ಕಾವ್ಯ ಸಂಗಾತಿ
ಕಡಲು – ಮುಗಿಲು
ಶ್ರೀವಲ್ಲಿ ಮಂಜುನಾಥ
ನೀನೊಂದು ನೀಲ್ಗಡಲು
ನಾನೋ ಕರಿ ಮುಗಿಲು
ನಮ್ಮ ಸಮಾಗಮಕಾಗಿ
ಕಾದು ನಾ ಕುಳಿತಿಹೆನು .
ನೀ ಕಳುಹಿದೊಂದೊಂದು
ಹನಿಹನಿಗಳೊಂದಾಗಿ
ಕಪ್ಪನೆಯ ಮುಗಿಲಾಗಿ
ನಾ ಬಾಗಿ ನಿಂದಿಹೆನು.
ನಿನ್ನ ಅಲೆಗಳ ದನಿಗೆ
ನಾ ಮಾರುತ್ತರವಿತ್ತ
ಗುಡುಗಿನ ದನಿಯು
ನಿನಗೀಗ ತಲುಪಿತೆ ?
ಕ್ಷಣಗಳನ್ನೆಣಿಸುತಿರು
ನಾ ಬರುವೆ ಧುಮ್ಮಿಕ್ಕಿ.
ನಿನ್ನೊಡಲ ತುಂಬೆಲ್ಲ
ಮುಗಿಲಲೆಲಲೆಯಾಗಿ.