ನಿನ್ನ ನಿರೀಕ್ಷೆಯಲಿ

ಕಾವ್ಯಯಾನ

ನಿನ್ನ ನಿರೀಕ್ಷೆಯಲಿ

ಪ್ರೊ ರಾಜನಂದಾ ಘಾರ್ಗಿ

ನಿತ್ಯ ಬೆಳಕು ತರುವ
ಹೊಸ ನೇಸರ ನೀನು
ಭರವಸೆಯ ಹೊಂಕಿರಣ
ನೀ ಬರುವ ಹಾದಿಯಲಿ
ಜೀವಿಗಳಲಿ ತುಂಬುವೆ
ಹೊಸ ಚೈತನ್ಯ ಸಂಚಲನ
ಶಕ್ತಿಯ ಆಕರ ಸ್ವರೂಪದಿ
ಭುವಿಯನು ಆವರಿಸುವೆ
ಹೊಂಬಣ್ಣದಲಿ ಉದಯಿಸಿ
ಪ್ರಖರತೆಯಲ್ಲಿ ಚಲಿಸುವೆ
ಸಾಗರದ ಆಳಕ್ಕೆ ತಲುಪುತ್ತ
ಕಿರಣಗಳ ಪಸರಿಸುವೆ
ನಸು ಕೆಂಪಿನಲಿ ಇಳಿಯುತ್ತ
ಪಡುವಣದಲಿ ಸೇರುತ್ತ
ಕೈ ಬೀಸಿ ನಡೆಯುವೆ
ನಾಳೆ ಬರುವ ನಿನಗಾಗಿ
ಕನಸುಗಳ ಹೊತ್ತು ಕಾಯುವೆ
ನಿನ್ನ ಆಗಮನದ ನಿರೀಕ್ಷೆಯಲಿ


One thought on “ನಿನ್ನ ನಿರೀಕ್ಷೆಯಲಿ

Leave a Reply

Back To Top