ಕಾವ್ಯಸಂಗಾತಿ
ಲಕ್ಷ್ಮೀದೇವಿ ಪತ್ತಾರ
ಪತಿಯ ಬಾಳಿನ ಜ್ಯೋತಿ ಸತಿ
ಪತಿಯ ಬಾಳಿನ ಜ್ಯೋತಿ ಸತಿ
ಶ್ರೀರಾಮನ ಧರ್ಮದ ದಾಳವಾದವಳು ಸೀತೆ
ಪಾಂಡವರ ಒಗ್ಗಟ್ಟಿಗೆ ಉರುವಲಾವದಳು ಕೃಷ್ಣೆ
ಪ್ರತಿಕಾರದ ಜ್ವಾಲೆಯಲ್ಲಿ ಭಸ್ಮವಾದವಳು ಗಾಂಧಾರಿ
ಅದು ಅಂದಿನ ಕಾಲದ ಮಾತಾಯ್ತು
ಈ ಕಲಿಯುಗದ ಕಾಲದಲ್ಲಿ
ಬುದ್ಧನ ಪರಿತ್ಯಾಗದ ಹೋಮ ಕುಂಡದ ಹವ್ವಿಸ್ಸಾದವಳು ಯಶೋಧರೆ
ಗಾಂಧೀಜಿಯ ಸತ್ಯ ಶೋಧನೆಯ ಹೋರಾಟದ ಚರಕದಲಿ ನೂಲಾದಳು ಕಸ್ತೂರಿ ಬಾಯಿ
ಹೀಗೆಯೇ ಕಾಲ ಯಾವುದೇ ಇರಲಿ ಯಾವುದೇ ಪುರುಷನಾಗಿರಲಿ
ಸಾಮಾನ್ಯನೂ, ಅಸಾಮಾನ್ಯನೂ
ಪತ್ನಿಯ ಭಾವದೀಪ್ತಿ ಬತ್ತಿದರೂ ಚಿಂತೆಯಿಲ್ಲ
ತನ್ನ ಬಾಣಕ್ಕೆ ಅವಳಾಗಬೇಕು ಗುರಿ
ಪತಿ ಸುತರ ಕೀರ್ತಿ ಶಿಖರಕ್ಕೆ, ಮೆಟ್ಟಲಾಗುವಳು ನಾರಿ
ಲಕ್ಷ್ಮೀದೇವಿ ಪತ್ತಾರ,ಅಧ್ಯಾಪಕಿ,
ನಾರಿಯಾ ವಿವಿಧ ನೆಲೆಗಳನ್ನ ಕವಿತೆ ಆನಾವರಣಗೊಳಿಸಿದೆ….