ಶಿಶುಗೀತೆ
ಜಯಲಕ್ಷ್ಮಿ ಎಂ.ಬಿ
ತುಂಟ ಪುಟ್ಟ ಊಟ ಬಿಟ್ಟು ಅಳುತ ಲಿರುವೆಯ
ಅಮ್ಮ ಬರಲು ಕೈಯ ಹಿಡಿದು ಹೊರಗೆ ಬರುವೆಯ
ಬಾನಿನಲ್ಲಿ ಚಂದಮಾಮ ನಗುತ ಲಿರುವೆಯ
ಪುಟ್ಟನೊಡನೆ ಆಡಲೆಂದು ಓಡಿ
ಬರುವೆಯ
ಕತ್ತಲನ್ನು ಹೊರಗೆ ದೂಡಿ ಹೊಳಪು ತರುವೆಯ
ಬಾನಿನಿಂದ ಬೆಳಕು ಚೆಲ್ಲಿ ಹೊಳೆಯು ತಿರುವೆಯ
ಮುಗಿಲ ತುದಿಯ ಏರಿ ಬಂದು ಇಣುಕು ತಿರುವೆಯ
ಪುಟ್ಟನನ್ನು ನೋಡಲೆಂದು ಜೊತೆಗೆ ಬರುವೆಯ
ಮೋಡ ಬರಲು ಅಡಗಿ ಕುಳಿತು ಕಾಣದಾದೆಯ
ಚುಕ್ಕಿಯೊಡನೆ ತಾನು ಸೇರಿ ನಲಿಯು ತಿರುವೆಯ
ತಂಪು ಬೆಳಕ ಬೀರಲೆಂದು ಮೂಡಿ ಬರುವೆಯ
ನನಗು ನಿನಗು ಬಹಳ ನಂಟು ನಿಜವ ತಿಳಿದೆಯ
ಚಂದಮಾಮ ತಿಂಡಿ ತಿನಲು ಜೊತೆಗೆ ಬರುವೆಯ
ನನ್ನ ನೋಡಿ ನಾಚಿ ನೀನು ಮರೆಗೆ ಸರಿವೆಯ
ಅಮ್ಮ ಕೊಡುವ ತುತ್ತು ಬಹಳ ಸವಿಯು ಬಲ್ಲೆಯ
ತಿಂಡಿ ನೀಡಿ ಹಾಲು ಕೊಡುವೆ ಸನಿಹ ಬರುವೆಯ