ಕಾವ್ಯ ಸಂಗಾತಿ
ಹುಡುಕ ಹೊರಟೆ….
ಅದೇನೋ ತಳಮಳ
ಚಂದಿರನ ತಂಪು ಕೂಡ
ಕಂಗಳ ತಾಕುತ್ತಿಲ್ಲ
ಹೊತ್ತು ಮೂಡುವ ಮುನ್ನವೇ
ಹೊರಟೆನೆದ್ದು ಸದ್ದೂ ಮಾಡದೆ
ಒಂಟಿ ಕಾಲ ಪಯಣ
ಎಷ್ಟು ಕಠಿಣ,ಬೇಸರ
ಹೂವ ಹಾದಿಗೂ
ಕಲ್ಲು ಮುಳ್ಳಿನ ಸ್ಪರ್ಶ
ಆಸೆಯಾ ಗರಿಕೆ
ತುದಿ ಬೆಟ್ಟದಲ್ಲಿ
ಚಿಗುರೊಡೆದು ನಿಂತಿರಲು
ನನಗೂ ಪಾಲಿರಲೆಂದು
ನಾದದ ನದಿಯು
ಬಳುಕುತ್ತಾ ನಡೆದಿರಲು
ನಿನಗಾಗಿ ನಾನಿರುವೆ
ಎನುತ ನಗುತ
ಹಸಿರು ಹಬ್ಬಿರಲು
ಪ್ರವಾಸ ಹೊರಟೆ
ಬದುಕ ಹೋರಾಟಕ್ಕೆ
ನೆಮ್ಮದಿಯ ಹುಡುಕಾಟಕ್ಕೆ
ಹತ್ತಿ ಇಳಿದು, ಈಜಿ ಮುಳುಗಿ,
ತಬ್ಬಿದರೂ ಹಸಿರ,ಮನದೊಳಿಲ್ಲದ
ನೆಮ್ಮದಿಯ ಸುಳಿವೂ ಸಿಗಲಿಲ್ಲ
ಒಲವು