ಕಾವ್ಯ ಸಂಗಾತಿ
ಸಹನೆಗೂ ಮಿತಿ
ಸುವಿಧಾ ಹಡಿನಬಾಳ
ನಿನ್ನದಲ್ಲದ ತಪ್ಪಿಗೆ ನೀ
ಸಹಿಸುವುದಾದರೂ ಎಷ್ಟು?
ಗಂಡನ ಅನುಮಾನದ ದೃಷ್ಟಿ
ತೃಪ್ತಿ ಯಾಗದಿದ್ದರೆ ಬೈಗುಳ ಥಳಿತ
ಮನೆಯವರ ತಾತ್ಸಾರದ ನುಡಿ
ಹೋಗಿ ಬರುವವರ ಕುಹಕದ ನೋಟ
ಅಸಹಾಯಕತೆಯ ಸುಳಿವು ಸಿಕ್ಕರೂ
ಬೆನ್ನ ಹಿಂದೆ ಬೀಳುವ ಕೀಚಕರ ಕಾಟ
ಒಬ್ಬಂಟಿಯಾಗಿ ಸಿಕ್ಕಿದರೆ ದೌರ್ಜನ್ಯ ಅತ್ಯಾಚಾರ!!
ಕೆಲಸದ ಸ್ಥಳದಲ್ಲಿ ಮೈಕೈ ಮುಟ್ಟಿದರೂ ಸುಮ್ಮನಿದ್ದು ಸಹಿಸಿಕೊಳ್ಳಲೇಬೇಕು ಇದೊಂಥರಾ ಅಡ್ಜಸ್ಟ್ಮೆಂಟ್!
ಪ್ರತಿರೋಧ ತೋರಿದರೆ
ಬಜಾರಿ ಜಾರಿಣಿ ಹೀಗೆ…
ಇಲ್ಲ ಸಲ್ಲದ ಆರೋಪ!
ನೋವುಣ್ಲಲೆಂದೇ ಹುಟ್ಟಿದವಳು ನೀನು
ಇಂತವನ್ನೆಲ್ಲ ಸಹಿಸಿಕಳ್ಳಲೇಬೇಕು
ಎಂಬ ಹಿತೋಪದೇಶ ಬೇರೆ
ಹೆತ್ತವರಿಂದಲೇ!
ಇಷ್ಟೆಲ್ಲಾ ಸಹಿಸಿಯೂ ನಿನ್ನ
ಸಹನೆಗೆ ಸಿಕ್ಕ ಬೆಲೆಯಾದರೂ ಏನು?
ನಿನ್ನ ನೋವು ಕಡಿಮೆಯಾಯಿತೇನು?
ಜೀವನಪೂರ್ತಿ ಇನ್ನೊಬ್ಬರಿಗಾಗಿ
ಬದುಕಿದ್ದೇ ಆಯ್ತು
ನಿನ್ನೆ ಸ್ವಂತಿಕೆ ಬದುಕಿಗೆಲ್ಲಿ ಅಸ್ತಿತ್ವ?
ಪಾತರಗಿತ್ತಿಗೂ ಸ್ವಾತಂತ್ರ್ಯವಿದೆ
ನಿನಗಿಲ್ಲ ನಿನ್ನದೇ ನೆಲೆ ಬೆಲೆ
ಸಾಕಿನ್ನು ಸಹನೆ ಇನ್ನು
ಧ್ವನಿ ಎತ್ತಲೇ ಬೇಕು
ಪ್ರೀತಿಯಿಂದಾಗದಿದ್ದರೆ
ಪ್ರತಿಭಟಿಸಲೇಬೇಕು
ನಿನ್ನತನವ ಕಾಯ್ದು ಕೊಳ್ಳಲೇಬೇಕು
ಅವಲಂಬನೆ ನಕಾರವ ಬಿಟ್ಟು
ಬದುಕುವ ಕಲೆಯ ಕಲಿಯಲೇಬೇಕು…..
Lovely