ಡಾ ಮೈತ್ರೇಯಿಣಿ ಕವಿತೆ ಬುದ್ದನಿಲ್ಲದ ಬದುಕು…

ಕಾವ್ಯಸಂಗಾತಿ

ಬುದ್ದನಿಲ್ಲದ ಬದುಕು

ಡಾ ಮೈತ್ರೇಯಿಣಿ ಗದಿಗೆಪ್ಪಗೌಡರ

ಅವನರಿವಿನ ಯರವಲಿನ ಋಣಭಾರ ಹೊತ್ತಿದ್ದೇನೆ…
ತೀರಿಸಲಾರದ ಸಾಲವಿದು…

ಅಲ್ಲಮನ ಶಬ್ದ ಸ್ಪೋಟಕ್ಕೆ ಮಾತು ಕಳೆದುಕೊಂಡಿದ್ದೇನೆ… ಭರಿಸಲಾರದ ನೋವಿದು…

ನನ್ನ ಆವರಿದ ಪ್ರೇಮೋನ್ನತಿಗೆ
ಉಸಿರುವುದ ಮರೆತಿದ್ದೇನೆ…
ಹೆಸರಿಸಲಾರದ ಬ್ರೂಣವಿದು…

ಎದೆಯ ಖಾಲಿ ಕೊಣೆಗೆ ನಿನ್ಹೆಸರ
ನಾಮಫಲಕ ಹಚ್ಚಿದ್ದೇನೆ
ಅಳಿಸಲಾರದ ನಂಟಿದು…

ಅಕ್ಕನ ಹುಡುಕಾಟವಿನ್ನು ಮುಗಿದಿಲ್ಲ
ದಕ್ಕದ ಮಲ್ಲನನ್ನೇ ನೆಚ್ಚಿದ್ದೇನೆ
ಅಳಿಸಲಾರದ ಮೋಹವಿದು..

ಬೆಳಕನರಿಸುವ ಧಾವಂತಕೆ
ಬೋಧಿಯಡೆಗೆ ಸಾಗಿದ್ದೇನೆ
ಬುದ್ದನಿಲ್ಲದ ಬದುಕಿದು…..


3 thoughts on “ಡಾ ಮೈತ್ರೇಯಿಣಿ ಕವಿತೆ ಬುದ್ದನಿಲ್ಲದ ಬದುಕು…

  1. ಅನುಭವ ದ ಸಾರವನ್ನೆಲ್ಲ ಶಬ್ದಗಳಿಗೆ ಜೀವ ತುಂಬಿಕಲಿಸಿದ್ದೀರಿ, ಮತ್ತೆ ಮತ್ತೆ ಕಾವ್ಯ ದಲ್ಲಿ ಮುಳುಗುವ ಆಸೆ.

    1. ಕವಿತೆ ಚೆನ್ನಾಗಿದೆ ಮ್ಯಾಡಮ್.
      — ಗಣಪತಿ ಗೌಡ,ಅಂಕೋಲಾ

Leave a Reply

Back To Top