲ ಯತ್ನದ ಕವಿ

Leave a Reply

Back To Top