ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಬಾಗೇಪಲ್ಲಿಯವರ ಗಜಲ್

Buy Krishna Playing Flute Painting at Lowest Price by Nishmitha U R

ಕಾವ್ಯಕವಿತೆ ಗ್ರಂಥ ಗಜಲುಗಳನು
ರಚಿಸುವೆಯಾ ವಿದಗ್ಧ
ವಾಗೀಶನೆಂಬ ಬಿರದಾಂಕಿತನೂ
ಆಗಿರುವೆಯಾ ವಿದುಗ್ಧ

ವಾಗ್ಜಾಲ ಕಲೆ ಬಲು ಸುಲಭದಿ ಸಿದ್ಧಿಸೀತೇ!
ನಿನಗೆ ಬದಕಿನಲಿ
ಶಾಯಿ ತಾಳೆಗರಿ ಬೆಳಕು ಎಲ್ಲಿಯದೆಂದು
ಅರಿತಿಹೆಯಾ ವಿದಗ್ಧ

ಹುಟ್ಟಿದಾರಭ್ಯ ಯಾರೂ ಜ್ಞಾನಿಗಳಲ್ಲ
ಎಂಬುದು ಸತ್ಯ
ಬೆಳದ ಪರಿಸರ ನಮ್ಮ ರೂಪಿಸೀತು
ತಿಳಿದಿಹೆಯಾ ವಿದಗ್ಧ

ಪ್ರತಿ ಜೀವಿಗೂ ಪರಿಸರದ ಉಚಿತ ಸೌಲಭ್ಯದ ಋಣವಿದೆ
ಋಣರಹಿತ ನೆಂದವನ ಹೆಸರ
ಕೇಳಿರುವೆಯಾ ವಿದಗ್ಧ

ಪ್ರಕೃತಿ ಸಂತಾನ ನಾವೆಲ್ಲಾ ಅಮ್ಮನ ಅರಿವಿದೆ ಅಪ್ಪನ ಖಬರಿಲ್ಲ
ಹೆತ್ತವರಿಗೆ ಹೆಗ್ಗಣಮುದ್ದು ಗಾದೆ
ನನಪಿದೆಯಾ ವಿದಗ್ಧ

ಅವಿದ್ಧನೋ! ವಿದಗ್ಧನೋ! ಎಲ್ಲರೂ
ಪರಿಸರಕೆ ಋಣವೇ
ಜ್ಞಾನಿಯಾದೊಡೆ ತೀರೀತೇ ಋಣ
ಹೇಳಬಲ್ಲೆಯಾ ವಿದಗ್ಧ

ಬುದ್ಧನೆಂಬ ಎಲ್ಲಬಲ್ಲವನೊಬ್ಬನಿದ್ದ.
ಕೇಳುವಂತಾಗು ಕೃಷ್ಣಾ .
ದೇವ ಮಗುಳ್ನಗೆಯಲಿಹನು ಎಂದ.
ಕಂಡಿರುವೆಯಾ ವಿದಗ್ಧ

*********

ವಿದಗ್ಧ : ಪಂಡಿತ
ವಾಗೀಶ : ವಾಗ್ಮಿ
ವಾಗ್ಜಾಲ: ಮಾತಿನ ಜಾಲ
ಅವಿದ್ಧ : ಕಿವಿ
ಚುಚ್ಚಿಸಿಕೊಳ್ಳದವ
( ಟೀಕೆ/ಸೂಚನೆಗೆ ಸ್ವಾಗತ)


ಬಾಗೇಪಲ್ಲಿ

About The Author

Leave a Reply

You cannot copy content of this page

Scroll to Top